ಝೈಕೋವ್-ಡಿ ಲಸಿಕೆ ತುರ್ತು ಬಳಕೆಗೆ ಅನುಮೋದನೆ; ವಿಶ್ವದ ಮೊದಲ ಡಿಎನ್ಎ ಆಧಾರಿತ ಲಸಿಕೆ ನಿಜಕ್ಕೂ ಮಹತ್ವದ ಸಾಧನೆ: ಪ್ರಧಾನಿ
ಜಗತ್ತಿನ ಮೊದಲ ಡಿಎನ್ಎ ಆಧಾರಿತ ಕೋವಿಡ್ ಲಸಿಕೆ ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್-ಡಿ ಕೋವಿಡ್ ಲಸಿಕೆಗೆ ತುರ್ತು ಬಳಕೆಯ ಅನುಮೋದನೆ ನೀಡಿದ ಬೆನ್ನಲ್ಲೇ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ನವದೆಹಲಿ: ಜಗತ್ತಿನ ಮೊದಲ ಡಿಎನ್ಎ ಆಧಾರಿತ ಕೋವಿಡ್ ಲಸಿಕೆ ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್-ಡಿ ಕೋವಿಡ್ ಲಸಿಕೆಗೆ ತುರ್ತು ಬಳಕೆಯ ಅನುಮೋದನೆ ನೀಡಿದ ಬೆನ್ನಲ್ಲೇ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ವಿಶ್ವದ ಮೊದಲ ಡಿಎನ್ಎ ಆಧಾರಿತ ಝೈಡಸ್ ಕ್ಯಾಡಿಲಾದ ಝೈಕೋವ್-ಡಿ' ಲಸಿಕೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾರತದ ವಿಜ್ಞಾನಿಗಳ ನವೀನ ಉತ್ಸಾಹಕ್ಕೆ ಇದು ಸಾಕ್ಷಿಯಾಗಿದೆ. ನಿಜಕ್ಕೂ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
ನೀಡಲ್ ಲೆಸ್ (ಸೂಜಿ ರಹಿತ) ಲಸಿಕೆಯಾಗಿರುವ ಮೂರು ಡೋಸ್ ಪ್ರಮಾಣದ ZyCov-D ಲಸಿಕೆಯನ್ನು ತುರ್ತುಬಳಕೆಗೆ ಅನುಮೋದನೆ ನೀಡುವಂತೆ ಕೇಂದ್ರ ಆರೋಗ್ಯ ತಜ್ಞರು ಶಿಫಾರಸ್ಸು ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಅದರಂತೆ ಕೊರೋನಾ ಸಾಂಕ್ರಾಮಿಕ (Covid-19 Pandemic) ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಲಸಿಕಾಕರಣ ಕಾರ್ಯಕ್ರಮಕ್ಕೆ ಇದೀಗ ಮತ್ತೊಂದು ಲಸಿಕೆ ಸೇರ್ಪಡೆಯಾಗಿದ್ದು, ಕೇಂದ್ರ ಸರ್ಕಾರವು ಫಾರ್ಮ ಕಂಪನಿ ಝೈಡಸ್ ಕ್ಯಾಡಿಲಾದ (Zydus Cadila) 3 ಡೋಸ್ ಕೊರೊನಾ ಲಸಿಕೆ ZyCov-Dನ ತುರ್ತುಬಳಕೆಗೆ ಅನುಮೋದನೆ ನೀಡಿದೆ.
ಮೂಲಗಳ ಪ್ರಕಾರ ಭಾರತದ ಔಷಧ ನಿಯಂತ್ರಕ ಜನರಲ್ನ (DCGI) ತಜ್ಞರ ಸಮಿತಿಯು ಈ ಲಸಿಕೆಯ ತುರ್ತು ಬಳಕೆಯನ್ನು ಅನುಮೋದಿಸಿದೆ. ಈ ಲಸಿಕೆಯ 2 ಡೋಸ್ಗಳ ಪರಿಣಾಮದ ಕುರಿತು ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು ಕೋರಿದೆ ಎನ್ನಲಾಗಿದೆ.
ಇನ್ನು ಜೆನೆರಿಕ್ ಫಾರ್ಮಾಸ್ಯುಟಿಕಲ್ ಕಂಪನಿಯಾಗಿರುವ ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್ (Cadila Health Care Limited) ಜುಲೈ 1 ರಂದು ZyCoV-D ಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. 28 ಸಾವಿರ ಸ್ವಯಂಸೇವಕರ ಮೇಲೆ ನಡೆಸಿದ ಕೊನೆಯ ಹಂತದ ಪ್ರಯೋಗದ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಲಸಿಕೆಯ ಪರಿಣಾಮಕಾರಿತ್ವವು ಶೇ. 66.6 ರಷ್ಟಿದೆ ಎಂದು ಈ ವರದಿಯಿಂದ ತಿಳಿದುಬಂದಿತ್ತು. ಈ ಲಸಿಕೆ 12 ರಿಂದ 18 ವಯೋಮಾನದವರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದರ ಪ್ರಾಯೋಗಿಕ ಡೇಟಾವನ್ನು ಇನ್ನೂ ಪ್ಯಾರ್ ರಿವ್ಯೂ ಮಾಡಲಾಗಿಲ್ಲ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


