Vijayapura

ವಿಜಯಪುರ: ಅನುದಾನ ಕೊರತೆಯಿಂದ ಮಹತ್ವಾಕಾಂಕ್ಷೆಯ ಮಹಿಳಾ ವಸ್ತುಸಂಗ್ರಹಾಲಯ ಯೋಜನೆ ಸ್ಥಗಿತ!
ಅನುದಾನದ ಕೊರತೆಯಿಂದಾಗಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆವರಣದಲ್ಲಿ ಮಹಿಳಾ ವಸ್ತು ಸಂಗ್ರಹಾಲಯ ಯೋಜನೆ ಇನ್ನೂ ನನಸಾಗಿಲ್ಲ.

ಮಳೆಯ ಮಧ್ಯೆ ವಿಜಯಪುರದಲ್ಲಿ ಭೂಕಂಪನ: ಆತಂಕದಲ್ಲಿ ಜನತೆ
ನಿರಂತರ ಜಿಟಿ ಜಿಟಿ ಮಳೆ ಮಧ್ಯೆಯೂ ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಇಂದು(ಮಂಗಳವಾರ) ಭೂಮಿ ನಡುಗಿದ ಅನುಭವವಾಗಿದೆ.

ವಿಜಯಪುರ: ತೆಂಗಿನಕಾಯಿ ತೆಗೆಯಲು ಕೃಷಿ ಹೊಂಡಕ್ಕೆ ಇಳಿದಿದ್ದ ಇಬ್ಬರು ಬಾಲಕರು ಸಾವು
ಕೃಷಿ ಹೊಂಡದಲ್ಲಿ ಬಿದ್ದಿದ್ದ ತೆಂಗಿನಕಾಯಿ ತೆಗೆಯಲು ಹೋಗಿ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.

ವಿಜಯಪುರದಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲು
ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಭೂಕಂಪನವಾಗಿದ್ದು, ತಡರಾತ್ರಿ 1:38ರ ಸುಮಾರಿಗೆ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಜನರು ಬೆಚ್ಚಿ ಬಿದ್ದಿದ್ದಾರೆ.

ವಿಜಯಪುರ: ಲಾರಿ-ಆಟೋಗಳ ನಡುವೆ ಭೀಕರ ಅಪಘಾತ; 7 ಮಂದಿ ದುರ್ಮರಣ
ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರೀಡ್ಜ್ ಬಳಿ ಎರಡು ಆಟೋ ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ವಿಜಯಪುರ: ಬಟ್ಟೆ ತೊಳೆಯಲು ಹೋಗಿದ್ದಾಗ ಭೀಮಾ ನದಿಯಲ್ಲಿ ಮುಳುಗಿ ತಾಯಿ, ಮಕ್ಕಳಿಬ್ಬರ ದುರ್ಮರಣ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಬಳಿಯ ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ನದಿಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.

ವಿಜಯಪುರ: ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಕತ್ತಿಗೆ ಚೂರಿ ಇರಿದು ಬರ್ಬರ ಹತ್ಯೆ!
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಆಕೆಯ ಕತ್ತಿಗೆ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ವಿಜಯಪುರದಲ್ಲಿ ರಸ್ತೆ ಅಪಘಾತ; ಕಂಟೈನರ್-ಬೈಕ್ ಮುಖಾಮುಖಿ ಡಿಕ್ಕಿಯಾಗಿ ನವದಂಪತಿ ದುರ್ಮರಣ!
ಬುಧವಾರ ಬೆಳಗ್ಗೆ ಇಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನವವಿವಾಹಿತ ದಂಪತಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ದಂಪತಿ ಸಾವಿಗೀಡಾಗಿದ್ದಾರೆ. ಅವರು ಕಳೆದ ತಿಂಗಳಷ್ಟೇ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯಪುರ: ಹಿಡಿದ ಹಾವಿನೊಂದಿಗೆ ಮದುವೆ ಮನೆಗೆ ಬಂದು ವರನೊಂದಿಗೆ ಪೋಸ್ ಕೊಟ್ಟ ಉರಗ ರಕ್ಷಕ !
34 ವರ್ಷದ ಹನುಮೇಶ್ ಕೈಯಲ್ಲಿ ಹಾವು ಹಿಡಿದು ಕೊಂಡು ಮದುವೆ ಮನೆಯಲ್ಲಿ ವರನ ಜೊತೆಗೆ ಫೋಟೋಗೆ ಪೋಸ್ ನೀಡಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವರನೊಂದಿಗೆ ಹಸಿರು ಬಳ್ಳಿಯ ಹಾವನ್ನು ಹಿಡಿದಿರುವ ವ್ಯಕ್ತಿ ಫೋಟೋ ತೆಗೆಸಿಕೊಂಡಿದ್ದಾನೆ.

