ರಾಜ್ಯ

ಯಲ್ಲಾಪುರ: ಮದುವೆಗೆ ಸಿಗದ ಹೆಣ್ಣು; ಮನನೊಂದ ಯುವಕ ಆತ್ಮಹತ್ಯೆ

ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೇಲಂಗಾರ ಸಮೀಪದ ಕಿರಗಾರಿಮನೆ ಬಳಿ ಬುಧವಾರ ನಡೆದಿದೆ ನಡೆದಿದೆ.

ಯಲ್ಲಾಪುರ: ಮದುವೆಗೆ ಸಿಗದ ಹೆಣ್ಣು; ಮನನೊಂದ ಯುವಕ ಆತ್ಮಹತ್ಯೆ
ಮೃತ ಯುವಕ ನಾಗರಾಜ್
Published On :

ಯಲ್ಲಾಪುರ: ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತೇಲಂಗಾರ ಸಮೀಪದ ಕಿರಗಾರಿಮನೆ ಬಳಿ ಬುಧವಾರ ನಡೆದಿದೆ ನಡೆದಿದೆ.

ಕಿರಗಾರಿಮನೆಯ ನಾಗರಾಜ ಗಣಪತಿ ಗಾಂವ್ಕರ (35) ಮೃತ ವ್ಯಕ್ತಿ. ಕೃಷಿ ಮಾಡಿಕೊಂಡಿದ್ದ ಆತ, ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನೊಂದಿದ್ದ ಎನ್ನಲಾಗಿದೆ.

ಹವ್ಯಕ ಸಮುದಾಯದ ಯುವಕರಿಗೆ ಮದುವೆಗೆ ಕನ್ಯೆ ಸಿಗುವುದು ತುಂಬಾ ಕಷ್ಟವಾಗಿದೆ. ಕೃಷಿ ಮಾಡಿಕೊಂಡಿರುವ ಯುವಕರಿಗಂತೂ ಹೆಣ್ಣು ಕೊಡುವವರೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆಯ ಸಮೀಪದ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಯಲ್ಲಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.