Vikram Lander

ಚಂದ್ರಯಾನ-2 ಆರ್ಬಿಟರ್ ಸಕ್ರಿಯವಾಗಿದೆ, ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಇಲ್ಲ: ಇಸ್ರೋ ಮುಖ್ಯಸ್ಥ ಶಿವನ್
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಚಂದ್ರಯಾನ-2 ಬಗ್ಗೆ ಮಾತನಾಡಿದ್ದು, ಚಂದ್ರಯಾನ-2 ಆರ್ಬಿಟರ್ ಸಕ್ರಿಯವಾಗಿದೆ, ಆದರೆ ವಿಕ್ರಮ್ ಲ್ಯಾಂಡರ್ ಜೊತೆ ಸಿಗ್ನಲ್ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಚಂದ್ರಯಾನ 2: ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಂದೇ ಕೊನೆಯ ಅವಕಾಶ
ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಂದೇ ಕೊನೆಯ ಅವಕಾಶವಾಗಿದ್ದು, ಇಂದಿನ ಅವಕಾಶ ತಪ್ಪಿದರೆ ಶಾಶ್ವತವಾಗಿ ವಿಕ್ರಮ್ ಲ್ಯಾಂಡರ್ ಅನ್ನು ಸಂಪರ್ಕಿಸಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ವಿಕ್ರಮ್ ಲ್ಯಾಂಡರ್ ನ ಸ್ಥಾನವನ್ನು ಸದ್ಯಕ್ಕೆ ಗುರುತಿಸುವುದು ಕಷ್ಟ: ನಾಸಾ ವಿಜ್ಞಾನಿಗಳು
ಚಂದ್ರನ ಮೇಲ್ಮೈಯನ್ನು ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಪ್ರದೇಶದಲ್ಲಿ ನಾಸಾದ ಲೂನಾರ್ ರಿಕನ್ನೈಸನ್ಸ್ ಆರ್ಬಿಟರ್(ಎಲ್ಆರ್ ಒ) ಕ್ಯಾಮರಾ ಸಹಾಯದಿಂದ ಚಿತ್ರಗಳನ್ನು ತೆಗೆಯಲಾಗಿದ್ದರೂ ಕೂಡ ಅಲ್ಲಿನ ಬೆಳಕು ಸ್ಥಿತಿಗತಿ ಸ್ಪಷ್ಟವಾಗಿಲ್ಲದ ಕಾರಣ ವಿಕ್ರಂ ಲ್ಯಾಂಡರ್ ನ ಸ್ಥಾನ ಸದ್ಯಕ್ಕೆ ಎಲ್ಲಿದೆ ಎಂದು ಗುರುತುಹಿಡಿಯುವುದು ಕಷ್ಟವಾಗಿದೆ ಎಂದು ಎಲ್ಆರ್ ಒ ಪ್ರಾಜೆಕ್ಟ್ ವಿಜ್ಞಾ

ಚಂದ್ರಯಾನ-2: ಲ್ಯಾಂಡರ್‌ನೊಂದಿಗೆ ಸಂಪರ್ಕ ಮರುಸ್ಥಾಪನೆ ಸಾಧ್ಯತೆ ಕ್ಷೀಣ
ಭಾರತದ ಚಂದ್ರಯಾನ -2 ಮಿಷನ್‌ನ ಭಾಗವಾಗಿರುವ ಲ್ಯಾಂಡರ್-ರೋವರ್ 'ವಿಕ್ರಮ್' ಜತೆಗೆ ಸಂಪರ್ಕ ಮರುಸ್ಥಾಪನೆ ಮಾಡುವ ಇಸ್ರೋ ಪ್ರಯತ್ನ ಯಶಸ್ವಿ ಆಗುವ ಸಾಧ್ಯತೆ ಕ್ರಮೇಣ ಕ್ಷ್ಣಿಸುತ್ತಿದೆ.

ಚಂದ್ರಯಾನ 2: ಚಂದ್ರನ ಮೇಲ್ಮೈ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲೂ ಲ್ಯಾಂಡರ್ ಸಂಪರ್ಕದಲ್ಲಿತ್ತು..!
ಇಸ್ರೋ ಘೋಷಣೆ ಮಾಡಿದಂತೆ ವಿಕ್ರಮ್ ಆರ್ಬಿಟರ್ ಚಂದ್ರನ ಮೇಲ್ಮೈ ಮೇಲಿಂದ 2.1 ಕಿಮೀ ಅಂತರದಲ್ಲಿದ್ದಾಗ ಸಂಪರ್ಕ ಕಡಿತವಾಗಿರಲ್ಲಿಲ್ಲ. ಬದಲಿಗೆ ಚಂದ್ರನ ಮೇಲ್ಮೈ ಮೇಲೆ ಇಳಿಯುವ ಕೊನೆಯ ಕ್ಷಣದಲ್ಲೂ ಲ್ಯಾಂಡರ್ ಸಂಪರ್ಕದಲ್ಲಿತ್ತು ಎಂಬ ರೋಚಕ ಮಾಹಿತಿ ಲಭ್ಯವಾಗಿದೆ.

'ಮೌನ ಮುರಿದು ಮಾತನಾಡು ಒಮ್ಮೆ': ವಿಕ್ರಮ್ ಲ್ಯಾಂಡರ್ ಗೆ ಪದ್ಯದ ಮೂಲಕ ಬೆಂಗಳೂರು ಪೋಲೀಸರ ಮನವಿ!
ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 2 ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಮೇಲಿಳಿದಿದ್ದರೂ ಸಂಪರ್ಕ ಸಾಧ್ಯವಾಗದೆ ಹೋಗಿದ್ದು ಇಸ್ರೋ ಸಂಶೋಧಕರು ಸಂಪರ್ಕ ಮರುಸ್ಥಾಪನೆಗೆ ಸತತ ಯತ್ನ ಮಾಡುತ್ತಿದ್ದಾರೆ. ಈ ನಡುವೆ ಬೆಂಗಳೂರು ನಗರ ಪೋಲೀಸರು ವಿಕ್ರಮ್ ಲ್ಯಾಂಡರ್ ಗಾಗಿ ವಿಶೇಷ ಪದ್ಯ ಬರೆದು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಚಂದ್ರಯಾನ-2: ವಿಕ್ರಮ್ ಲ್ಯಾಂಡರ್ ನಿಂದ ಈವರೆಗೂ ಸಂಪರ್ಕ ಸಾಧ್ಯವಾಗಿಲ್ಲ- ಇಸ್ರೋ
ಚಂದ್ರನ ಮೇಲ್ಮೈ ಮೇಲೆ ಇಳಿಯುತ್ತಲೇ ಸಂಪರ್ಕ ಕಡಿತವಾಗಿದ್ದ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ನೊಂದಿಗೆ ಈ ವರೆಗೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸ್ಪಷ್ಟಪಡಿಸಿದೆ.

ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಗೆ ಹಾನಿಯಾಗಿಲ್ಲ: ಇಸ್ರೋ ಮೂಲಗಳು
ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಗೆ ಹಾರ್ಡ್ ಲ್ಯಾಂಡಿಂಗ್ ನ ಹೊರತಾಗಿಯೂ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಚಂದ್ರಯಾನ-2: ಅನುಮಾನವೇ ಬೇಡ, ಅರ್ಬಿಟರ್ ಕಾರ್ಯ ನಿರ್ವಹಿಸುತ್ತಿದೆ: ಬಾಹ್ಯಾಕಾಶ ತಜ್ಞ ಅಜಯ್ ಲೆಲೆ
ಇಸ್ರೋ ಉಡಾವಣೆ ಮಾಡಿರುವ ಚಂದ್ರಯಾನ-2 ಯೋಜನೆಯ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿದೆ ಎಂದರೆ ಅದರ ಕಾರ್ಯ ಕ್ಷಮತೆ ಕುರಿತು ಅನುಮಾನವೇ ಬೇಡ. ಅದು ತನ್ನ ಗುರಿಸಾಧಿಸಿಯೇ ತೀರುತ್ತದೆ ಎಂದು ಖ್ಯಾತ ಬಾಹ್ಯಾಕಾಶ ತಜ್ಞ ಅಜಯ್ ಲೆಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

