ರವಿಶಾಸ್ತ್ರೀ

ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿಕೆ: ಎರಡು ವರ್ಷ ಗುತ್ತಿಗೆ ವಿಸ್ತರಣೆ
ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಪುನರ್ ಆಯ್ಕೆಯಾಗಿದ್ದಾರೆ. ಮಾಜಿ ಆಟಗಾರ ಕಪೀಲ್ ದೇವ್, ಅಂಶುಮನ್ ಗಾಯಕ್ ವಾಡ್ ಮತ್ತು ಶಾಂತ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಇಂದು ಅವರ ಗುತ್ತಿಗೆ ಅವಧಿಯನ್ನು 2021ರವರೆಗೂ ವಿಸ್ತರಿಸಿದೆ.

ಯುವತಿಯರ ಜೊತೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಪೋಸ್, ನೆಟಿಗರಿಂದ ಟ್ರೋಲ್!
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಇನ್ನೂ ಒಂದು ಪಂದ್ಯವನ್ನಾಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ನಾಳೆ ಮೊದಲ ಪಂದ್ಯ ನಡೆಯಲಿದೆ. ಆದರೆ, ಅದಕ್ಕೂ ಮುಂಚಿತವಾಗಿ ಟೀಂ ಇಂಡಿಯಾ ತರಬೇತುದಾರ ರಸಿಕತೆ ವಿಷಯದಿಂದಾಗಿ ಟ್ರೋಲ್ ಗೆ ತುತ್ತಾಗಿದ್ದಾರೆ.

ಪ್ರವಾಸ ಪಂದ್ಯಗಳಿಗೆ ಕುಲ್ದೀಪ್ ಯಾದವ್ ನಮ್ಮ ನಂ.1 ಸ್ಪಿನ್ನರ್: ರವಿ ಶಾಸ್ತ್ರಿ ಪ್ಲಾನ್ ಬದಲು?
ಸಿಡ್ನಿಯಲ್ಲಿ ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದ ಕುಲ್ದೀಪ್ ಯಾದವ್ ಪ್ರವಾಸ ಪಂದ್ಯಗಳಿಗೆ ನಂಬರ್ 1 ಸ್ಪಿನ್ನರ್ ಎಂದು ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರೀ ಹೇಳಿದ್ದಾರೆ.

ರೋಹಿತ್ ಶರ್ಮಾ ಶಾಂತ ಗುಣದ ಪ್ರಭಾವ ಹೊಂದಿದ್ದಾರೆ : ರವಿ ಶಾಸ್ತ್ರಿ
ಶುಕ್ರವಾರ ಏಷ್ಯಾ ಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತನ್ನ ಸಹ ಆಟಗಾರರೊಂದಿಗೆ ಶಾಂತ ಗುಣದಿಂದ ವರ್ತಿಸಿದ್ದರು . ಇದು ಪಂದ್ಯ ಗೆಲ್ಲಲು ಮತ್ತೊಂದು ಕಾರಣವಾಯಿತು ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಹೇಳಿದ್ದಾರೆ.

ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ: ರವಿ ಶಾಸ್ತ್ರೀ
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡುತ್ತಿದ್ದರೂ ಈ ಹಿಂದಿನ 15-20 ವರ್ಷಗಳ ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಸಮರ್ಥಿಸಿಕೊಂಡಿದ್ದಾರೆ.

