ಕ್ರೆಸ್ಟ್ ಗೇಟ್

ತುಂಗಭದ್ರೆಗೆ ಹೊಸ ಕಳೆ; ನೂತನ 33 ಕ್ರೆಸ್ಟ್ ಗೇಟ್‌ಗಳ ಲೋಕಾರ್ಪಣೆ: ಒಂದೇ ವೇದಿಕೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು..!
ಅಣೆಕಟ್ಟಿನ 18ನೇ ಗೇಟ್ ಸಮೀಪ ನಡೆದ ಪೂಜಾ ವಿಧಿಗಳ ಬಳಿಕ ನೂತನ ಗೇಟ್‌ಗಳ ಲೋಕಾರ್ಪಣೆ ನೆರವೇರಿತು. ಡಿ.ಕೆ. ಶಿವಕುಮಾರ್ ಅವರು 18ನೇ ಗೇಟ್‌ಗೆ ಚಾಲನೆ ನೀಡಿದರೆ, ಸಿ.ಆರ್. ಪಾಟೀಲ್ ಅವರು 17ನೇ ಗೇಟ್ ಉದ್ಘಾಟಿಸಿದರು.

ತುಂಗಭದ್ರಾ ಡ್ಯಾಂಗೆ ಹೊಸ ಕಳೆ: ಆಧುನೀಕರಣ ಕಾರ್ಯ ಪೂರ್ಣ; ಉದ್ಘಾಟನೆಗೆ ಚಂದ್ರಬಾಬು ಸೇರಿ ಮೂರು ರಾಜ್ಯಗಳ ಸಿಎಂಗಳಿಗೆ ಆಹ್ವಾನ!
ಸುಮಾರು 57.8 ಕೋಟಿ ರೂ.ವೆಚ್ಚದ ಈ ಯೋಜನೆಯಲ್ಲಿ 52 ಕೋಟಿ ರೂ. ಕ್ರೆಸ್ಟ್ ಗೇಟ್‌ಗಳ ಆಧುನೀಕರಣಕ್ಕೆ ಹಾಗೂ 5.8 ಕೋಟಿ ರೂ. ಸರಪಳಿ ಬದಲಾವಣೆಗೆ ಮೀಸಲಿಡಲಾಗಿತ್ತು.

MLC ಶರವಣ ಬಹಳ ಬುದ್ಧಿವಂತ ಎಂದು ಭಾವಿಸಿದ್ದೆ; ತುಂಗಭದ್ರಾ ಅಣೆಕಟ್ಟೆಗೆ ಕಳುಹಿಸಿಕೊಡುತ್ತೇನೆ, ಹೋಗಿ ನೋಡಲಿ: ಡಿ.ಕೆ ಶಿವಕುಮಾರ್
ತುಂಗಭದ್ರಾ ಗೇಟ್ ಅಳವಡಿಕೆ ವಿಚಾರವನ್ನು ಪ್ರಸ್ತಾಪಿಸಿ, ಬೆಂಗಳೂರಿನಲ್ಲಿ ಮನೆ ಹಂಚಿಕೆ, ಕೇರಳದಲ್ಲಿ ಮನೆ ನಿರ್ಮಾಣ ಸೇರಿದಂತೆ ಅನೇಕ ಬೇರೆ ಬೇರೆ ವಿಚಾರಗಳನ್ನು ಎಳೆದು ತಂದಿದ್ದಾರೆ. ಟಿಬಿ ಅಣೆಕಟ್ಟಿನ ಗೇಟ್ ಅಳವಡಿಕೆ ವಿಚಾರ ಬಹಳ ಗಂಭೀರವಾದದು.

ತುಂಗಾಭದ್ರಾ ಕ್ರೆಸ್ಟ್ ಗೇಟ್ ನಿರ್ಮಾಣಕ್ಕೆ ನೀಡಿದ್ದ ಹಣ ವಾಪಸ್: ಸರ್ಕಾರದ ವಿರುದ್ಧ BJP ಆಕ್ರೋಶ
ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ತುಂಗಭದ್ರಾ ಮಂಡಳಿ ಮೇ 2026ರೊಳಗೆ ಎಲ್ಲಾ ಹೊಸ ಗೇಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದರೂ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.

ಜೂನ್ 2026ರೊಳಗೆ ತಂಗಭದ್ರಾ ಡ್ಯಾಮ್ ಕ್ರೆಸ್ಟ್ ಗೇಟ್ ಅಳವಡಿಕೆ ಪೂರ್ಣ: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಒಟ್ಟು 42 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. 30 ಲಕ್ಷ ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿರುವ ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ.

ತುಂಗಭದ್ರಾ ಡ್ಯಾಂ ದುರಸ್ತಿ ನೆಪ: 2ನೇ ಬೆಳೆಗೆ ನೀರು ಬಿಡದೆ ರೈತರಿಗೆ ಅನ್ಯಾಯ, ಸರ್ಕಾರದ ವಿರುದ್ಧ BJP ಕಿಡಿ
33 ಕ್ರೆಸ್ಟ್ ಗೇಟ್‌ಗಳನ್ನು ವಿವಿಧ ಕಂಪನಿಗಳಿಗೆ ಹಂಚಿಕೆ ಮಾಡಿವೆ. ಆದರೆ, ಸಿಎಂ ಕುರ್ಚಿ ಕಿತ್ತಾಟದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ಕೇವಲ 16 ಗೇಟ್ ಗಳನ್ನಷ್ಟೇ ಅಳವಡಿಸಿದೆ.

ತುಂಗಭದ್ರಾ ಜಲಾಶಯದ 7 ಕ್ರೆಸ್ಟ್ ಗೇಟ್ ಡ್ಯಾಮೇಜ್: ಸಚಿವರ ಹೇಳಿಕೆ ಬೆನ್ನಲ್ಲೇ ಸ್ಥಳೀಯರಲ್ಲಿ ಆತಂಕ
ಇತ್ತೀಚೆಗೆ ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ತಂಗಡಗಿ, ಏಳು ಗೇಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಗೇಟ್‌ಗಳು ಬೆಂಡ್ ಆಗಿದ್ದು, ಅವುಗಳನ್ನು ಮೇಲೆತ್ತಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ತುಂಗಭದ್ರಾ ಜಲಾಶಯ: ಆಯಸ್ಸು ಮುಗಿದ ಕ್ರೆಸ್ಟ್ಗೇಟ್ ಬದಲಾವಣೆಗೆ ಸರ್ಕಾರ ಮುಂದು, ಟೆಂಡರ್'ಗೆ ಆಹ್ವಾನ
ಅಧಿಕಾರಿಗಳ ನಡೆ ರೈತರು ನಿರಾಳಗೊಳ್ಳುವಂತೆ ಮಾಡಿದ್ದು, ಕ್ರೆಸ್ಟ್ಗೇಟ್ ಮರುಸ್ಥಾಪಿಸುವ ಕಾರ್ಯ ತಿಂಗಳೊಳಗೆ ಪ್ರಾರಂಭವಾಗುವ ನಿರೀಕ್ಷೆಗಳಿವೆ.

KRS ಅಣೆಕಟ್ಟೆಯಲ್ಲಿ ತಾಂತ್ರಿಕ ದೋಷ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾವಿರಾರು ಕ್ಯೂಸೆಕ್ ನೀರು ಬಿಡುಗಡೆ; ರೈತರ ಆಕ್ರೋಶ
ಭಾನುವಾರ ರಾತ್ರಿ ಏಕಾಏಕಿ ಕೆಆರ್‌ಎಸ್ ಡ್ಯಾಂನ +80 ಗೇಟ್ ಓಪನ್ ಆಗಿ ನೀರು ನದಿಗೆ ಹರಿದು ವ್ಯರ್ಥವಾಗಿದೆ. ಭಾನುವಾರ ರಾತ್ರಿ ಓಪನ್ ಆಗಿರುವ ಗೇಟ್‌ನಿಂದ ಸೋಮವಾರ ರಾತ್ರಿಯವರೆಗೂ ನೀರು ನದಿಗೆ ಸೇರಿದೆ.

