ಕ್ರಿಕೆಟ್

ಹಾವು ಕಚ್ಚುತ್ತೆ: 'ನಾಗಿನ್ ಡ್ಯಾನ್ಸ್' ಮೂಲಕ ಬಾಂಗ್ಲಾ ಅಭಿಮಾನಿಗಳ ಕಿಚಾಯಿಸಿದ Virat Kohli!

ಸಾಮಾನ್ಯವಾಗಿ ಬಾಂಗ್ಲಾ ಪಡೆ ಗೆದ್ದ ಬಳಿಕ ನಾಗಿಣಿ ನೃತ್ಯದೊಂದಿಗೆ ಸಂಭ್ರಮಿಸುವುದು ವಾಡಿಕೆ. ಆದರೆ ಚೆನ್ನೈ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಗೆಲುವು ಸಾಧ್ಯವಾಗಿಲ್ಲ.

ಹಾವು ಕಚ್ಚುತ್ತೆ: 'ನಾಗಿನ್ ಡ್ಯಾನ್ಸ್' ಮೂಲಕ ಬಾಂಗ್ಲಾ ಅಭಿಮಾನಿಗಳ ಕಿಚಾಯಿಸಿದ Virat Kohli!
ಬಾಂಗ್ಲಾ ಅಭಿಮಾನಿಗಳ ಕಿಚಾಯಿಸಿದ ವಿರಾಟ್ ಕೊಹ್ಲಿ
Published On :

ಚೆನ್ನೈ: ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿದ್ದು, ಈ ಪಂದ್ಯದ ವೇಳೆ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಬಾಂಗ್ಲಾದೇಶ ಅಭಿಮಾನಿಗಳನ್ನು ಅವರ 'ನಾಗಿನ್ ಡ್ಯಾನ್ಸ್' ಮೂಲಕ ಕಿಚಾಯಿಸಿದ್ದಾರೆ.

ಸಾಮಾನ್ಯವಾಗಿ ಬಾಂಗ್ಲಾ ಪಡೆ ಗೆದ್ದ ಬಳಿಕ ನಾಗಿಣಿ ನೃತ್ಯದೊಂದಿಗೆ ಸಂಭ್ರಮಿಸುವುದು ವಾಡಿಕೆ. ಆದರೆ ಚೆನ್ನೈ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಗೆಲುವು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಭಾರತ ಆಟಗಾರರ ಕೆಣಕಿದ್ದ ಬಾಂಗ್ಲಾ ಅಭಿಮಾನಿಗಳನ್ನು ನಾಗಿನ್ ಡ್ಯಾನ್ಸ್ ಮೂಲಕ ಕಿಚಾಯಿಸಿದ್ದಾರೆ.

ಪಂದ್ಯದ ನಡುವೆ ಪ್ರೇಕ್ಷಕರತ್ತ ಮುಖ ಮಾಡಿದ ವಿರಾಟ್ ಕೊಹ್ಲಿ ನಾಗಿಣಿ ಸಿಗ್ನಲ್ ಮಾಡಿ, ಹಾವು ಕಚ್ಚುತ್ತೆ ಎಂದು ಟ್ರೋಲ್ ಮಾಡಿದ್ದಾರೆ. ಇದೀಗ ಕೊಹ್ಲಿಯ ಈ ಸಿಗ್ನಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.