Washington

ಭಾರತೀಯ ಮೂಲದ ನಿಕ್ಕಿ ಹ್ಯಾಲೆಗೆ ಮಹತ್ವದ ಆಫರ್ ನೀಡಿದ್ದ ಡೊನಾಲ್ಡ್ ಟ್ರಂಪ್
2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ಕೂಡಲೇ ರಾಜ್ಯ ಕಾರ್ಯದರ್ಶಿ ಹುದ್ದೆಯ ಆಫರ್ ನೀಡಿದ್ದರು, ಆದರೆ, ಅದನ್ನು ನಿರಾಕರಿಸಿದ್ದಾಗಿ ಜನಪ್ರಿಯ ಭಾರತೀಯ- ಅಮೆರಿಕನ್ ರಿಪಬ್ಲಿಕನ್ ಪಕ್ಷದ ರಾಜಕಾರಣಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಕೋವಿಡ್-19: ಅಧ್ಯಕ್ಷೀಯ ಚುನಾವಣೆ ನಡುವೆಯೇ ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಾಖಲೆ ಏರಿಕೆ
ಮಾರಕ ಕೊರೋನಾ ವೈರಸ್ ದಾಳಿಗೆ ಭೀಕರವಾಗಿ ತುತ್ತಾಗಿದ್ದ ಅಮೆರಿಕದಲ್ಲಿ ಮತ್ತೆ ಸೋಂಕು ತನ್ನ ಎರಡನೇ ಅಲೆ ಆರಂಭಿಸಿದ್ದು. ಕಳೆದ 24 ಗಂಟೆಗಳ ಅವಧಿಯಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ಫತ್ಫ್ (FATF): ಗ್ರೇ ಪಟ್ಟಿಯಲ್ಲಿ ಉಳಿಯಲಿರುವ ಪಾಕಿಸ್ತಾನ
ಗ್ಲೋಬಲ್ ವಾಚ್ ಡಾಗ್ ಸಿದ್ದ ಪಡಿಸಿರುವ ಹಣಕಾಸು ಕ್ರಿಯಾ ಯೋಜನೆಯ(ಎಫ್ಎಟಿಎಫ್) 27 ಅಂಶಗಳಲ್ಲಿ ಆರು ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಪಾಕಿಸ್ತಾನ ಫತ್ಫ್ ನ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ ಎಂದು ಹೇಳಲಾಗಿದೆ.

ಚೀನಾ ವೈರಸ್ ಕಣ್ಮರೆಯಾಗಲಿದೆ: ಡೊನಾಲ್ಡ್ ಟ್ರಂಪ್ ಅತೀವ ವಿಶ್ವಾಸ
ಕೋವಿಡ್-19 ಸೋಂಕು ತಗುಲಿದ ನಂತರ ಇದೇ ಮೊದಲ ಬಾರಿಗೆ ಮಾಸ್ಕ್ ಧರಿಸಿದೆ ಶನಿವಾರ ಸಂಜೆ ಶ್ವೇತಭವನದ ಬಾಲ್ಕನಿಯಲ್ಲಿ ನಿಂತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಾನು ಆರೋಗ್ಯವಾಗಿದ್ದು, ಚೀನಾ ವೈರಸ್ ಕಣ್ಮರೆಯಾಗಲಿದೆ ಎಂದರು.

ಶೇ.6ಕ್ಕಿಂತ ಹೆಚ್ಚು ಬಡತನ ರೇಖೆಗಿಂತ ಕೆಳಗಿರುವ ಭಾರತೀಯ-ಅಮೆರಿಕನ್ನರು: ವರದಿ
ಸಾಮಾನ್ಯವಾಗಿ ಅಮೆರಿಕದಲ್ಲಿರುವ ಭಾರತೀಯರೆಲ್ಲರೂ ಶ್ರೀಮಂತರು ಎಂದೇ ಭಾವಿಸಲಾಗುತ್ತದೆ. ಆದರೆ, ಅಲ್ಲಿಯೂ ಕೂಡಾ ಶೇ. 6ಕ್ಕಿಂತಲೂ ಹೆಚ್ಚು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವುದನ್ನು ವರದಿಯೊಂದು ತಿಳಿಸಿದೆ.

73 ದಶಲಕ್ಷಕ್ಕೂ ಅಧಿಕ ಜನರಿಂದ ಅಮೆರಿಕ ಅಧ್ಯಕ್ಷೀಯ ಚರ್ಚೆ ವೀಕ್ಷಣೆ: 2016ಕ್ಕೆ ಹೋಲಿಸಿದರೆ ಶೇ.13 ರಷ್ಟು ಕಡಿಮೆ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಜೋ ಬಿಡೆನ್ ನಡುವಿನ ಮೊದಲ ಅಧ್ಯಕ್ಷೀಯ ಚರ್ಚೆಯನ್ನು 73 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ನೀಲ್ಸನ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವಾದ್ಯಂತ ಕೋವಿಡ್-19 ಹರಡಿರುವುದಕ್ಕೆ ವಿಶ್ವಸಂಸ್ಥೆ ಚೀನಾವನ್ನು ಹೊಣೆಗಾರ ರಾಷ್ಟ್ರವಾಗಿ ಮಾಡಬೇಕು: ಟ್ರಂಪ್
200,000 ಅಮೆರಿಕದ ಜನರು ಸೇರಿದಂತೆ ವಿಶ್ವದಾದ್ಯಂತ ಸುಮಾರು ಒಂದು ಮಿಲಿಯನ್ ಜನರ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ತಡೆಗಟ್ಟುವಲ್ಲಿ ವಿಫಲವಾಗಿರುವುದಕ್ಕೆ ಚೀನಾ ದೇಶವನ್ನು ಹೊಣೆಗಾರ ರಾಷ್ಟ್ರವಾಗಿ ವಿಶ್ವಸಂಸ್ಥೆ ಮಾಡಬೇಕೆಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಶ್ವೇತಭವನಕ್ಕೆ ಲಕೋಟೆಯ ಮೂಲಕ ಮಾರಣಾಂತಿಕ ವಿಷ ರವಾನೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರುವ ಶ್ವೇತಭವನಕ್ಕೆ ಲಕೋಟೆಯ ಮೂಲಕ ಮಾರಣಾಂತಿಕ ವಿಷ ರವಾನೆ ಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಕೋವಿಡ್-19: ಲಸಿಕೆಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ!
ರೋಗ ಬಂದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದ ತಡೆಯುವುದು ಸೂಕ್ತ. ಅಂತೆಯೇ ಸೋಂಕು ತಗುಲಿದ ಬಳಿಕ ನೀಡುವ ಲಸಿಕೆಗಿಂತ ರೋಗ ಬಾರದಂತೆ ತಡೆಯುವ ಮಾಸ್ಕ್ ಹೆಚ್ಚು ಸುರಕ್ಷಿತ ಎಂದು ಅಮೆರಿಕಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ನಿರ್ದೇಶಕ ರಾಬರ್ಟ್ ರೆಡ್ಫೀಲ್ಡ್ ಹೇಳಿದ್ದಾರೆ.

