ಝೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆ ತುರ್ತು ಬಳಕೆಗೆ ಈ ವಾರ ಅನುಮೋದನೆ ಸಾಧ್ಯತೆ
ಅಹ್ಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ-ಮೂರು ಡೋಸ್ ಗಳ ಕೊರೊನಾ ಲಸಿಕೆ ಝುಕೋವ್-ಡಿ ಗೆ ಈ ವಾರ ತುರ್ತು ಬಳಕೆಗೆ ಅನುಮೋದನೆ ಲಭ್ಯವಾಗುವ ಸಾಧ್ಯತೆ ಇದೆ.

ನವದೆಹಲಿ: ಅಹ್ಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ-ಮೂರು ಡೋಸ್ ಗಳ ಕೊರೊನಾ ಲಸಿಕೆ ಝುಕೋವ್-ಡಿ ಗೆ ಈ ವಾರ ತುರ್ತು ಬಳಕೆಗೆ ಅನುಮೋದನೆ ಲಭ್ಯವಾಗುವ ಸಾಧ್ಯತೆ ಇದೆ.
ರಾಜ್ಯಸಭೆಯ ಶೂನ್ಯ ಅವಧಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಅವರು ಲಸಿಕೆಗಳ ಬಗ್ಗೆ ಮಾತನಾಡಿ, ಅಕ್ಟೋಬರ್-ನವೆಂಬರ್ ವೇಳೆಗೆ ಭಾರತದ ನಾಲ್ಕು ಫಾರ್ಮಸಿಟಿಕಲ್ ಕಂಪನಿಗಳು ಲಸಿಕೆ ದೇಶೀಯವಾಗಿ ಲಸಿಕೆ ಉತ್ಪಾದನೆ ಪ್ರಾರಂಭಿಸಲಿದ್ದು, ದೇಶದಲ್ಲಿರುವ ಬೇಡಿಕೆಯನ್ನು ಸರಿದೂಗಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದರು.
ಬೈಯೋಲಾಜಿಕಲ್ ಇ ಹಾಗೂ ನೊವಾರ್ಟಿಸ್ ಲಸಿಕೆಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಝೈಡಸ್ ಕ್ಯಾಡಿಲಾ ಶೀಘ್ರವೇ ತಜ್ಞರ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದರು.
ಝೈಡಸ್ ಕ್ಯಾಡಿಲಾ ಕಳೆದ ತಿಂಗಳು ತುರ್ತು ಬಳಕೆಗೆ ಅನುಮತಿ ಕೋರಿರುವುದಾಗಿ ತಿಳಿಸಿತ್ತು. 10-12 ಕೋಟಿ ಡೋಸ್ ಗಳನ್ನು ಉತ್ಪಾದಿಸುವ ಗುರಿ ಹೊಂದಿರುವುದಾಗಿ ಝೈಡಸ್ ಹೇಳಿದೆ. 50 ಕೇಂದ್ರಗಳಲ್ಲಿ ಈ ವರೆಗೂ ಝೈಡಸ್ ಸಂಸ್ಥೆ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಿದೆ. ಝುಕೋವ್-ಡಿ ಮಾನವ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ಡಿಎನ್ಎ ಲಸಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


