Youth

ಬೆಂಗಳೂರು: ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ತಂದೆಗೆ ಚಾಕುವಿನಿಂದ ಇರಿದು ಕೊಲೆ, ಯುವಕನ ಬಂಧನ
ತನ್ನ ಅಪ್ರಾಪ್ತ ಮಗಳನ್ನು ಲೈಂಗಿಕವಾಗಿ ಟೀಕಿಸಿದ್ದಕ್ಕಾಗಿ ಯುವಕನನ್ನು ಪ್ರಶ್ನಿಸಿದ 41 ವರ್ಷದ ವ್ಯಕ್ತಿಯನ್ನು ಶನಿವಾರ ರಾತ್ರಿ ಅಶೋಕನಗರ ಪೊಲೀಸ್ ವ್ಯಾಪ್ತಿಯ ಶಾಂತಿನಗರದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಬೆಳಗಾವಿ: ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಅನುತ್ತೀರ್ಣ; ಮನನೊಂದು 24 ವರ್ಷದ ಯುವಕ ಆತ್ಮಹತ್ಯೆ!
ಪದೇ ಪದೆ ಪ್ರಯತ್ನಿಸಿದರೂ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗದಿದ್ದಕ್ಕೆ ಮನನೊಂದು ನಿಪ್ಪಾಣಿ ತಾಲೂಕಿನಲ್ಲಿ ಗುರುವಾರ 24 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಒಟ್ಟಿಗೆ ಬದುಕುವ ಅದೃಷ್ಟವಿಲ್ಲ, ಆದರೆ, ನನ್ನ ಅಂತ್ಯಕ್ರಿಯೆಗೆ ಬರಲೇಬೇಕು: ಪ್ರಿಯತಮೆ ಆಹ್ವಾನಿಸಿ ಲೈವಲ್ಲೇ ಪ್ರಾಣಬಿಟ್ಟ ರೇಬಿಸ್ ಪೀಡಿತ ಯುವಕ!
ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ಪ್ರಿಯತಮೆಗೆ ವಿಡಿಯೋ ಮಾಡಿ, ತನ್ನ ಅಂತ್ಯಕ್ರಿಯೆಗೆ ಆಹ್ವಾನಿಸಿ, ಲೈವ್‌ನಲ್ಲೇ ಪ್ರಾಣ ಬಿಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜುಲೈ 29 ರಂದು ಮೊಹರಂ: ಜನರಿಗೆ ತೊಂದರೆಯಾಗದಂತೆ ಆಚರಿಸಲು ಯುವಕರಿಗೆ ಸಮುದಾಯದ ಮುಖಂಡರ ಕರೆ
ಜುಲೈ 29 ರಂದು ಮೊಹರಂ ಆಚರಿಸಲಾಗುತ್ತಿದ್ದು, ಇತರ ನಾಗರಿಕರಿಗೆ ತೊಂದರೆ ಅಥವಾ ನೋಯಿಸುವ ಯಾವುದೇ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಸಮುದಾಯದ ಸದಸ್ಯರಿಗೆ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಕರೆ ನೀಡಿದ್ದಾರೆ.

ಉಡುಪಿ: ರೀಲ್ಸ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು; ಜಲಪಾತದಲ್ಲಿ ಜಾರಿಬಿದ್ದು ಯುವಕ ಸಾವು! ವಿಡಿಯೋ ವೈರಲ್
ಯುವಕನೋರ್ವ ರೀಲ್ಸ್ ಮಾಡಲು ಹೋಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಅವಾಂತರ: ದೈತ್ಯ ಅರಳಿ ಮರ ಬಿದ್ದು ಯುವಕನಿಗೆ ಗಂಭೀರ ಗಾಯ
ಚಂದ್ರಿಕಾ ಹೋಟೆಲ್ ಜಂಕ್ಷನ್ ಎಂದೂ ಕರೆಯಲ್ಪಡುವ ಕನ್ನಿಂಗ್‌ಹ್ಯಾಮ್ ರೋಡ್-ಮಿಲ್ಲರ್ಸ್ ರಸ್ತೆ ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ದೈತ್ಯ ಅರಳಿ ಮರವೊಂದು ಕುಸಿದು ಬಿದ್ದಿದ್ದು, 18 ವರ್ಷದ ಪಾದಚಾರಿಯೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಹುಡುಗಿ ವಿಚಾರಕ್ಕೆ ಇಬ್ಬರು ಯುವಕರ ಮಧ್ಯೆ ಜಗಳ: ಕೊಲೆಯಲ್ಲಿ ಅಂತ್ಯ
ಯುವತಿ ವಿಚಾರವಾಗಿ ಇಬ್ಬರು ಯುವಕರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಗೊಂಡನಹಳ್ಳಿ ನಿವಾಸಿ ಮೊಹಮ್ಮದ್ ತಾಹಿರ್ (19) ಎಂಬಾತನನ್ನು ಚಾಮರಾಜಪೇಟೆಯ ಟಿಪ್ಪುನಗರ ನಿವಾಸಿ ನ್ಯಾಮತ್ ಎಂಬಾತ ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಬಂಧ; ಪೊಕ್ಸೊ ಕಾಯ್ದೆಯಡಿ ಯುವಕನ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಆಕೆ ಗರ್ಭಿಣಿಯಾಗಲು ಕಾರಣನಾದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಲ್ಲಾಪುರ: ಮದುವೆಗೆ ಸಿಗದ ಹೆಣ್ಣು; ಮನನೊಂದ ಯುವಕ ಆತ್ಮಹತ್ಯೆ
ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೇಲಂಗಾರ ಸಮೀಪದ ಕಿರಗಾರಿಮನೆ ಬಳಿ ಬುಧವಾರ ನಡೆದಿದೆ ನಡೆದಿದೆ.

