ಸಿನಿಮಾ ಸುದ್ದಿ

ಯೋಗಿ ಬಾಬು ನಟನೆಯ ತಮಿಳು ಚಿತ್ರಕ್ಕೆ ಸಾಧು ಕೋಕಿಲಾ ಪುತ್ರ ಸುರಾಗ್ ನಿರ್ದೇಶನ!

ಕಾಸೇಧಾನ್ ಕಡವುಲದಾ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಯೋಗಿ ಬಾಬು ಅವರು ತಮ್ಮ ಮುಂದಿನ ಚಿತ್ರಕ್ಕೆ ನಾಯಕರಾಗಿ ಸಹಿ ಹಾಕಿದ್ದಾರೆ. ಶಿವಾರ್ಜುನ ಮತ್ತು ಅತಿರಥ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕನ್ನಡದ ಸಂಯೋಜಕ ಸುರಾಗ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.

ಯೋಗಿ ಬಾಬು ನಟನೆಯ ತಮಿಳು ಚಿತ್ರಕ್ಕೆ ಸಾಧು ಕೋಕಿಲಾ ಪುತ್ರ ಸುರಾಗ್ ನಿರ್ದೇಶನ!
ಸುರಾಗ್ - ಯೋಗಿ ಬಾಬು
Published On :

ಕಾಸೇಧಾನ್ ಕಡವುಲದಾ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಯೋಗಿ ಬಾಬು ಅವರು ತಮ್ಮ ಮುಂದಿನ ಚಿತ್ರಕ್ಕೆ ನಾಯಕರಾಗಿ ಸಹಿ ಹಾಕಿದ್ದಾರೆ. ಶಿವಾರ್ಜುನ ಮತ್ತು ಅತಿರಥ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕನ್ನಡದ ಸಂಯೋಜಕ ಸುರಾಗ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಸದ್ಯ ತಮಿಳಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಬೇರೆ ಭಾಷೆಗಳಿಗೆ ಡಬ್ ಆಗಲಿದೆ.

ಸುರಾಗ್ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ, ಉಪ್ಪಿ 2 ನಲ್ಲಿ ಉಪೇಂದ್ರ ಅವರ ಅಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಗಮನಾರ್ಹವಾಗಿ, ಈ ಯುವ ಪ್ರತಿಭೆ ಕನ್ನಡದ ಜನಪ್ರಿಯ ಸಂಗೀತ ಸಂಯೋಜಕ, ನಟ ಮತ್ತು ನಿರ್ದೇಶಕ ಸಾಧು ಕೋಕಿಲಾ ಅವರ ಮಗ.

ಕಾಮಿಕಲ್ ಥ್ರಿಲ್ಲರ್‌ನ ಚಿತ್ರೀಕರಣ ಪ್ರಾರಂಭವಾಗಿದ್ದು, ಅವರು ಒಂದು ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಯೋಗಿ ಬಾಬು ಅವರ ಸಿನಿಮಾಗೆ ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಬಗ್ಗೆ ಮಾತನಾಡುವ ಸುರಾಗ್, 'ಯೋಗಿ ಸರ್ ಮತ್ತು ನಾನು ಸುಮಾರು ಒಂದು ವರ್ಷದಿಂದ ಮಾತುಕತೆ ನಡೆಸುತ್ತಿದ್ದೆವು. ಇದೀಗ ಅಂತಿಮವಾಗಿ ಸಿನಿಮಾ ಸೆಟ್ಟೇರಿದೆ. ನಾನು 10 ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ ಮತ್ತು ಮುಂದಿನ ಶೆಡ್ಯೂಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ' ಎನ್ನುತ್ತಾರೆ.

ಕನ್ನಡದ ನಟರಾದ ಉಮಾಶ್ರೀ ಮತ್ತು ಅವಿನಾಶ್ ಕೂಡ ನಟಿಸಿರುವ ಈ ಚಿತ್ರಕ್ಕೆ ಸಾಧು ಕೋಕಿಲಾ ಅವರ ಸಂಗೀತವಿದೆ. ಸುರಾಗ್ ಅವರ ಹೋಮ್ ಬ್ಯಾನರ್, ಲೂಪ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಿಸಲಾದ ಈ ಯೋಜನೆಯು ಯೋಗಿ ಬಾಬು ಅವರೊಂದಿಗೆ ಇತರ ದಕ್ಷಿಣ ಭಾರತದ ಭಾಷೆಗಳಿಂದ ಇಬ್ಬರು ನಾಯಕ ನಟರನ್ನು ಆಯ್ಕೆಮಾಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.