ರಾಜ್ಯಪಾಲ

ವಂದೇ ಮಾತರಂ ಗೀತೆ ಎರಡು ಚರಣಕ್ಕೆ ಸೀಮಿತ: CM ಶಿವಕುಮಾರ್'ಗೆ ರಾಜ್ಯಪಾಲ ಪತ್ರ; ಆದೇಶ ಮರುಪರಿಶೀಲನೆಗೆ ಸೂಚನೆ..!
ವಂದೇ ಮಾತರಂ’ನ ಅಧಿಕೃತ ಆವೃತ್ತಿಯನ್ನು ಕೇಂದ್ರ ಗೃಹ ಸಚಿವಾಲಯ ನಿಗದಿಪಡಿಸಿದ್ದು, ರಾಷ್ಟ್ರೀಯ ಗೀತೆ ಹಾಗೂ ರಾಷ್ಟ್ರಗಾನಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ರಾಜ್ಯ ಸರ್ಕಾರಗಳೂ ಈ ಮಾರ್ಗಸೂಚಿಗಳನ್ನು ಪಾಲಿಸಬೇಕು.

ಅನುಮತಿ ಪಡೆಯದೆ 4 ಬಾರಿ ವಿದೇಶ ಪ್ರವಾಸ ಆರೋಪ: ಕುವೆಂಪು ವಿವಿ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿಗೆ ಶೋಕಾಸ್ ನೋಟಿಸ್ ಜಾರಿ..!
ಶರತ್ ಅನಂತಮೂರ್ತಿ ಅವರು ಮೊದಲ ಬಾರಿಗೆ 19-06-2024ರಿಂದ 11-07-2024ರವರೆಗೆ ಸುಮಾರು 23 ದಿನಗಳ ಕಾಲ ಕೆನಡಾಕ್ಕೆ ತೆರಳಿದ್ದರು.

Park Bill ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ; ಸ್ಪಷ್ಟನೆ ಕೋರಿ ಸರ್ಕಾರಕ್ಕೆ ವಾಪಸ್..!
ಮಸೂದೆಯ ಪ್ರಸ್ತುತ ರೂಪವು ಪರಿಸರದ ದೃಷ್ಟಿಯಿಂದ ಮಹತ್ವದ ಸಾರ್ವಜನಿಕ ಆಸ್ತಿಗಳನ್ನು ಸಮುದಾಯದ ಹಿತಕ್ಕಾಗಿ ಸಂರಕ್ಷಿಸಬೇಕೆಂಬ ಮೂಲ ತತ್ವದಿಂದ ಆತಂಕಕಾರಿ ರೀತಿಯಲ್ಲಿ ದೂರ ಸರಿದಿದೆ.

ತೃತೀಯ ಭಾಷೆ ಮೇಲಿನ ಪ್ರೇಮವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಉಕ್ಕಿ ಹರಿಸಿ, ನಿಮ್ಮ ಅಧಿಕಪ್ರಸಂಗವನ್ನ ಕರ್ನಾಟಕ ಒಪ್ಪಲ್ಲ: ರಾಜ್ಯಪಾಲರ ವಿರುದ್ಧ ಕರವೇ ಆಕ್ರೋಶ
ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಲ್ಲಿ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ, ನಿಮಗೆ ಆ ಅಧಿಕಾರವನ್ನು ಕರ್ನಾಟಕದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆಯಾಗಿದ್ದರೆ ಕೇಳಿ, ವ್ಯವಸ್ಥೆ ಮಾಡಿಕೊಡೋಣ.

ಎಸ್ಸಿ ಒಳ ಮೀಸಲಾತಿ ಮಸೂದೆ: ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಮನವಿ
ಮಂಗಳವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ನಿಯೋಗವು, ಒಳ ಮೀಸಲಾತಿ ಮಸೂದೆಗೆ ಅನುಮೋದನೆ ಕೋರಿ ಮನವಿ ಪತ್ರ ಸಲ್ಲಿಸಿತು.

ರಾಜ್ಯಪಾಲರ ಸಹಿ ನಕಲು ಮಾಡಿ ವಂಚನೆ: ಪ್ರಕರಣ ದಾಖಲು
ರಾಜ್ಯಪಾಲರ ಹೆಸರಿನ ಲೆಟರ್‌ಹೆಡ್ ಬಳಸಿರುವ ಸುಜಯೇಂದ್ರ, ರಾಜ್ಯಪಾಲರ ಸಹಿ ನಕಲು ಮಾಡಿ ವೆಲ್ಲೂರ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಆದೇಶ ಹೊರಡಿಸಿದ್ದಾನೆ.

Hate Speech Bill: ಕಾಯ್ದೆ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಹರಣ ಸರಿಯಲ್ಲ; ಅಂಕಿತಕ್ಕೆ ರಾಜ್ಯಪಾಲ ನಕಾರ, ಮಸೂದೆ ರಾಷ್ಟ್ರಪತಿ ಅಂಗಳಕ್ಕೆ..!
ಸಂವಿಧಾನಬದ್ಧತೆ, ಕಾನೂನು ವ್ಯಾಪ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮಸೂದೆಯ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಆಮಿಷಕ್ಕೊಳಗಾಗದೆ, ಮುಕ್ತ-ನ್ಯಾಯಯುತವಾಗಿ ಮತ ಚಲಾಯಿಸಿ: ಜನತೆಗೆ ರಾಜ್ಯಪಾಲ ಕರೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಪ್ರಾಮುಖ್ಯತೆ, ಘನತೆ ಮತ್ತು ಮಹತ್ವವು ಮತದಾನ ಪ್ರಕ್ರಿಯೆಯ ಮೂಲಕ ಬಲಗೊಳ್ಳುತ್ತದೆ. ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ.

77ನೇ ಗಣರಾಜ್ಯೋತ್ಸವ: ರಾಜ್ಯ ಸರ್ಕಾರ ಸಿದ್ದಪಡಿಸಿಕೊಟ್ಟ ಭಾಷಣ ಯಥಾವತ್ ಓದಿದ ರಾಜ್ಯಪಾಲ ಗೆಹ್ಲೋಟ್..!
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.

