ಕ್ರಿಕೆಟ್

1st Test Match Day 2: ಭಾರತ 376ಕ್ಕೆ ಆಲೌಟ್, ಬಾಂಗ್ಲಾದೇಶಕ್ಕೆ Bumrah ಶಾಕ್!

ಇಂದು ಭಾರತ 2ನೇ ದಿನದಾಟ ಮುಂದುವರೆಸಿ 376ರನ್ ಗಳಿಗೆ ಅಲೌಟ್ ಆಗಿದೆ. ಬೆಳಗ್ಗೆ ಕ್ರೀಸ್ ನಲ್ಲಿದ್ದ ಆರ್ ಅಶ್ವಿನ್ 113ರನ್ ಗಳಿಸಿ ಟಸ್ಕಿನ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾದರೆ, ರವೀಂದ್ರ ಜಡೇಜಾ ಇಂದು ಯಾವುದೇ ರನ್ ಕಲೆಹಾಕದೇ ಮತ್ತದೇ ಟಸ್ಕಿನ್ ಬೌಲಿಂಗ್ ನಲ್ಲಿ ಔಟ್ ಆಗಿ ಶತಕ ವಂಚಿತರಾದರು.

1st Test Match Day 2: ಭಾರತ 376ಕ್ಕೆ ಆಲೌಟ್, ಬಾಂಗ್ಲಾದೇಶಕ್ಕೆ Bumrah ಶಾಕ್!
ಭಾರತಕ್ಕೆ ಆಸರೆಯಾಗಿದ್ದ ಜಡೇಜಾ-ಅಶ್ವಿನ್ ಜೋಡಿ
Published On :

ಚೆನ್ನೈ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 376ರನ್ ಗಳಿಗೆ ಆಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಬಾಂಗ್ಲಾದೇಶ ಕೂಡ ಆರಂಭಿಕ ಆಘಾತಕ್ಕೀಡಾಗಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಭಾರತ 6 ವಿಕೆಟ್ ನಷ್ಟಕ್ಕೆ 339 ರನ್ ಕಲೆಹಾಕಿ, 86 ರನ್ ಗಳಿಸಿರುವ ರವೀಂದ್ರ ಜಡೇಜಾ ಮತ್ತು 102 ರನ್ ಗಳಿಸಿರುವ ಅಶ್ವಿನ್ 2ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು.

ಇಂದು ಭಾರತ 2ನೇ ದಿನದಾಟ ಮುಂದುವರೆಸಿ 376ರನ್ ಗಳಿಗೆ ಅಲೌಟ್ ಆಗಿದೆ. ಬೆಳಗ್ಗೆ ಕ್ರೀಸ್ ನಲ್ಲಿದ್ದ ಆರ್ ಅಶ್ವಿನ್ 113ರನ್ ಗಳಿಸಿ ಟಸ್ಕಿನ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾದರೆ, ರವೀಂದ್ರ ಜಡೇಜಾ ಇಂದು ಯಾವುದೇ ರನ್ ಕಲೆಹಾಕದೇ ಮತ್ತದೇ ಟಸ್ಕಿನ್ ಬೌಲಿಂಗ್ ನಲ್ಲಿ ಔಟ್ ಆಗಿ ಶತಕ ವಂಚಿತರಾದರು.

ಅಂತಿಮ ಹಂತದಲ್ಲಿ ಆಕಾಶ್ ದೀಪ್ 17 ರನ್, ಜಸ್ ಪ್ರೀತ್ ಬುಮ್ರಾ 7 ರನ್ ಗಳಿಗೆ ಔಟ್ ಆಗುವ ಮೂಲಕ ಭಾರತದ ಇನ್ನಿಂಗ್ಸ್ ಗೆ ತೆರೆ ಬಿತ್ತು. ಬಾಂಗ್ಲಾದೇಶ ಪರ ಹಸನ್ ಮಹಮೂದ್ 5 ವಿಕೆಟ್ ಪಡೆದರೆ, ಟಸ್ಕಿನ್ ಅಹ್ಮದ್ 3, ನಹೀದ್ ರಾಣಾ, ಮೆಹ್ದಿ ಹಸನ್ ತಲಾ 1 ವಿಕೆಟ್ ಪಡೆದರು.

ಬಾಂಗ್ಲಾದೇಶಕ್ಕೆ ಶಾಕ್ ಕೊಟ್ಟ Bumrah

ಇನ್ನು ಭಾರತ ನೀಡಿರುವ 376ರನ್ ಗಳ ಮೊದಲ ಇನ್ನಿಂಗ್ಸ್ ಗುರಿಯನ್ನು ಬೆನ್ನು ಹತ್ತಿರುವ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ. ಆರಂಭಿಕ ಆಟಗಾರ ಶದ್ಮಾನ್ ಇಸ್ಲಾಂ 2ರನ್ ಗೇ ಭಾರತದ ಜಸ್ ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 3 ಓವರ್ ಗೆ 1 ವಿಕೆಟ್ ಕಳೆದುಕೊಂಡು 8 ರನ್ ಕಲೆಹಾಕಿದೆ. 2 ರನ್ ಗಳಿಸಿರುವ ಝಾಕಿರ್ ಹಸನ್ ಮತ್ತು 4 ರನ್ ಗಳಿಸಿರುವ ನಾಯಕ ನಜ್ಮುಲ್ ಹೊಸೇನ್ ಶಾಂತೋ ಕ್ರೀಸ್ ಕಾಯ್ದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.