ಪ್ರವಾಸ ಪಂದ್ಯಗಳಿಗೆ ಕುಲ್ದೀಪ್ ಯಾದವ್ ನಮ್ಮ ನಂ.1 ಸ್ಪಿನ್ನರ್: ರವಿ ಶಾಸ್ತ್ರಿ ಪ್ಲಾನ್ ಬದಲು?
ಸಿಡ್ನಿಯಲ್ಲಿ ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದ ಕುಲ್ದೀಪ್ ಯಾದವ್ ಪ್ರವಾಸ ಪಂದ್ಯಗಳಿಗೆ ನಂಬರ್ 1 ಸ್ಪಿನ್ನರ್ ಎಂದು ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರೀ ಹೇಳಿದ್ದಾರೆ.

ವೆಲ್ಲಿಂಗ್ಟನ್: ಸಿಡ್ನಿಯಲ್ಲಿ ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದ ಕುಲ್ದೀಪ್ ಯಾದವ್ ಪ್ರವಾಸ ಪಂದ್ಯಗಳಿಗೆ ನಂಬರ್ 1 ಸ್ಪಿನ್ನರ್ ಎಂದು ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರೀ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ರಿಸ್ಟ್ ಸ್ಪಿನ್ನರ್ ಪ್ರಸಿದ್ಧಿಯಾಗುತ್ತಿದ್ದು, ಸ್ವದೇಶದಲ್ಲಿ ನಡೆಯುವ ಪಂದ್ಯಗಳಿಗೆ ನಂಬರ್ 1 ಸ್ಪೀನ್ನರ್ ಆಗಿರುವ ಜಡೇಜಾ ಹಾಗೂ ಅಶ್ವಿನ್ ಅವರನ್ನು ಕುಲ್ದೀಪ್ ಹಿಂದಿಕ್ಕಿದ್ದಾರೆ ಎಂಬುದನ್ನು ಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.
ಕುಲ್ದೀಪ್ ಯಾದವ್ ಪ್ರವಾಸ ಪಂದ್ಯಗಳಲ್ಲಿ ಐದು ವಿಕೆಟ್ ಗಳಿಸಿದ್ದಾರೆ. ಹಾಗಾಗೀ ಅವರು ವಿದೇಶದಲ್ಲಿ ನಡೆಯುವ ಪಂದ್ಯಗಳಿಗೆ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಮುಂದೆ ಹೋಗಿ, ನಾವು ಒಂದು ಸ್ಪಿನ್ನರ್ ನಿಂದ ಆಡಬೇಕಾದ್ದರೆ, ಕುಲ್ದೀಪ್ ಅವರನ್ನೇ ಆಯ್ಕೆ ಮಾಡುವುದಾಗಿ ಹೇಳಿದ್ದಾರೆ.
2018ರಲ್ಲಿ ಅಶ್ವಿನ್ ಅವರ ಕಳಪೆ ದೈಹಿಕ ಪಿಟ್ ನೆಸ್ ಕುರಿತು ಮಾತಾಡಿದ ರವಿಶಾಸ್ತ್ರೀ, ಪ್ರತಿಯೊಬ್ಬರಿಗೂ ಒಂದು ಕಾಲ ಇರುತ್ತದೆ. ಆದರೆ, ಈಗ ಪ್ರವಾಸಿ ಪಂದ್ಯಗಳಿಗೆ ಕುಲ್ದೀಪ್ ನಂಬರ್ 1 ಆಗಿದ್ದಾರೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


