Wang Yi

ಭಾರತದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧ, ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಒತ್ತು: ವಿದೇಶಾಂಗ ಸಚಿವ ವಾಂಗ್ ಯಿ
ಚೀನಾ-ಭಾರತ ನಡುವಿನ ಸಂಬಂಧಗಳ ಸ್ಥಿರ ಮತ್ತು ಬಲವಾದ ಅಭಿವೃದ್ಧಿಗಾಗಿ ನಾವು ಭಾರತದೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ಭಾರತ-ಚೀನಾ ಸಂಬಂಧ ಮೂರು ಪರಸ್ಪರ ವಿಷಯಗಳನ್ನು ಆಧರಿಸಿರಬೇಕು: ಚೀನಾ ವಿದೇಶಾಂಗ ಸಚಿವರಿಗೆ ಜೈಶಂಕರ್ ಖಡಕ್ ಮಾತು
ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯ ಸಮಸ್ಯೆಗಳು ಸೇರಿದಂತೆ ಎಲ್ಲಾ ಪ್ರಮುಖ ಸಮಸ್ಯೆಗಳಿಗೆ ಆದಷ್ಟು ಶೀಘ್ರವೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ವಿದೇಶಾಂಗ ಇಲಾಖೆ ಸಚಿವ ಎಸ್ ಜೈಶಂಕರ್ ಗುರುವಾರ ತನ್ನ ಸಹವರ್ತಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರಿಗೆ ಮನವರಿಕೆ ಮಾಡಿದ್ದಾರೆ.

ಭಾರತದೊಂದಿಗಿನ ಸಂಬಂಧವನ್ನು ಮೂರನೇ ದೇಶದ ಮೂಲಕ ನೋಡಬೇಡಿ: ವಿದೇಶಾಂಗ ಸಚಿವರ ಮಾತಿಗೆ ಚೀನಾ ಸಹಮತ
ಬೀಜಿಂಗ್ ಭಾರತದೊಂದಿಗಿನ ತನ್ನ ಸಂಬಂಧವನ್ನು ಮೂರನೇ ರಾಷ್ಟ್ರದ ಮೂಲಕ ನೋಡಬಾರದು, ಚೀನಾ-ಭಾರತ ಸಂಬಂಧಗಳು ತಮ್ಮದೇ ಆದ "ಆಂತರಿಕ ತರ್ಕವನ್ನು" ಹೊಂದಿವೆ ಎಂಬ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪ್ರತಿಪಾದನೆಯನ್ನು ಒಪ್ಪುವುದಾಗಿ ಚೀನಾ ಶುಕ್ರವಾರ ಹೇಳಿದೆ.

ಫೂರ್ವ ಲಡಾಖ್: ಗಡಿ ವಿವಾದ ಕುರಿತು ಚೀನಾ ಸಚಿವರೊಂದಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಹತ್ವದ ಮಾತುಕತೆ
ಪೂರ್ವ ಲಡಾಖ್‌ನ ‘ವಾಸ್ತವ ಗಡಿ ನಿಯಂತ್ರಣ ರೇಖೆ‘ಯುದ್ದಕ್ಕೂ ಉಳಿದಿರುವ ಸಮಸ್ಯೆಗಳ ಕುರಿತಂತೆ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಮಹತ್ವದ ಮಾತುಕತೆ ನಡೆಸಿದ್ದಾರೆ.

ತಾಲಿಬಾನ್ ಗೆ ಸಕ್ರಿಯ ಮಾರ್ಗದರ್ಶನ ನೀಡಿ: ಅಮೆರಿಕಕ್ಕೆ ಚೀನಾ ಸಲಹೆ
ಸತತ 20 ವರ್ಷಗಳ ಕಾಲ ಆಫ್ಗಾನಿಸ್ತಾನವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಅಮೆರಿಕಗೆ ಚೀನಾ ಸರ್ಕಾರ ಸಲಹೆ ನೀಡಿದ್ದು, ಅಲ್ಲಿನ ಮೂಲಭೂತ ಬದಲಾವಣೆಯನ್ನು ಒಪ್ಪಿಕೊಂಡು ತಾಲಿಬಾನ್ ಗೆ ಸಕ್ರಿಯ ಮಾರ್ಗದರ್ಶನ ಮಾಡುವಂತೆ ಹೇಳಿದೆ.

ಎಲ್‌ಎಸಿಯಲ್ಲಿ ಶಾಂತಿ ಸ್ಥಾಪನೆಗೆ ಆದ್ಯತೆ: ದುಶಾಂಬೆಯಲ್ಲಿ ಜೈಶಂಕರ್-ವಾಂಗ್ ಭೇಟಿ, ಮಾತುಕತೆ
ಲಡಾಖ್ ಗಡಿ ಸಂಘರ್ಷದ ವಿಚಾರ ಸಂಬಂಧ ಭಾರತ ಹಾಗೂ ಚೀನಾದ ವಿದೇಶಾಂಗ ಸಚಿವರು ಮಾತುಕತೆ ನಡೆಸಿದ್ದು, ಉಭಯ ರಾಷ್ಟ್ರಗಳು ಎಲ್‌ಎಸಿಯಲ್ಲಿ ಶಾಂತಿ ಸ್ಥಾಪನೆಗೆ ಆದ್ಯತೆ ನೀಡಲು ಒಪ್ಪಿಗೆ ನೀಡಿವೆ ಎಂದು ತಿಳಿದುಬಂದಿದೆ.

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಾಧ್ಯವಾದ ಎಲ್ಲಾ ನೆರವು ನೀಡುವುದಾಗಿ ಚೀನಾ ಭರವಸೆ
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಉನ್ನತ ಮಟ್ಟದ ನೆರವು ನೀಡಲು ಚೀನಾ ಸರ್ಕಾರ ಸಿದ್ಧ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ವಿವಾದಗಳು ವ್ಯತ್ಯಾಸ ತರಬಾರದು:ಭಾರತ-ಚೀನಾ ವಿದೇಶಾಂಗ ಸಚಿವರ ಸಭೆಯಲ್ಲಿ ಸೇನಾಪಡೆ ಹಿಂತೆಗೆದುಕೊಳ್ಳಲು ಒಪ್ಪಿಗೆ
ಗಡಿ ವಾಸ್ತವ ರೇಖೆಯ ಬಳಿ ಚೀನಾ ಸೇನಾಪಡೆ ಶಸ್ತ್ರಸಜ್ಜಿತವಾಗಿ ನಿಯೋಜನೆ ಬಗ್ಗೆ ಭಾರತದ ಕಳವಳವನ್ನು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗೆ ಸಭೆ ನಡೆಸಿದ ವೇಳೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಗಾಲ್ವಾನ್ ಸಂಘರ್ಷ ಪೂರ್ವನಿಯೋಜಿತ: ಚೀನಾ ಸಚಿವರೊಂದಿಗಿನ ಮಾತುಕತೆ ವೇಳೆ ಭಾರತ ತೀವ್ರ ಅಸಮಾಧಾನ!
ಭಾರತ ಮತ್ತು ಚೀನಾ ಸೈನಿಕರ ನಡುವೆ ಗಾಲ್ವಾನ್ ನಲ್ಲಿ ನಡೆದ ಸಂಘರ್ಷ ಪೂರ್ವನಿಯೋಜಿತ ಕೃತ್ಯ ಎಂದು ಕೇಂದ್ರ ಸರ್ಕಾರ ಚೀನಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

