ಮುಂಗಾರು

ಮುಂಗಾರು ಹಿಂತೆಗೆತ ಆರಂಭ; Arnab ಚಂಡಮಾರುತ ಭೀತಿ; ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!
ಸೆಪ್ಟೆಂಬರ್ 19ರಂದು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಿಂದ ಮುಂಗಾರು ಹಿಂತೆಗೆತ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಮಳೆರಾಯನ ಮುನಿಸು: ದೇಶದಲ್ಲಿ ಶೇ.14.88ರಷ್ಟು ಮುಂಗಾರು ಕೊರತೆ!
ದೇಶದಲ್ಲಿ ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿದಿಲ್ಲ. ಜೂನ್ 1ರಿಂದ ಸೆಪ್ಟೆಂಬರ್ 19ರವರೆಗೆ ದೇಶಾದ್ಯಂತ 14.88ರಷ್ಟು ಮಳೆ ಕೊರತೆ ದಾಖಲಾಗಿದ್ದು, ಒಟ್ಟು 695.6 ಮಿ.ಮೀ. ಮಳೆಯಾಗಿದೆ.

ಕರಾವಳಿಯಲ್ಲಿ ಮೇಘಸ್ಫೋಟ: ಹಕ್ಲಾಡಿಯಲ್ಲಿ ಮೊದಲ ಬಾರಿಗೆ ದಾಖಲೆಯ 189 ಮಿ.ಮೀ ಮಳೆ; ರಾಜ್ಯದಲ್ಲೇ ಗರಿಷ್ಠ!
ಕಳೆದ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕದಾದ್ಯಂತ ಭಾರೀ ಮಳೆಯಾಗಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಕ್ಲಾಡಿಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಅತಿ ಹೆಚ್ಚು 189 ಮಿ.ಮೀ ಮಳೆಯಾಗಿದೆ.
ಇಡೀ ಭಾರತವನ್ನು ಆವರಿಸಿದ ಮುಂಗಾರು; ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆ!
ಪ್ರತಿ ವರ್ಷ ಸಾಮಾನ್ಯವಾಗಿ ಮುಂಗಾರು ಮಳೆಯು ಜೂನ್ 1 ರಂದು ಕೇರಳವನ್ನು ತಲುಪುತ್ತಿತ್ತು. ಆದರೆ, ಈ ಬಾರಿ ಜೂನ್ 4 ರಂದು ಮೂರು ದಿನ ತಡವಾಗಿ ದೇವರ ನಾಡನ್ನು ತಲುಪಿದೆ.

ರಾಜ್ಯದಲ್ಲಿ ಮುಂಗಾರು ಅಬ್ಬರ: ಒಂದೇ ದಿನ ಮೂರು ಜಿಲ್ಲೆಗಳಲ್ಲಿ ಭಾರೀ ಅವಾಂತರ, ಜನಜೀವನ ಅಸ್ತವ್ಯಸ್ತ
ಘಟನೆ ನಡೆದ ವೇಳೆ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಬಸ್ ಹಾಗೂ ಹಲವು ಕಾರುಗಳು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Watch | ಭಾರೀ ಮಳೆ: ಉಕ್ಕಿ ಹರಿದ ನೇತ್ರಾವತಿ; ಕರಾವಳಿ ಪ್ರದೇಶಕ್ಕೆ ರೆಡ್ ಅಲರ್ಟ್

ಮಳೆಗಾಲದಲ್ಲಿ ಸಾವುಗಳ ಕುರಿತ ಹೇಳಿಕೆ; ನಗುತ್ತಿರುವ ವಿಡಿಯೋ ವೈರಲ್: ಮುಂಬೈ ಬಿಜೆಪಿ ಅಧ್ಯಕ್ಷರ ವಿರುದ್ಧ ಆಕ್ರೋಶ!
ಶಾಲಾ ಬಸ್ ಮೇಲೆ ಮರ ಬಿದ್ದು 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಮತ್ತು ಈ ವಾರದ ಆರಂಭದಲ್ಲಿ ನಗರದಲ್ಲಿ ಮುಚ್ಚದ ಮ್ಯಾನ್‌ಹೋಲ್‌ಗೆ ಬಿದ್ದು 60 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮುಂಗಾರು ದುರ್ಬಲ: ರಾಜ್ಯದಲ್ಲಿ ತೀವ್ರ ಬರ ಭೀತಿ; ಜಲಬಿಕ್ಕಟ್ಟು ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ..!
ರಾಜ್ಯ ಸರ್ಕಾರದ ಮೊದಲ ಆದ್ಯತೆ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದಾಗಿದೆ. ತುರ್ತು ಅಗತ್ಯಗಳನ್ನು ಪೂರೈಸಲು ಈಗಾಗಲೇ ಪ್ರತಿ ಜಿಲ್ಲೆಯ ವೈಯಕ್ತಿಕ ಠೇವಣಿ (PD) ಖಾತೆಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಕೈಕೊಟ್ಟ ಮುಂಗಾರು: ರಾಜ್ಯದ 16 ಜಿಲ್ಲೆಗಳಲ್ಲಿ ಶೇ.50ಕ್ಕಿಂತ ಕಡಿಮೆ ಮಳೆ; ಮಲೆನಾಡಿನಲ್ಲೂ ಬರದ ಛಾಯೆ, ಬೆಳೆ ನಷ್ಟದ ಆತಂಕ
ಕೃಷಿ ಇಲಾಖೆ ಸಂಗ್ರಹಿಸಿರುವ ಜಿಲ್ಲಾವಾರು ಅಂಕಿ-ಅಂಶಗಳ ಪ್ರಕಾರ, ಜೂನ್ 26ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿಗೆ ಅಗತ್ಯವಿರುವಷ್ಟು ಮಳೆಯಾಗಿಲ್ಲ ಎಂದು ತಿಳಿದುಬಂದಿದ್ದು, ಇದು ರೈತರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

