ಸಿನಿಮಾ ಸುದ್ದಿ

ಕಾಲಿವುಡ್‌ಗೆ ನಟ ರೂಪೇಶ್ ಶೆಟ್ಟಿ ಪದಾರ್ಪಣೆ; ಹಾಸ್ಯನಟ ಯೋಗಿ ಬಾಬು ಜೊತೆಗೆ 'ಸನ್ನಿಧಾನಂ ಪಿಒ' ಚಿತ್ರದಲ್ಲಿ ನಟನೆ

ಕನ್ನಡ, ತುಳು, ಕೊಂಕಣಿ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ನಟ ರೂಪೇಶ್‌ ಶೆಟ್ಟಿ ಇದೀಗ ತಮಿಳು ಚಿತ್ರರಂಗದಲ್ಲಿಯೂ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಖ್ಯಾತ ಹಾಸ್ಯನಟ ಯೋಗಿ ಬಾಬು ನಟನೆಯ ಸನ್ನಿಧಾನಂ ಪಿಒ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರೂಪೇಶ್‌ ಶೆಟ್ಟಿ ನಟಿಸುತ್ತಿದ್ದಾರೆ.

ಕಾಲಿವುಡ್‌ಗೆ ನಟ ರೂಪೇಶ್ ಶೆಟ್ಟಿ ಪದಾರ್ಪಣೆ; ಹಾಸ್ಯನಟ ಯೋಗಿ ಬಾಬು ಜೊತೆಗೆ 'ಸನ್ನಿಧಾನಂ ಪಿಒ' ಚಿತ್ರದಲ್ಲಿ ನಟನೆ
ನಟ ಯೋಗಿ ಬಾಬು ಜೊತೆಗೆ ರೂಪೇಶ್ ಶೆಟ್ಟಿ
Published On :

ಕನ್ನಡ, ತುಳು, ಕೊಂಕಣಿ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದ ನಟ ರೂಪೇಶ್‌ ಶೆಟ್ಟಿ ಇದೀಗ ತಮಿಳು ಚಿತ್ರರಂಗದಲ್ಲಿಯೂ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಖ್ಯಾತ ಹಾಸ್ಯನಟ ಯೋಗಿ ಬಾಬು ನಟನೆಯ ಸನ್ನಿಧಾನಂ ಪಿಒ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರೂಪೇಶ್‌ ಶೆಟ್ಟಿ ನಟಿಸುತ್ತಿದ್ದಾರೆ.

ರೂಪೇಶ್ ಶೆಟ್ಟಿ ಅವರಿಗೆ ಇದು ಮೊದಲ ತಮಿಳು ಚಿತ್ರವಾಗಿದ್ದು, ನಟ ಯೋಗಿ ಬಾಬು ಜೊತೆಗೆ ನಟಿಸುತ್ತಿರುವುದಾಗಿ ಘೋಷಿಸಿದ್ದಾರೆ. ಈ ಚಿತ್ರವು ಮಗುವಾಗಿದ್ದಾಗ ನಾಪತ್ತೆಯಾದ ಮಗನನ್ನು ಹುಡುಕುವ ತಾಯಿಯ ಕಥೆಯನ್ನು ಒಳಗೊಂಡಿದೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ರೂಪೇಶ್ ಶೆಟ್ಟಿ, ಇಂದು ತುಂಬಾ ಖುಷಿಯ ದಿವಸ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಇಂದು ಒಂದು ಅದ್ಭುತ ತಂಡದ ಜತೆಗೆ 'ಸನ್ನಿಧಾನಮ್ P.O' ಎನ್ನುವ ನನ್ನ ಮೊದಲ ತಮಿಳು ಚಿತ್ರ ಮಾಡುವ ಅವಕಾಶ ದೊರಕಿದೆ. ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟರಾದ ಯೋಗಿ ಬಾಬು ಅವರ ಜತೆ ನಟಿಸುವ ಅವಕಾಶ ನನ್ನ ಪಾಲಿಗೆ ದೊಡ್ಡ ಹೆಮ್ಮೆ. ನಿಮ್ಮ ಆಶೀರ್ವಾದ ಸದಾ ಇರಲಿ ಎಂದಿದ್ದಾರೆ.

ಈ ಚಿತ್ರವು ನವೆಂಬರ್ 2023 ರಿಂದ ನಿರ್ಮಾಣವಾಗುತ್ತಿದ್ದು, ಇದೀಗ ನಟ ರೂಪೇಶ್ ಶೆಟ್ಟಿ ಚಿತ್ರತಂಡ ಸೇರಿಕೊಂಡಿದ್ದಾರೆ.

ಅಮುತಾ ಸಾರಥಿ ನಿರ್ದೇಶನದ ಸನ್ನಿಧಾನಂ ಪಿಒ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ. ಶಬರಿಮಲೆಯ ಹಿನ್ನೆಲೆಯಲ್ಲಿ ಚಿತ್ರ ಮೂಡಿಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.