ಬಾಂಗ್ಲಾದೇಶ vs ಭಾರತ

'ದೊಡ್ಡ ತಂಡ ನಿಜ, ಆದರೆ ಅಸಾಧ್ಯವೇನಲ್ಲ..', 'ಏಷ್ಯಾಕಪ್ ಗೆಲ್ಲಬೇಕಾದರೆ ಭಾರತವನ್ನು ಮಣಿಸಲೇಬೇಕು'
ಪಂದ್ಯಕ್ಕೂ ಮುನ್ನ ಮಾತನಾಡಿದ ಶರ್ಮಿನ್, “ನಾವು ಭಾರತವನ್ನು ಸೋಲಿಸಬಹುದು ಎಂಬ ನಂಬಿಕೆಯೇ ಇಲ್ಲದಿದ್ದರೆ ಏಷ್ಯಾಕಪ್ ಚಾಂಪಿಯನ್ ಆಗುವ ಕನಸು ಕಾಣಬಾರದು.

1st Test Match: ಅನಿಲ್ ಕುಂಬ್ಳೆ ಅಪರೂಪದ ದಾಖಲೆ ಮುರಿದ R Ashwin
ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಶತಕ ಸಿಡಿಸಿ ಎರಡನೇ ಇನ್ನಿಂಗ್ಸ್ ಬೌಲಿಂಗ್ ನಲ್ಲಿ 6 ವಿಕೆಟ್ ಪಡೆದ ಆರ್ ಅಶ್ವಿನ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

ಹಾವು ಕಚ್ಚುತ್ತೆ: 'ನಾಗಿನ್ ಡ್ಯಾನ್ಸ್' ಮೂಲಕ ಬಾಂಗ್ಲಾ ಅಭಿಮಾನಿಗಳ ಕಿಚಾಯಿಸಿದ Virat Kohli!
ಸಾಮಾನ್ಯವಾಗಿ ಬಾಂಗ್ಲಾ ಪಡೆ ಗೆದ್ದ ಬಳಿಕ ನಾಗಿಣಿ ನೃತ್ಯದೊಂದಿಗೆ ಸಂಭ್ರಮಿಸುವುದು ವಾಡಿಕೆ. ಆದರೆ ಚೆನ್ನೈ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಗೆಲುವು ಸಾಧ್ಯವಾಗಿಲ್ಲ.

1st test Match, Day 3: ಬಾಂಗ್ಲಾದೇಶ 158/4, Kohli ದಾಖಲೆ ಮುರಿದ ಶುಭ್ ಮನ್ ಗಿಲ್!
ಭಾರತದ ಬೃಹತ್ ಮೊತ್ತಕ್ಕೆ ನೆರವಾದ ಗಿಲ್ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ.

1st test Match: 287 ರನ್ ಗೆ ಭಾರತ 2ನೇ ಇನ್ನಿಂಗ್ಸ್ ಡಿಕ್ಲೇರ್, ಬಾಂಗ್ಲಾಗೆ 515 ರನ್ ಬೃಹತ್ ಗುರಿ!
ಭಾರತದ ಪರ ಶುಭ್ ಮನ್ ಗಿಲ್ (ಅಜೇಯ 119 ರನ್) ಮತ್ತು ರಿಷಬ್ ಪಂತ್ (109 ರನ್) ಶತಕ ಸಿಡಿಸಿ ಭಾರತಕ್ಕೆ ಬೃಹತ್ ಮುನ್ನಡೆ ತಂದುಕೊಟ್ಟರು. 109 ರನ್ ಗಳಿಸಿ ಪಂತ್ ಔಟಾದರೆ ಬಳಿಕ ಕ್ರೀಸ್ ಗೆ ಬಂದ ಕೆಎಲ್ ರಾಹುಲ್ ಅಜೇಯ 22 ರನ್ ಗಳಿಸಿದರು.

Video: 'ಭಾಯ್ ಇಲ್ಲೊಬ್ಬನ್ನ ಹಾಕು'; ಬ್ಯಾಟಿಂಗ್ ಮಾಡುತ್ತಲೇ ಫೀಲ್ಡಿಂಗ್ ಸೆಟ್ ಮಾಡಿಕೊಂಡ Rishab Pant!, ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು!
ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾದ ವೇಳೆ ರಿಷಬ್ ಪಂತ್ ತಮಗೆ ತಾವೇ ಫೀಲ್ಡಿಂಗ್ ಸೆಟ್ ಮಾಡಿಕೊಂಡಿದ್ದಾರೆ. ಪಂತ್ ಬ್ಯಾಟಿಂಗ್ ಮಾಡುವ ವೇಳೆ ಮಿಡ್ ವಿಕೆಟ್ ನಲ್ಲಿ ಯಾರೂ ಫೀಲ್ಡರ್ ಇರಲಿಲ್ಲ. ಇದನ್ನು ಗಮನಿಸಿದ ರಿಷಬ್ ಪಂತ್...

Bangladesh vs India; 3ನೇ ದಿನ ಭೋಜನ ವಿರಾಮದ ವೇಳೆಗೆ 2ನೇ ಇನ್ನಿಂಗ್ಸ್ ನಲ್ಲಿ ಭಾರತ 205/3, 432ರನ್ ಮುನ್ನಡೆ
ನಿನ್ನೆ ಬಾಂಗ್ಲಾದೇಶವನ್ನು ಕೇವಲ 149 ರನ್ ಗಳಿಗೆ ಕಟ್ಟಿಹಾಕಿದ್ದ ಭಾರತ 237ರನ್ ಗಳ ಬೃಹತ್ ಮುನ್ನಡೆ ಪಡೆದಿತ್ತು. ಇಂದು ತನ್ನ ಪಾಲಿನ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರೆಸಿದ್ದು, 3ನೇ ದಿನದ ಭೋಜನ ವಿರಾಮದ ವೇಳೆ ಭಾರತ 3 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿದೆ.

1st Test Match Day 2: ಭಾರತ 376ಕ್ಕೆ ಆಲೌಟ್, ಬಾಂಗ್ಲಾದೇಶಕ್ಕೆ Bumrah ಶಾಕ್!
ಇಂದು ಭಾರತ 2ನೇ ದಿನದಾಟ ಮುಂದುವರೆಸಿ 376ರನ್ ಗಳಿಗೆ ಅಲೌಟ್ ಆಗಿದೆ. ಬೆಳಗ್ಗೆ ಕ್ರೀಸ್ ನಲ್ಲಿದ್ದ ಆರ್ ಅಶ್ವಿನ್ 113ರನ್ ಗಳಿಸಿ ಟಸ್ಕಿನ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾದರೆ, ರವೀಂದ್ರ ಜಡೇಜಾ ಇಂದು ಯಾವುದೇ ರನ್ ಕಲೆಹಾಕದೇ ಮತ್ತದೇ ಟಸ್ಕಿನ್ ಬೌಲಿಂಗ್ ನಲ್ಲಿ ಔಟ್ ಆಗಿ ಶತಕ ವಂಚಿತರಾದರು.

ಕೈಕೊಟ್ಟ 'Rohit-Kohli'; ಆಸರೆಯಾದ ಜಡೇಜಾ; ಶತಕ ಸಿಡಿಸಿದ ಅಶ್ವಿನ್; ದಿನದಾಟ ಅಂತ್ಯಕ್ಕೆ ಭಾರತ 339/6
ಇಂದು ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬಾಂಗ್ಲಾದೇಶ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ಅಕ್ಷರಶಃ ಬಾಂಗ್ಲಾ ಬೌಲರ್ ಗಳ ಎದುರು ಪರದಾಡಿತು.

