ನಿರ್ದೇಶಕ ಸಿಂಪಲ್ ಸುನಿಯೊಂದಿಗೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟ ವಿನಯ್ ರಾಜ್‌ಕುಮಾರ್
ಇದೀಗ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಖ್ಯಾತಿಯ ನಿರ್ದೇಶಕ ಸುನಿ ಅವರ ಮುಂದಿನ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಅವರು ನಟಿಸಲಿದ್ದಾರೆ. ಈ ಸಿನಿಮಾಗಾಗಿ ಇದೇ ಮೊದಲ ಬಾರಿಗೆ ನಟ ಹಾಗೂ ನಿರ್ದೇಶಕ ಸುನಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ನಟ ವಿನಯ್ ರಾಜ್‌ಕುಮಾರ್ ಅವರು 2023ಕ್ಕೆ ಕೆಲವು ಉತ್ತಮ ಸಿನಿಮಾಗಳನ್ನು ಹೊಂದಿದ್ದು, ಕೀರ್ತಿ ನಿರ್ದೇಶನದ 'ಅಂದೊಂದಿತ್ತು ಕಾಲ' ಸೇರಿದಂತೆ 'ಪೆಪೆ' ಮತ್ತು ಕಾದಂಬರಿ ಆಧರಿತ 'ಗ್ರಾಮಾಯಣ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಖ್ಯಾತಿಯ ನಿರ್ದೇಶಕ ಸುನಿ ಅವರ ಮುಂದಿನ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಅವರು ನಟಿಸಲಿದ್ದಾರೆ.

ಈ ಸಿನಿಮಾಗಾಗಿ ಇದೇ ಮೊದಲ ಬಾರಿಗೆ ನಟ ಹಾಗೂ ನಿರ್ದೇಶಕ ಸುನಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಚಿತ್ರವನ್ನು ಮೈಸೂರು ರಮೇಶ್ ನಿರ್ಮಿಸಲಿದ್ದಾರೆ. ನಿರ್ದೇಶಕ ಸುನಿ ಅವರು ಸದ್ಯ ತಮ್ಮ 'ಗತವೈಭವ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ನಾಯಕನಾಗಿ ದುಷ್ಯಂತ್ ಮತ್ತು ನಟಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ.
ಸದ್ಯ 'ಗತವೈಭವ' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವಾಗಲೇ ನಿರ್ದೇಶಕರು, ವಿನಯ್ ರಾಜ್‌ಕುಮಾರ್ ಅವರ ಸಿನಿಮಾಗೂ ಏಕಕಾಲದಲ್ಲಿ ತಯಾರಿ ನಡೆಸುತ್ತಿದ್ದಾರೆ.
ಈಮಧ್ಯೆ, ಕೊನೆಯದಾಗಿ '10' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ವಿನಯ್, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಶ್ರೀಲೇಶ್ ನಾಯರ್ ಅವರ ಪೆಪೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನೆರಡು ತಿಂಗಳಲ್ಲಿ ಸುನಿ-ವಿನಯ್ ಚಿತ್ರದ ಅಧಿಕೃತ ಘೋಷಣೆಯಾಗಲಿದ್ದು, ಉಳಿದ ತಾರಾಗಣ ಮತ್ತು ಸಿಬ್ಬಂದಿಯ ವಿವರಗಳು ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


