Whitefield

ಒಂದೇ ಮಳೆಗೆ ಬೆಂಗಳೂರಿನ ಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣ ಜಲಾವೃತ!
ಒಂದು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣವು ನಿನ್ನೆ ಮಂಗಳವಾರ ಸಂಜೆ ನಗರದ ಕೆಲವು ಭಾಗಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಾವೃತವಾಗಿದೆ.

ವೈಟ್‌ಫೀಲ್ಡ್- ಕೆಆರ್ ಪುರ ಮೆಟ್ರೊ ಮಾರ್ಗಕ್ಕೆ ಪ್ರಧಾನಿ ಚಾಲನೆ, ಮಹಿಳಾ ಲೋಕೋ ಪೈಲಟ್ ಆಗಿರುವ ಮೆಟ್ರೊದಲ್ಲಿ ಮೋದಿ ಸಂಚಾರ
ವೈಟ್‌ಫೀಲ್ಡ್ ಕಾಡುಗೋಡಿಯಿಂದ ಕೆಆರ್ ಪುರದವರೆಗಿನ 13.71 ಕಿಮೀ ಪೂರ್ವ ವಿಸ್ತರಣೆ ಮಾರ್ಗವನ್ನು 12 ಹೊಚ್ಚ ಹೊಸ ನಿಲ್ದಾಣಗಳನ್ನು ಹೊಂದಿರುವ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ.

ವೈಟ್‌ಫೀಲ್ಡ್ ಮೆಟ್ರೊ: ಅಧಿಕಾರಿಗಳಿಂದ ಸುರಕ್ಷತೆ ಪರಿಶೀಲನೆ ಕಾರ್ಯ ಆರಂಭ
ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ 13.71 ಕಿ.ಮೀ ಉದ್ದದ ವಿಸ್ತೃತ ಪರ್ಪಲ್ ಲೈನ್‌ನಲ್ಲಿ ಮೆಟ್ರೋ ಕಾರ್ಯಾಚರಣೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು 3 ದಿನಗಳ ಪರಿಶೀಲನೆ ಕಾರ್ಯವನ್ನು ಬುಧವಾರ ಆರಂಭಿಸಿದ್ದಾರೆ.

ನಮ್ಮ ಮೆಟ್ರೋ: ವೈಟ್‌ಫೀಲ್ಡ್-ಕೆಆರ್ ಪುರಂ ಮಾರ್ಗದಲ್ಲಿ ಮೊದಲ ಬಾರಿಗೆ ಗಂಟೆಗೆ 80 ಕಿಮೀ ವೇಗದಲ್ಲಿ ಪ್ರಾಯೋಗಿಕ ಸಂಚಾರ
ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ಮೆಟ್ರೋ ನಿಲ್ದಾಣಗಳ ನಡುವೆ ಗಂಟೆಗೆ 80 ಕಿಮೀ ವೇಗದಲ್ಲಿ ಮೊದಲ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಭಾನುವಾರ ಮಧ್ಯಾಹ್ನ ಸರಾಗವಾಗಿ ನಡೆಯಿತು. ಮಾರ್ಚ್ ವೇಳೆಗೆ ಈ ಪರ್ಪಲ್ ಲೈನ್ ವಿಸ್ತರಣೆಯಲ್ಲಿ ಮೆಟ್ರೋ ಕಾರ್ಯಾಚರಣೆಗಳ ಪ್ರಸ್ತಾವಿತ ಕಾರ್ಯಾರಂಭದ ಕಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ.

ಬೆಂಗಳೂರು: ವೈಟ್‌ಫೀಲ್ಡ್ ಗೂಡ್ಸ್ ಟರ್ಮಿನಲ್ ಟ್ರ್ಯಾಕ್‌ನಲ್ಲಿ ವಿದ್ಯುತ್ ಶಾಕ್ ಹೊಡೆದು ಇಬ್ಬರು ಮಕ್ಕಳಿಗೆ ಗಂಭೀರ ಗಾಯ
ವೈಟ್‌ಫೀಲ್ಡ್ ಸ್ಯಾಟಲೈಟ್ ಗೂಡ್ಸ್ ಟರ್ಮಿನಲ್ (ಎಸ್‌ಜಿಡಬ್ಲ್ಯುಎಫ್) ಟ್ರ್ಯಾಕ್‌ನಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾಕ್ ಹೊಡೆದು ಇಬ್ಬರು ಮಕ್ಕಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ.

ಚರಂಡಿ ತುಂಬೆಲ್ಲಾ ಬೀಳಿಸಿದ ಕಟ್ಟಡಗಳ ಅವಶೇಷ, ನೀರು ತುಂಬಿಕೊಂಡು ದುರ್ನಾತ: ವೈಟ್‌ಫೀಲ್ಡ್ ನಿವಾಸಿಗಳ ಅಳಲು
ಕೆಸರು, ಕೊಚ್ಚೆ, ಹೂಳು ತುಂಬಿಕೊಂಡಿದ್ದ ರಾಜಕಾಲುವೆಗಳಿಂದ ದುರ್ನಾತ ಬೀರುತ್ತಿದೆ ಎಂದು ವೈಟ್‌ಫೀಲ್ಡ್ ಮತ್ತು ಪ್ರೆಸ್ಟೀಜ್ ಓಝೋನ್ ಅಪಾರ್ಟ್‌ಮೆಂಟ್ ನಿವಾಸಿಗಳು ಆರೋಪಿಸುತ್ತಿದ್ದಾರೆ. ಮುಚ್ಚಿಹೋಗಿರುವ ಚರಂಡಿಗಳನ್ನು ತೆರವುಗೊಳಿಸದಿದ್ದಲ್ಲಿ ಭವಿಷ್ಯದಲ್ಲಿ ಮತ್ತೆ ಪ್ರವಾಹ ಉಂಟಾಗುವ ಭೀತಿ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.

ಬಿಬಿಎಂಪಿ ಅಕ್ರಮ ಒತ್ತುವರಿ ತೆರವು ಕಾರ್ಯ: ಕೆ ಆರ್ ಪುರಂ, ಹೂಡಿ, ವೈಟ್ ಫೀಲ್ಡ್ ನಲ್ಲಿ ಘರ್ಜಿಸಿದ ಬುಲ್ಡೋಜರ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ, ಹೂಡಿ, ಟಿಝಡ್ ಅಪಾರ್ಟ್ ಮೆಂಟ್, ಮಹದೇವಪುರ ವಲಯ ಮತ್ತು ಕೆ ಆರ್ ಪುರಂನ ಗಾಯತ್ರಿ ಲೇ ಔಟ್ ನಲ್ಲಿ ರಾಜಕಾಲುವೆ, ಒಳಚರಂಡಿಯ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು.

ಬೆಂಗಳೂರು ತಲುಪಿದ 29ನೇ ಆಕ್ಸಿಜನ್ ಎಕ್ಸ್ ಪ್ರೆಸ್: 126.7 ಮೆಟ್ರಿಕ್ ಟನ್ ಪ್ರಾಣವಾಯು ಆಗಮನ
29ನೇ ಆಕ್ಸಿಜನ್ ಎಕ್ಸ್ ಪ್ರೆಸ್ ವಿಶೇಷ ರೈಲು ಇಂದು ಬೆಂಗಳೂರಿಗೆ ಆಗಮಿಸಿದೆ. 126.7 ಮೆಟ್ರಿಕ್ ಟನ್ ವೈದ್ಯಕೀಯ ಲಿಕ್ವಿಡ್ ಆಕ್ಸಿಜನ್ ಹೊತ್ತ ಈ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನ ವೈಟ್ ಫೀಲ್ಡ್ ಕಂಟೈನರ್ ಡಿಪೋ ತಲುಪಿರುವುದಾಗಿ ಪ್ರಸಾರ ಭಾರತಿ ಟ್ವೀಟ್ ಮಾಡಿದೆ.

ಬೆಂಗಳೂರಿನಲ್ಲಿ ಮಾದರಿ ಸೇವೆ: ಸರ್ಕಾರಿ ವೈದ್ಯರಿಗೆ ಚಹಾ, ಕಾಫಿ ನೀಡಿ ಒತ್ತಡ ನಿವಾರಣೆಗೆ ಸ್ವಯಂಸೇವಕರು ಮುಂದು
ವೈಟ್‌ಫೀಲ್ಡ್‌ನ ಅಪಾರ್ಟ್‌ಮೆಂಟ್‌ಗಳ ಸ್ವಯಂಸೇವಕರು ಕೋವಿಡ್ ಕಾಲದಲ್ಲಿ ಬಿಡುವಿಲ್ಲದೆ ದುಡಿಯುತ್ತಿರುವ ನಗರದ ಐದು ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳಿಗೆ ಒಂದು ಕಪ್ ಕಾಫಿ ಅಥವಾ ಚಹಾ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

