ಝೈಡಸ್ ಕ್ಯಾಡಿಲಾ

ಮಕ್ಕಳಿಗೆ ಝೈಕೋವ್-ಡಿ ಕೋವಿಡ್ ಲಸಿಕೆ: ಸರ್ಕಾರಕ್ಕೆ 1 ಕೋಟಿ ಡೋಸ್ ಪೂರೈಕೆ; ಬೆಲೆ 265 ರೂಪಾಯಿ
ಔಷಧ ತಯಾರಕ ಸಂಸ್ಥೆ ಝೈಡಸ್ ಕ್ಯಾಡಿಲಾ ತಾನು ಸರ್ಕಾರಕ್ಕೆ ಒಂದು ಕೋಟಿ ಡೋಸ್ ಗಳನ್ನು ಪ್ರತಿ ಡೋಸ್ ಗೆ 265 ರೂಪಾಯಿಯ ಬೆಲೆಗೆ ಪೂರೈಕೆ ಮಾಡುತ್ತಿರುವುದಾಗಿ ಹೇಳಿದೆ.

ಶೀಘ್ರದಲ್ಲೇ ಮಕ್ಕಳಿಗೂ ಲಸಿಕೆ: 1 ಕೋಟಿ ಡೋಸ್ ಝೈಕೋವ್-ಡಿ ಲಸಿಕೆ ಖರೀದಿಸಲು ಕೇಂದ್ರ ಸರ್ಕಾರ ಆದೇಶ
ಭಾರತದಲ್ಲಿ ಈಗ ಮಕ್ಕಳಿಗೂ ಕೂಡ ಕೊರೋನಾ ಲಸಿಕೆ ಶೀಘ್ರದಲ್ಲೇ ಸಿಗಲಿದೆ. ಇದಕ್ಕಾಗಿ 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಕೋವಿಡ್ ಲಸಿಕೆ ದರ ಇಳಿಕೆಗೆ ಝೈಡಸ್ ಕ್ಯಾಡಿಲಾ ಒಪ್ಪಿಗೆ, ಶೀಘ್ರದಲ್ಲೇ ಅಂತಿಮ ನಿರ್ಧಾರ- ಮೂಲಗಳು
ಕೇಂದ್ರ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಂತರ ಒಂದು ಡೋಸ್ ಕೋವಿಡ್-19 ಲಸಿಕೆಯನ್ನು 265 ರೂ.ಗೆ ಇಳಿಕೆ ಮಾಡಲು ಝೈಡಸ್ ಕ್ಯಾಡಿಲಾ ಒಪ್ಪಿಗೆ ನೀಡಿದೆ. ಆದರೆ, ಅಂತಿಮ ನಿರ್ಧಾರ ಹೊರಬೀಳಲು ಇನ್ನೂ ಸ್ವಲ್ಪ ದಿನವಾಗಲಿದೆ ಎಂದು ಮೂಲಗಳು ಭಾನುವಾರ ಹೇಳಿವೆ.

ಝೈಡಸ್ ಕ್ಯಾಡಿಲಾ 3 ಡೋಸ್ ಕೋವಿಡ್ ಲಸಿಕೆಗೆ ರೂ.1,900 ದರ ಪ್ರಸ್ತಾಪ: ಕಡಿಮೆಗೊಳಿಸಲು ಸರ್ಕಾರದ ಮಾತುಕತೆ
ZyCov-D ಕೋವಿಡ್ -19 ಲಸಿಕೆ ದರಕ್ಕೆ ಸಂಬಂಧಿಸಿದಂತೆ ಝೈಡಸ್ ಕ್ಯಾಡಿಲಾ ಕಂಪನಿ ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ಪ್ರಗತಿಯಲ್ಲಿದೆ

ಝೈಕೋವ್-ಡಿ ಲಸಿಕೆ ತುರ್ತು ಬಳಕೆಗೆ ಅನುಮೋದನೆ; ವಿಶ್ವದ ಮೊದಲ ಡಿಎನ್ಎ ಆಧಾರಿತ ಲಸಿಕೆ ನಿಜಕ್ಕೂ ಮಹತ್ವದ ಸಾಧನೆ: ಪ್ರಧಾನಿ
ಜಗತ್ತಿನ ಮೊದಲ ಡಿಎನ್ಎ ಆಧಾರಿತ ಕೋವಿಡ್ ಲಸಿಕೆ ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್-ಡಿ ಕೋವಿಡ್ ಲಸಿಕೆಗೆ ತುರ್ತು ಬಳಕೆಯ ಅನುಮೋದನೆ ನೀಡಿದ ಬೆನ್ನಲ್ಲೇ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಜಗತ್ತಿನ ಮೊದಲ ಡಿಎನ್ಎ ಲಸಿಕೆ: ಝೈಡಸ್ ಕ್ಯಾಡಿಲಾ 3 ಡೋಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ
ಝೈಡಸ್ ಕ್ಯಾಡಿಲಾ ಸಂಸ್ಥೆಯ 3 ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಝೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆ ತುರ್ತು ಬಳಕೆಗೆ ಈ ವಾರ ಅನುಮೋದನೆ ಸಾಧ್ಯತೆ
ಅಹ್ಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ-ಮೂರು ಡೋಸ್ ಗಳ ಕೊರೊನಾ ಲಸಿಕೆ ಝುಕೋವ್-ಡಿ ಗೆ ಈ ವಾರ ತುರ್ತು ಬಳಕೆಗೆ ಅನುಮೋದನೆ ಲಭ್ಯವಾಗುವ ಸಾಧ್ಯತೆ ಇದೆ.

12-18 ವರ್ಷ ವಯಸ್ಸಿನವರಿಗೆ ಸೆಪ್ಟೆಂಬರ್‌ನಿಂದ ಝೈಡಸ್ ಕೋವಿಡ್ ಲಸಿಕೆ: ತಜ್ಞರ ಹೇಳಿಕೆ
ಝೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆಯು ಸೆಪ್ಟೆಂಬರ್ ವೇಳೆಗೆ 12 ರಿಂದ 18 ವರ್ಷ ವಯಸ್ಸಿನವರಿಗೆ ಲಭ್ಯವಾಗಲಿದೆ ಎಂದು ಲಸಿಕೆ ನಿರ್ವಹಣೆಗೆ ಸಂಬಂಧಿಸಿದ ರಾಷ್ಟ್ರೀಯ ತಜ್ಞರ ಸಮಿತಿ ಮುಖ್ಯಸ್ಥ ಡಾ. ಎನ್.ಕೆ. ಆರೋರಾ ತಿಳಿಸಿದ್ದಾರೆ.

ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್-19 ಲಸಿಕೆ 'ಝೈಕೋವ್-ಡಿ' ಮುಂದಿನ ತಿಂಗಳು ಮಾರುಕಟ್ಟೆಗೆ!
ದೇಶಕ್ಕೆ 5ನೇ ಲಸಿಕೆಯಾಗಿ ಮತ್ತು ಭಾರತದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಕೋವಿಡ್ -19 ಲಸಿಕೆಯಾಗಿರುವ ಝೈಡಸ್ ಕ್ಯಾಡಿಲಾ ಸಂಸ್ಥೆಯ 'ಝೈಕೋವ್-ಡಿ' ಮುಂದಿನ ತಿಂಗಳೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

