ಯೋಗಿ ಬಾಬು

ಕಾಲಿವುಡ್‌ಗೆ ನಟ ರೂಪೇಶ್ ಶೆಟ್ಟಿ ಪದಾರ್ಪಣೆ; ಹಾಸ್ಯನಟ ಯೋಗಿ ಬಾಬು ಜೊತೆಗೆ 'ಸನ್ನಿಧಾನಂ ಪಿಒ' ಚಿತ್ರದಲ್ಲಿ ನಟನೆ
ಕನ್ನಡ, ತುಳು, ಕೊಂಕಣಿ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ನಟ ರೂಪೇಶ್ ಶೆಟ್ಟಿ ಇದೀಗ ತಮಿಳು ಚಿತ್ರರಂಗದಲ್ಲಿಯೂ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಖ್ಯಾತ ಹಾಸ್ಯನಟ ಯೋಗಿ ಬಾಬು ನಟನೆಯ ಸನ್ನಿಧಾನಂ ಪಿಒ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ.

ಯೋಗಿ ಬಾಬು ನಟನೆಯ ತಮಿಳು ಚಿತ್ರಕ್ಕೆ ಸಾಧು ಕೋಕಿಲಾ ಪುತ್ರ ಸುರಾಗ್ ನಿರ್ದೇಶನ!
ಕಾಸೇಧಾನ್ ಕಡವುಲದಾ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಯೋಗಿ ಬಾಬು ಅವರು ತಮ್ಮ ಮುಂದಿನ ಚಿತ್ರಕ್ಕೆ ನಾಯಕರಾಗಿ ಸಹಿ ಹಾಕಿದ್ದಾರೆ. ಶಿವಾರ್ಜುನ ಮತ್ತು ಅತಿರಥ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕನ್ನಡದ ಸಂಯೋಜಕ ಸುರಾಗ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ಬಹುಭಾಷಾ ಚಿತ್ರದಲ್ಲಿ ಒಂದಾದ ಯೋಗಿ ಬಾಬು ಹಾಗೂ ಕಾಂತಾರ ನಟ ಪ್ರಮೋದ್ ಶೆಟ್ಟಿ!
ತಮಿಳಿನ ಜನಪ್ರಿಯ ನಟ ಯೋಗಿ ಬಾಬು ಮತ್ತು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಬಹುಭಾಷಾ ಚಿತ್ರವೊಂದರಲ್ಲಿ ಒಂದಾಗಿದ್ದಾರೆ.

ಭಜರಂಗಿ 2 ಮೂಲಕ ಯೋಗಿ ಬಾಬು ಕನ್ನಡಕ್ಕೆ ಪಾದಾರ್ಪಣೆ?
ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ಕಾಕ್ ಟೇಲ್ ಸಿನೆಮಾದಲ್ಲಿ ಕಾಣಿಸಿಕೊಂಡ ಯೋಗಿ ಬಾಬು ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿದ್ದಾರೆ. ಅವರು ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ಬೈಕ್ ಮೇಲೆ 'ಕಿರಿಕ್' ನಟಿ ಸಂಯುಕ್ತ ಹೆಗ್ಡೆ ಲಿಪ್ ಲಾಕ್, ವಿಡಿಯೋ ವೈರಲ್!
ಕಿಸ್ಸಿಂಗ್ ಸೀನ್ ಇದೆ ಅಂತ ಕನ್ನಡದ ಚಿತ್ರಕ್ಕೆ ಮುಖ ತಿರುಗಿಸಿದ್ದ ಕಿರಿಕ್ ಪಾರ್ಟಿ ನಟಿ ಸಂಯುಕ್ತ ಹೆಗ್ಡೆ ಇದೀಗ ತಮಿಳು ಚಿತ್ರವೊಂದರಲ್ಲಿ ಲಿಪ್ ಲಾಕ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

