Visa

ಆದ್ಯತೆ ಆಧಾರದ ಮೇಲೆ ಹೆಚ್-1ಬಿ, ವಿದ್ಯಾರ್ಥಿ ವೀಸಾ ಅವಧಿ ವಿಸ್ತರಣೆ:ಅಮೆರಿಕ
ಕೋವಿಡ್ -19ನಿಂದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗಿರುವುದರಿಂದ ಸಮಸ್ಯೆಗೆ ಸಿಲುಕಿರುವ ವಲಸೆರಹಿತ ವೀಸಾ ಹೊಂದಿರುವವರ ವೀಸಾ ಅವಧಿಯನ್ನು ವಿಸ್ತರಿಸುವ ಕುರಿತು ವಿಶೇಷ ಪರಿಶೀಲನೆ ನಡೆಸಲಾಗುವುದು ಅಥವಾ ಹಂತ ಹಂತವಾಗಿ ಅವರ ವೀಸಾ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಅಮೆರಿಕಾ ಆಡಳಿತ ಹೇಳಿದೆ.

ಕೊರೋನಾ ಸಾಂಕ್ರಾಮಿಕ ರೋಗ ಎಂದ ಡಬ್ಲ್ಯೂಹೆಚ್ಒ: ಎಲ್ಲಾ ರೀತಿಯ ವೀಸಾ ರದ್ದುಗೊಳಿಸಿದ ಭಾರತ
ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ವೈರಸನ್ನು ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಭಾರತ ಸರ್ಕಾರ ಎಲ್ಲಾ ರೀತಿಯ ವೀಸಾಗಳನ್ನು ಅಮಾನತು ಮಾಡಿದೆ.

ಕೊರೋನಾವೈರಸ್: ಚೀನಿಯರಿಗೆ ಮತ್ತು ವಿದೇಶಿಯರಿಗೆ ವೀಸಾ ನಿಯಮ ಬಿಗಿಗೊಳಿಸಿದ ಭಾರತ
ಕೊರೊನಾ ವೈರಸ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಚೀನಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಭಾರತ ಸರ್ಕಾರ ತನ್ನ ದೇಶದಲ್ಲಿ ಸೋಂಕು ವ್ಯಾಪಕವಾಗಿ ಹಬ್ಬದಂತೆ ಮುಂಜಾಗ್ರತೆ ಕ್ರಮವಾಗಿ ವೀಸಾ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದೆ.

ನ.9 ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭ: ಸಿಧುಗೆ ವೀಸಾ ನೀಡಿದ ಪಾಕಿಸ್ತಾನ
ನವೆಂಬರ್ 9 ರಂದು ನಡೆಯಲಿರುವ ಸಿಖ್ಖರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಂಜಾಬ್ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ವೀಸಾ ನೀಡಿರುವುದಾಗಿ ಪಾಕಿಸ್ತಾನ ಇಂದು ತಿಳಿಸಿದೆ.

ಬ್ರೆಜಿಲ್ ಗೆ ಹೋಗುವ ಭಾರತ ಮತ್ತು ಚೀನಾ ನಾಗರಿಕರಿಗೆ ವೀಸಾದಿಂದ ವಿನಾಯ್ತಿ
ಪ್ರವಾಸ ಅಥವಾ ಉದ್ಯಮ, ವ್ಯಾಪಾರ ಉದ್ದೇಶಗಳಿಗೆ ಬ್ರೆಜಿಲ್ ಗೆ ಹೋಗಬೇಕಾದರೆ ಚೀನಾ ಮತ್ತು ಭಾರತ ದೇಶದ ನಾಗರಿಕರು ವೀಸಾ ಹೊಂದಬೇಕಾಗಿಲ್ಲ ಎಂದು ಬ್ರೆಜಿಲ್ ನ ಅಧ್ಯಕ್ಷ ಜೈರ್ ಬೊಲ್ಸನರೊ ತಿಳಿಸಿದ್ದಾರೆ.

ಡೆನ್ಮಾರ್ಕ್ ಪಂದ್ಯಕ್ಕೆ ಹೋಗಲು ವೀಸಾ ಸಿಗದೆ ವಿದೇಶಾಂಗ ಸಚಿವಾಲಯ ಮೊರೆ ಹೋದ ಸೈನಾ ನೆಹ್ವಾಲ್
ಮುಂದಿನ ವಾರ ಡೆನ್ಮಾರ್ಕ್ ಮುಕ್ತ ಟೆನಿಸ್ ಪಂದ್ಯದಲ್ಲಿ ಭಾಗವಹಿಸಲಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗೆ ವೀಸಾ ಸಮಸ್ಯೆ ಎದುರಾಗಿದೆ. ಹೀಗಾಗಿ ಸೈನಾ ಇದೀಗ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದ್ದಾರೆ.

ಕಾಲಕ್ಕೆ ತಕ್ಕಂತೆ ಭಾರತದ ವೀಸಾ ಶುಲ್ಕದಲ್ಲಿ ಬದಲಾವಣೆ
ಪ್ರವಾಸಿಗರ ಭೇಟಿಯನ್ನು ಗಮನಿಸಿಕೊಂಡು ಭಾರತ ಸಡಿಲಿಕೆಯ ಇ-ಟೂರಿಸ್ಟ್(ಪ್ರವಾಸಿ) ವೀಸಾ ನಿಯಮವನ್ನು ಜಾರಿಗೆ ತರಲಿದೆ.

ಮೊಹಮ್ಮದ್ ಶಮಿಗೆ ಅಮೆರಿಕಾ ವೀಸಾ ನೀಡಲು ನಕಾರ, ರಕ್ಷಣೆಗೆ ನಿಂತ ಬಿಸಿಸಿಐ
ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ಭಾರತ ತಂಡದಲ್ಲಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರಿಗೆ ಅಮೆರಿಕಾ ವೀಸಾ ಕೊಡಿಸುವಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಶಸ್ವಿಯಾಗಿದೆ.

ಮತ್ತೆ ಅಮೆರಿಕ ನೀಡಿದ ಹೊಡೆತಕ್ಕೆ ಪತರುಗುಟ್ಟಿದ ಪಾಕಿಸ್ತಾನಿಯರು!
ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವು ಹಿಂಪಡೆದ ಬೆನ್ನಲ್ಲೇ ಇದೀಗ ಅಮೆರಿಕ ಮತ್ತೊಂದು ಹೊಡೆತ ನೀಡಿದ್ದು ಇದಕ್ಕೆ ಪಾಕಿಸ್ತಾನಿಯರು ಪತರುಗುಟ್ಟಿದ್ದಾರೆ.

