ರಾಜ್ಯ

'ಮೌನ ಮುರಿದು ಮಾತನಾಡು ಒಮ್ಮೆ': ವಿಕ್ರಮ್ ಲ್ಯಾಂಡರ್ ಗೆ ಪದ್ಯದ ಮೂಲಕ ಬೆಂಗಳೂರು ಪೋಲೀಸರ ಮನವಿ!

ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 2 ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಮೇಲಿಳಿದಿದ್ದರೂ ಸಂಪರ್ಕ ಸಾಧ್ಯವಾಗದೆ ಹೋಗಿದ್ದು ಇಸ್ರೋ ಸಂಶೋಧಕರು ಸಂಪರ್ಕ ಮರುಸ್ಥಾಪನೆಗೆ ಸತತ ಯತ್ನ ಮಾಡುತ್ತಿದ್ದಾರೆ. ಈ ನಡುವೆ ಬೆಂಗಳೂರು ನಗರ ಪೋಲೀಸರು ವಿಕ್ರಮ್ ಲ್ಯಾಂಡರ್ ಗಾಗಿ ವಿಶೇಷ ಪದ್ಯ ಬರೆದು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

'ಮೌನ ಮುರಿದು ಮಾತನಾಡು ಒಮ್ಮೆ': ವಿಕ್ರಮ್ ಲ್ಯಾಂಡರ್ ಗೆ ಪದ್ಯದ ಮೂಲಕ ಬೆಂಗಳೂರು ಪೋಲೀಸರ ಮನವಿ!
'ಮೌನ ಮುರಿದು ಮಾತನಾಡು ಒಮ್ಮೆ,'-ವಿಕ್ರಮ್ ಲ್ಯಾಂಡರ್ ಗೆ ಪದ್ಯದ ಮೂಲಕ ಬೆಂಗಳೂರು ಪೋಲೀಸರ ಮನವಿ!
Published On :

ಬೆಂಗಳೂರು: ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 2 ಭಾಗವಾಗಿರುವ ವಿಕ್ರಂ ಲ್ಯಾಂಡರ್ ಚಂದ್ರನ ಮೇಲಿಳಿದಿದ್ದರೂ ಸಂಪರ್ಕ ಸಾಧ್ಯವಾಗದೆ ಹೋಗಿದ್ದು  ಇಸ್ರೋ ಸಂಶೋಧಕರು ಸಂಪರ್ಕ ಮರುಸ್ಥಾಪನೆಗೆ ಸತತ ಯತ್ನ ಮಾಡುತ್ತಿದ್ದಾರೆ. ಈ ನಡುವೆ ಬೆಂಗಳೂರು ನಗರ ಪೋಲೀಸರು ವಿಕ್ರಮ್ ಲ್ಯಾಂಡರ್ ಗಾಗಿ ವಿಶೇಷ ಪದ್ಯ ಬರೆದು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಬೆಂಗಳುರು ನಗರ ಪೋಲೀಸ್ ಅಧಿಕೃತ ಟ್ವಿಟ್ತರ್ ಖಾತೆಯಲ್ಲಿ ವಿಕ್ರಮ್ ಗಾಗಿ ಬರೆದ ಪದ್ಯವನ್ನು ಬರೆಯಲಾಗಿದೆ.

"ಪ್ರೀತಿಯ ವಿಕ್ರಮ್,

ಹಗಲಿರುಳ  ಶ್ರಮದ ಫಲ ನೀನು,
ನಿನ್ನ ಮಾತಿಗಾಗಿ ಕಾಯುತಿರುವೆ ನಾನು!
ಮೌನ ಮುರಿದು ಮಾತನಾಡು ಒಮ್ಮೆ,,
ಆಗುವುದೆಲ್ಲ ಆಗೇ ಬಿಡಲಿ ನಾನಿರುವೆ!"

ಎಂದು ಬರೆದು ಕೆಳಗೆ ಇಂತಿ ನಿನ್ನ ಭಾರತಾಂಬೆ ಎಂದು ಸಹಿ ಹಾಕಲಾಗಿದೆ.

ನಿನ್ನೆಯಷ್ಟೇ ಮಹಾರಾಷ್ಟ್ರದ ನಾಗಪುರ ಪೋಲೀಸರು ವಿಕ್ರಮ್ ಲ್ಯಾಂಡರ್ ಗೆ ದಯವಿಟ್ಟು ಪ್ರತಿಕ್ರಯಿಸು, ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ನಾವು ನಿನಗೆ ದಂಡ ಹಾಕಲ್ಲ ಎಂದು ಟ್ವೀಟ್ ಮೂಲಕ ಪ್ರಾರ್ಥಿಸಿದ್ದು ಸಾಮಾಜಿಕ ತಾಣದಲ್ಲಿ ಬಹುವಿಧದ ಪ್ರತಿಕ್ರಿಯೆಗೆ ಕಾರಣವಾಗಿತ್ತು ಎಂದು ನಾವಿಲ್ಲಿ ನೆನೆಯಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.