WHO

ವಿಶ್ವ ಆರೋಗ್ಯ ಸಂಸ್ಥೆಗೆ ಕೊರೋನಾ ಸೋಂಕಿನ ಮಾಹಿತಿ ನೀಡುವಲ್ಲಿ ತಡ ಮಾಡಿಲ್ಲ: ಚೀನಾ ಸಮರ್ಥನೆ
ಕೊರೋನಾ ಸಾಂಕ್ರಾಮಿಕ ರೋಗದ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಮುಂಚಿತವಾಗಿಯೇ ಮಾಹಿತಿ ನೀಡುವಲ್ಲಿ ಚೀನಾ ವಿಳಂಬ ಮಾಡಿತು ಎಂಬ ಸುದ್ದಿಗಳು ವಾಸ್ತವಕ್ಕೆ ದೂರವಾದವು ಎಂದು ಚೀನಾ ಹೇಳಿದೆ.

ಕೋವಿಡ್-19 ಚಿಕಿತ್ಸೆಗಾಗಿ ಅಧಿಕ ಪ್ರಮಾಣದ ಅ್ಯಂಟಿ ಬಯಾಟಿಕ್ ಗಳ ಬಳಕೆಯಿಂದ ಜೀವಕ್ಕೆ ಹಾನಿ: ವಿಶ್ವ ಆರೋಗ್ಯ ಸಂಸ್ಥೆ
ಮಾರಕ ಕೊರೋನಾ ವೈರಸ್ ಸೋಂಕಿತರಿಗೆ ನೀಡುವ ಚಿಕಿತ್ಸೆ ವೇಳೆ ಅಧಿಕ ಪ್ರಮಾಣದ ಅ್ಯಂಟಿ ಬಯಾಟಿಕ್ (ಪ್ರತಿಜೀವಕ) ಗಳನ್ನು ನೀಡುವುದರಿಂದ ರೋಗಿಯ ಚೇತರಿಕೆಗಿಂತ ಪ್ರಾಣಾಪಾಯವೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಸೋಂಕಿತರ ಸಂಖ್ಯೆ ಹೆಚ್ಚಳ: ಕೊರೋನಾ ಪೀಡಿತ ಜಾಗತಿಕ ದೇಶಗಳ ಪಟ್ಟಿಯಲ್ಲಿ 9 ರಿಂದ 7ನೇ ಸ್ಥಾನಕ್ಕೇರಿದ ಭಾರತ!
ದೇಶಾದ್ಯಂತ ಕೊರೋನಾ ಆರ್ಭಟ ಜೋರಾಗಿದ್ದು, ದಿನೇ ದಿನೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕೊರೋನಾ ಪೀಡಿತ ಜಾಗತಿಕ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಭಾರತ ದೇಶ ಇದೀಗ 7ನೇ ಸ್ಥಾನಕ್ಕೇರಿದೆ.

ಕೊರೋನಾ ವೈರಸ್: ವಿಶ್ವಾದ್ಯಂತ 1.08 ಲಕ್ಷ ರೋಗಿಗಳು ಗುಣಮುಖ, ಸೋಂಕಿತರ ಸಂಖ್ಯೆ 6.15 ಮಿಲಿಯನ್ ಗೆ ಏರಿಕೆ
ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ವಿಶ್ವಾದ್ಯಂತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಕಳೆದ 24 ಗಂಟೆಗಳ ಅವಧಿಯಲ್ಲಿ ಪ್ರಪಂಚದಾದ್ಯಂತ 1.08 ಲಕ್ಷ ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ಎಲ್ಲಾ ಸಂಬಂಧವನ್ನು ಅಮೆರಿಕಾ ಕಡಿದುಕೊಳ್ಳುತ್ತಿದೆ: ಡೊನಾಲ್ಡ್ ಟ್ರಂಪ್
ಕೊರೋನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಚೀನಾ ಪರ ಪಕ್ಷಪಾತ ಮಾಡುತ್ತಿದೆ ಎಂದು ನಿರಂತರವಾಗಿ ದೂರಿಕೊಂಡು ಬಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಡಬ್ಲ್ಯೂಹೆಚ್ಒ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಅಮೆರಿಕಾ ಕಡಿದುಕೊಂಡಿದೆ ಎಂದು ಘೋಷಣೆ ಮಾಡಿದ್ದಾರೆ.

ಕೊರೋನಾ ವೈರಸ್ ಮೂಲ ಹುಡುಕಲು ಉತ್ತಮ ಸಹಕಾರ: ಮತ್ತೆ ಚೀನಾ ಬೆನ್ನಿಗೆ ನಿಂತ ವಿಶ್ವ ಆರೋಗ್ಯ ಸಂಸ್ಥೆ
ವಿಶ್ವದ 213 ರಾಷ್ಟ್ರಗಳಲ್ಲಿ ತನ್ನ ಆರ್ಭಟ ಮುಂದುವರೆಸಿರುವ ಮಾರಕ ಕೊರೋನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಮತ್ತೆ ಚೀನಾ ಬೆನ್ನಿಗೆ ನಿಂತಿದ್ದು, ವೈರಸ್ ಮೂಲ ಹುಡುಕು ಕಾರ್ಯದಲ್ಲಿ ಚೀನಾ ಉತ್ತಮ ಸಹಕಾರ ನೀಡುತ್ತಿದೆ ಎಂದು ಹೇಳಿದೆ.

ಕೊರೋನಾ ವೈರಸ್: ಹೈಡ್ರಾಕ್ಸಿಕ್ಲೋರೋಕ್ವಿನ್ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಡೆ
ಮಾರಕ ಕೊರೋನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎಂದೇ ಹೇಳಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ ಆರೋಗ್ಯ ಸಂಸ್ಥೆ ತಡೆ ನೀಡಿದೆ.

ಕೊರೋನಾ ವೈರಸ್: ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 5.3 ಮಿಲಿಯನ್ ಗೆ ಏರಿಕೆ, 342,000 ಸಾವು!
ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3, ಲಕ್ಷದ 42 ಸಾವಿರ ಗಡಿ ದಾಟಿದ್ದು, ಸೋಂಕಿತರ ಸಂಖ್ಯೆ 5.3 ಮಿಲಿಯನ್ ಗಡಿ ದಾಟಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್
ಕೋವಿಡ್-19 ಸಮಸ್ಯೆ ನಡುವೆ ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷ್ ವರ್ಧನ್ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಇದೇ 22ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

