WHO

ಕೋವಿಡ್ ವೈರಸ್ ನ MU, C.1.2 ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ: ಇನ್ಸಾಕ್ ಮಹತ್ವದ ಮಾಹಿತಿ
ಜಗತ್ತಿನ 225ಕ್ಕೂ ಅಧಿಕ ದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಾರಕ ಕೋವಿಡ್ ವೈರಸ್ ನ MU, C.1.2 ರೂಪಾಂತರಗಳು ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಜೀನೋಮ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಂ ಇನ್ಸಾಕ್ (INSACOG) ಮಹತ್ವದ ಮಾಹಿತಿ ನೀಡಿದೆ.

ಕೋವಿಡ್ ಲಸಿಕೆಗಳು ಸಾಕಷ್ಟು ಪರಿಣಾಮಕಾರಿ; ಮೂರನೇ ಡೋಸ್ ಅಗತ್ಯವಿಲ್ಲ: ಲ್ಯಾನ್ಸೆಟ್ ವರದಿ
ಮಹಾಮಾರಿ ಕೊರೋನಾ ತೀವ್ರತೆಯನ್ನು ತಡೆಗಟ್ಟುವಲ್ಲಿ ಲಸಿಕೆಗಳು ಸಾಕಷ್ಟು ಪರಿಣಾಮಕಾರಿಯಾಗಿದ್ದು, ಪ್ರಸ್ತುತ ಜನರಿಗೆ ಮೂರನೇ ಡೋಸ್ ನೀಡುವ ಅಗತ್ಯವಿಲ್ಲ ಎಂದು ದಿ ಲ್ಯಾನ್ಸೆಟ್ ವರದಿಯಲ್ಲಿ ತಿಳಿಸಿದೆ.

ಲಸಿಕೆಗೆ ಜಗ್ಗಲ್ಲ ಕೋವಿಡ್ ನ ಹೊಸ ತಳಿ ಮ್ಯು: ವಿಶ್ವ ಆರೋಗ್ಯ ಸಂಸ್ಥೆ
ಹೊಸ ಕೊರೊನಾ ರೂಪಾಂತರ ತಳಿ "ಮ್ಯು" ಮೇಲೆ ತೀವ್ರ ನಿಗಾ ಇರಿಸಿರುವುದಾಗಿ ತಿಳಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಹೊಸ ತಳಿ ಲಸಿಕೆ ನಿರೋಧಕ (ಲಸಿಕೆಗೂ ಬಗ್ಗದ) ವಾಗಿರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಕೊಲಂಬಿಯಾದಲ್ಲಿ ಪತ್ತೆಯಾದ ಹೊಸ ಕೊರೊನಾ ರೂಪಂತರಿ ತಳಿ 'ಮ್ಯು' ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ
ವೈಜ್ಞಾನಿಕವಾಗಿ ಬಿ.1.621 ಎಂದು ಕರೆಯಲ್ಪಡುವ ಮ್ಯು ತಳಿ ಮುಂಬರುವ ದಿನಗಳಲ್ಲಿ ಜಗತ್ತಿಗೆ ಆತಂಕವನ್ನು ತಂದೊಡ್ಡಬಲ್ಲ ಸಾಧ್ಯತೆ ಇದೆ ಎಂದು ತಜ್ನರು ಅಭಿಪ್ರಾಯ ಪಟ್ಟಿದ್ದಾರೆ.

ಕೋವಿಡ್ ಮೂಲ ಕುರಿತ ಅತಿ ಗಂಭೀರವಾದ ಮಾಹಿತಿಯನ್ನು ಚೀನಾ ಮುಚ್ಚಿಟ್ಟಿದೆ: ಅಮೆರಿಕ ಅಧ್ಯಕ್ಷ ಜೋ ಬೈಡನ್
ಜಗತ್ತಿನ 220ಕ್ಕೂ ಹೆಚ್ಚು ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಮೂಲದ ಕುರಿತ ಗಂಭೀರ ವಿಚಾರವನ್ನು ಚೀನಾ ಮುಚ್ಚಿಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗಂಭೀರ ಆರೋಪ ಮಾಡಿದ್ದಾರೆ.

ಕೋವಿಡ್ ವೈರಸ್ ಮೂಲ ಕುರಿತ ತನಿಖೆಗೆ ಚೀನಾ ಅಡ್ಡಿ: 2ನೇ ಹಂತದ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ತಿರಸ್ಕರಣೆ
ಜಗತ್ತಿನಾದ್ಯಂತ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮೂಲ ಪತ್ತೆ ಮಾಡುವ ವಿಶ್ವ ಆರೋಗ್ಯ ಸಂಸ್ಥೆ ಪ್ರಯತ್ನಕ್ಕೆ ಚೀನಾ ಸರ್ಕಾರ ಅಡ್ಡಗಾಲು ಹಾಕಿದ್ದು. WHO ತನಿಖೆಯನ್ನು ತಿರಸ್ಕರಿಸಿದೆ.

ಕೋವಿಡ್ ಲಸಿಕೆ ಸಂಪೂರ್ಣ ರಕ್ಷಣೆ ನೀಡದಿರಬಹುದು ಆದರೆ ಸಾವಿನ ಅಪಾಯ ಕಡಿಮೆ ಮಾಡುತ್ತದೆ: ಸೌಮ್ಯ ಸ್ವಾಮಿನಾಥನ್
ಕೊರೋನಾ ಸಾರ್ಸ್-ಕೋವಿ 2 ವಿವಿಧ ರೂಪಾಂತರಗಳ ವಿರುದ್ಧ ಕೋವಿಡ್ ಲಸಿಕೆ ಸಂಪೂರ್ಣ ರಕ್ಷಣೆ ನೀಡದಿರಬಹುದು ಆದರೆ ಖಂಡಿತವಾಗಿಯೂ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಡಬ್ಲ್ಯುಎಚ್‌ಒನ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಜಾಗತಿಕವಾಗಿ ನಾಲ್ಕು ಮಿಲಿಯನ್ ಹೊಸ ಕೊರೋನಾ ಪ್ರಕರಣಗಳು ವರದಿ: ಡಬ್ಲ್ಯೂಎಚ್ ಒ
ಕಳೆದ ವಾರದಲ್ಲಿ ಜಾಗತಿಕವಾಗಿ ನಾಲ್ಕು ಮಿಲಿಯನ್ ಗೂ ಹೆಚ್ಚು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ, ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ ಬಹುತೇಕ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕುರಿತ ವಾರದ ವರದಿಯಲ್ಲಿ ಹೇಳಿದೆ.

ಕೊರೋನಾ ವೈರಸ್ ನ ಡೆಲ್ಟಾ ರೂಪಾಂತರದಿಂದ ಅಪಾಯ: ಚೀನಾದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಕೊರೋನಾ ವೈರಸ್ ಮೂಲ ಚೀನಾದಲ್ಲಿ ಮತ್ತೆ ಕೋವಿಡ್ ಅಟ್ಟಹಾಸ ಆರಂಭವಾಗಿದ್ದು, ಚೀನಾದ ಫ್ಯೂಜಿಯನ್ ಪ್ರಾಂತ್ಯ ಮತ್ತು ಚೊಂಗ್ಕಿಂಗ್ ನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

