WHO

ಕೋವ್ಯಾಕ್ಸಿನ್ ತುರ್ತು ಬಳಕೆ ಪಟ್ಟಿಯಲ್ಲಿನ ಸ್ಥಾನಕ್ಕಾಗಿ ಡಬ್ಲ್ಯುಎಚ್‌ಒಗೆ ಶೇ.90 ರಷ್ಟು ದಾಖಲೆ ಸಲ್ಲಿಕೆ: ಭಾರತ್ ಬಯೋಟೆಕ್
ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಪಟ್ಟಿ(ಇಯುಎಲ್)ಯಲ್ಲಿ ಸ್ಥಾನ ಪಡೆಯುವ ಸಂಬಂಧ ಈಗಾಗಲೇ ಶೇ .90ರಷ್ಟು ದಾಖಲೆಗಳನ್ನು ಡಬ್ಲ್ಯುಎಚ್‌ಒಗೆ ಸಲ್ಲಿಸಲಾಗಿದೆ ಎಂದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್(ಬಿಬಿಐಎಲ್) ಸರ್ಕಾರಕ್ಕೆ ತಿಳಿಸಿದೆ.

ಕೋವಿಡ್ ವ್ಯಾಕ್ಸಿನ್ ಪಾಸ್ ಪೋರ್ಟ್ ವಿಚಾರದಲ್ಲಿ ಡಬ್ಲ್ಯೂಹೆಚ್ ಒ ಮಟ್ಟದಲ್ಲಿ ಇನ್ನೂ ಒಮ್ಮತ ಮೂಡಿಲ್ಲ: ಕೇಂದ್ರ ಸರ್ಕಾರ
ಕೊರೋನಾವೈರಸ್ ಸೋಂಕಿನ ವಿರುದ್ಧ ಸಂಪೂರ್ಣ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ವ್ಯಾಕ್ಸಿನ್ ಪಾಸ್ ಪೋರ್ಟ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಟ್ಟದಲ್ಲಿ ಒಮ್ಮತ ಮೂಡಿಲ್ಲ. ಇನ್ನೂ ಚರ್ಚೆ ನಡೆಯುತ್ತಿರುವುದಾಗಿ ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ಭಾರತದಲ್ಲಿ ಕಳೆದ ವಾರದಲ್ಲಿ ಶೇ.13ರಷ್ಟು ಹೊಸ ಕೋವಿಡ್ ಸೋಂಕು ಪ್ರಕರಣಗಳ ಇಳಿಕೆ: ವಿಶ್ವ ಆರೋಗ್ಯ ಸಂಸ್ಥೆ
ಕಳೆದೊಂದು ವಾರದ ಅವಧಿಯಲ್ಲಿ ಭಾರತದ ಕೋವಿಡ್ ಸೋಂಕು ಪ್ರಕರಣಗಳ ಪ್ರಮಾಣದಲ್ಲಿ ಶೇ.13ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ರಾಜಸ್ಥಾನಕ್ಕೆ 100 ಆಕ್ಸಿಜನ್ ಕಾನ್ಸೆಂಟ್ರೇಟರ್ ದೇಣಿಗೆ
ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯ ಜೈಪುರ ಘಟಕ ಸೋಮವಾರ 100 ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳನ್ನು ರಾಜಸ್ಥಾನ ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದೆ.

'ಕೊರೋನಾ ವೈರಸ್ ಮೂಲದ ಶೋಧ ಪೂರ್ಣಗೊಂಡಿಲ್ಲ'; ಚೀನಾ ಬೆಂಬಿಡದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ
ಇಡೀ ಜಗತ್ತೀಗೇ ಮಾರಕವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಮೂಲದ ಕುರಿತ ತನಿಖೆ ಮತ್ತು ಶೋಧ ಇನ್ನೂ ಪೂರ್ಣಗೊಂಡಿಲ್ಲ ಎಂದು ಹೇಳುವ ಮೂಲಕ ಚೀನಾದಲ್ಲಿ ಮತ್ತಷ್ಟು ತನಿಖೆ ಮಾಡಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಮುಂದಾಗಿದೆ.

ಭಾರತದ ಕೋವಿಡ್-19 ಪರಿಸ್ಥಿತಿ ತೀವ್ರ ಕಳವಳಕಾರಿ; ಸಾಂಕ್ರಾಮಿಕದ ಎರಡನೇ ವರ್ಷ ಅತ್ಯಂತ ಮಾರಕ: ಡಬ್ಲ್ಯುಹೆಚ್ಒ
ಭಾರತದ ಕೋವಿಡ್-19 ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದ್ದು ಹಲವು ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಆತಂಕಕಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಭಾರತದಲ್ಲಿ ವ್ಯಾಪಕವಾಗಿರುವ ಕೊರೋನಾ ರೂಪಾಂತರಿ ವೈರಸ್ 44 ದೇಶಗಳಲ್ಲಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಂಡುಬಂದ ಕೋವಿಡ್-19 ವೈರಸ್ ನ B.1.617 ರೂಪಾಂತರವು ಜಗತ್ತಿನ 44 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ.

ಕೋವಿಡ್ ಬಿ.1.617 ರೂಪಾಂತರ ಭಾರತದ್ದಲ್ಲ; ಪದ ಬಳಕೆಗೆ ಆಧಾರವಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ
ದೇಶದಲ್ಲಿ ಕೊರೋನಾ ಎರಡನೇ ಅಲೆಗೆ ಕಾರಣವಾಗಿರುವ 'ಭಾರತೀಯ ರೂಪಾಂತರ' ಎಂದು ಕರೆಯಲ್ಪಡುವ ಬಿ.1.617 ರೂಪಾಂತರ ಪದ ಬಳಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಡಬ್ಲ್ಯುಎಚ್‌ಒ 'ಭಾರತೀಯ' ಎಂಬ ಪದವನ್ನು ಎಲ್ಲೂ ಬಳಸಿಲ್ಲ ಎಂದು ಹೇಳಿದೆ.

ಭಾರತದ ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾದ ಐವರ್ಮೆಕ್ಟಿನ್ ಔಷಧಿ ಬಗ್ಗೆ ಡಬ್ಲ್ಯುಹೆಚ್ಒ ಎಚ್ಚರಿಕೆ
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾದ ಐವರ್ಮೆಕ್ಟಿನ್ ಔಷಧಿ ಬಗ್ಗೆ ಡಬ್ಲ್ಯುಹೆಚ್ಒ ಎಚ್ಚರಿಕೆ ನೀಡಿದೆ.

