Vinay Rajkumar

ವಿನಯ್ ರಾಜ್‌ಕುಮಾರ್ ನಟನೆಯ 'ಅಂದೊಂದಿತ್ತು ಕಾಲ' ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟ!
ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ಅಂದೊಂದಿತ್ತು ಕಾಲ’ ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎಂದು ಚಿತ್ರತಂಡ ತಿಳಿಸಿದೆ. A2 ಮ್ಯೂಸಿಕ್ ಕಂಪನಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್ ಮತ್ತು ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಗ್ರಾಮಾಯಣ' ಚಿತ್ರತಂಡ ಸೇರಿಕೊಂಡ ನಟಿ ಮೇಘಾ ಶೆಟ್ಟಿ
ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾ ಬಹಳ ಹಿಂದೆ ಸೆಟ್ಟೇರಿತ್ತು. 25 ದಿನಗಳ ಚಿತ್ರೀಕರಣದ ನಂತರ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿತ್ತು. ಹೊಸ ನಿರ್ಮಾಪಕರು ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಚಿತ್ರಕ್ಕೆ ಮರುಜೀವ ಸಿಕ್ಕಂತಾಗಿದೆ.

ಜೂನ್ 8 ರಂದು ವಿನಯ್ ರಾಜಕುಮಾರ್ ನಟನೆಯ 'ಗ್ರಾಮಾಯಣ'ಕ್ಕೆ ಮತ್ತೆ ಚಾಲನೆ!
ಗ್ರಾಮಾಯಣ ಸಿನಿಮಾವನ್ನು ದೇವನೂರು ಚಂದ್ರು ಎಂಬವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿ, ಚಿತ್ರಕಥೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ.

ಒಂದು ಸರಳ ಪ್ರೇಮಕಥೆ ಚಿತ್ರದ ಟೀಸರ್
ನಟ ವಿನಯ್ ರಾಜಕುಮಾರ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಪೆಪೆ ಚಿತ್ರದ ಟೀಸರ್
ನಟ ವಿನಯ್ ರಾಜಕುಮಾರ್ ಹುಟ್ಟಹಬ್ಬದ ಪ್ರಯುಕ್ತ ಅವರು ಅಭಿನಯಿಸಿರುನ ಪೆಪೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಲೇಶ್ ಎಸ್ ನಾಯರ್ ನಿರ್ದೇಶಿಸುತ್ತಿದ್ದಾರೆ.

ಸಿಂಪಲ್ ಸುನಿ-ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ಆಯ್ಕೆಯಾದ ಕಿರುತೆರೆ ನಟಿ ಮಲ್ಲಿಕಾ ಸಿಂಗ್
ನಿರ್ದೇಶಕ ಸಿಂಪಲ್ ಸುನಿ ಜೊತೆಯಲ್ಲಿ ವಿನಯ್ ರಾಜ್ ಕುಮಾರ್ ಅವರ ಮುಂಬರುವ ಚಿತ್ರದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೇ ಮುಗಿದಿದೆ. ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾದ ಭಾಗವಾಗಿದ್ದ ನಟಿ ಸ್ವಾದಿಷ್ಟ ಕೃಷ್ಣನ್ ಅವರು ಈಗಾಗಲೇ ಈ ಯೋಜನೆಯ ಭಾಗವಾಗಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಿನಯ್ ರಾಜ್ ಗೆ ಸ್ವಾತಿಷ್ಠ ಕೃಷ್ಣನ್ ನಾಯಕಿ!
ಸಿಂಪಲ್ ಸುನಿ ಮತ್ತು ವಿನಯ್ ರಾಜಕುಮಾರ್ ಇದೇ ಮೊದಲ ಬಾರಿ ಜೊತೆಯಾಗಿರುವ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಕನ್ನಡತಿ ಎನ್ನುವುದು ವಿಶೇಷವೇನಲ್ಲ. ಏಕೆಂದರೆ ಎಂದಿನಂತೆ ಸುನಿ ಕನ್ನಡದ ಹುಡುಗಿಯನ್ನೇ ಹುಡುಕಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿಯೊಂದಿಗೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟ ವಿನಯ್ ರಾಜ್‌ಕುಮಾರ್
ಇದೀಗ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಖ್ಯಾತಿಯ ನಿರ್ದೇಶಕ ಸುನಿ ಅವರ ಮುಂದಿನ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಅವರು ನಟಿಸಲಿದ್ದಾರೆ. ಈ ಸಿನಿಮಾಗಾಗಿ ಇದೇ ಮೊದಲ ಬಾರಿಗೆ ನಟ ಹಾಗೂ ನಿರ್ದೇಶಕ ಸುನಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ವಿನಯ್ ರಾಜ್‌ಕುಮಾರ್‌ಗೆ ಏನನ್ನಾದರೂ ಸಾಧಿಸಬೇಕೆಂಬ ತುಡಿತವಿದೆ: ಕರ್ಮ್ ಚಾವ್ಲಾ
ಉಳಿದವರು ಕಂಡಂತೆ ಚಿತ್ರದಲ್ಲಿನ ಛಾಯಾಗ್ರಾಹಣ ಮೂಲಕ ಖ್ಯಾತರಾಗಿರುವ ಕರ್ಮ್ ಚಾವ್ಲಾ ಅವರು ಇದೀಗ ಚೊಚ್ಚಲ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಕ್ರೀಡೆ ಕಥಾವಸ್ತು 10 ಮೂಲಕ ಕರ್ಮ್ ಚಾವ್ಲಾ ನಿರ್ದೇಶಕರಾಗುತ್ತಿದ್ದಾರೆ.

