ಕ್ರಿಕೆಟ್

ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ: ರವಿ ಶಾಸ್ತ್ರೀ

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡುತ್ತಿದ್ದರೂ ಈ ಹಿಂದಿನ 15-20 ವರ್ಷಗಳ ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಸಮರ್ಥಿಸಿಕೊಂಡಿದ್ದಾರೆ.

ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ: ರವಿ ಶಾಸ್ತ್ರೀ
ರವಿಶಾಸ್ತ್ರೀ, ದೇವಾಂಗ್ ಗಾಂಧಿ, ವಿರಾಟ್ ಕೊಹ್ಲಿ
Published On :

ಲಂಡನ್ : ಇಂಗ್ಲೆಂಡ್ ವಿರುದ್ದದ  ಟೆಸ್ಟ್ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ನೀಡುತ್ತಿದ್ದರೂ ಈ ಹಿಂದಿನ 15-20 ವರ್ಷಗಳ ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಸಮರ್ಥಿಸಿಕೊಂಡಿದ್ದಾರೆ.

ಸೌತಾಂಪ್ಟನ್ ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 62 ರನ್ ಗಳ  ಅಂತರದಿಂದ ಸೋಲಿಗೆ ಶರಣಾಗಿದ್ದು, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-3 ಅಂಕಗಳಿಂದ  ಹಿಂದೆ ಬಿದಿದ್ದೆ.

ಕಳೆದ ಮೂರು ವರ್ಷಗಳನ್ನ ಗಮನಿಸಿದ್ದರೆ ವಿದೇಶದಲ್ಲಿ ನಾವು 9 ಪಂದ್ಯಗಳನ್ನು ಗೆದ್ದಿದ್ದೇವೆ. ವೆಸ್ಟ್ ಇಂಡೀಸ್, ಮತ್ತು ಶ್ರೀಲಂಕಾದ ವಿರುದ್ಧ ಮೂರು ಸರಣಿಗಳಲ್ಲಿ ಗೆಲುವು ಸಾಧಿಸಿರುವುದಾಗಿ ರವಿಶಾಸ್ತ್ರೀ ಹೇಳಿದ್ದಾರೆ.

ಕಡಿಮೆ ಅವಧಿಯಲ್ಲಿ ಹೆಚ್ಚು ರನ್  ಕಲೆಹಾಕಿದ ತಂಡವನ್ನು ಕಳೆದ 15-20 ವರ್ಷಗಳ ಅವಧಿಯಲ್ಲಿ ನೋಡಿಯೇ ಇಲ್ಲ. ಈ ಸರಣಿಯಲ್ಲಿ ಉತ್ತಮ ಆಟಗಾರರು ಆಡಿದ್ದಾರೆ. ಆದರೆ, ಸೋಲು ಮಾನಸಿಕ ಒತ್ತಡವನ್ನಷ್ಟೇ  ಹೆಚ್ಚಿಸಿದೆ.  ಏಕದಿನದಲ್ಲಿ ನೀವು ನಂಬಿಕೆ ಇಡುತ್ತೀರಾ ಎಂದು ಅವರು ಹೇಳಿದ್ದಾರೆ.

ಸೌತಾಂಪ್ಟನ್  ಟೆಸ್ಟ್ ಪಂದ್ಯ ಸೋತ ನಂತರ ವಿರಾಟ್ ಕೊಹ್ಲಿ ಮಾನಸಿಕ  ಒತ್ತಡಕ್ಕೊಳಗಾಗಿದ್ದಾರೆ. ಅವರನ್ನು ಮಾನಸಿಕವಾಗಿ ಎದ್ದು ನಿಲ್ಲಿಸಬೇಕಾದ ಅಗತ್ಯವಿದೆ ಎಂದು ರವಿಶಾಸ್ತ್ರೀ ಒತ್ತಿ ಹೇಳಿದ್ದು, ಎಲ್ಲಿ ತಪ್ಪಾಗಿದೆಯೋ ಅಲ್ಲಿ ಸರಿಪಡಿಸಿಕೊಳ್ಳಲು ಪ್ರಯತ್ನಿಸಲಾಗುವುದು . ನಾಳಿನ ಅಂತಿಮ ಪಂದ್ಯ ಗೆಲುವಿನತ್ತಾ  ಗಮನಹರಿಸುವುದಾಗಿ ಹೇಳಿದ್ದಾರೆ.

ಮೊಹಿನ್ ಆಲಿ ಆರ್. ಅಶ್ವಿನ್ ಗಿಂತ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಅಂತಿಮ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಅಶ್ವಿನ್ ಆಡುವ ಸಾಧ್ಯತೆ ಕಡಿಮೆ ಎಂದು ರವಿಶಾಸ್ತ್ರೀ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.