Vaccine

ಕೋವಿಡ್-19 ಎರಡನೇ ಅಲೆಯನ್ನು ಎದುರಿಸಲು ಸರ್ಕಾರ ಸಿದ್ದವಾಗಿದೆ, ಪ್ರತಿಯೊಬ್ಬರಿಗೂ ಲಸಿಕೆ ಅಗತ್ಯವಿಲ್ಲ: ಡಾ ಕೆ ಸುಧಾಕರ್
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಳಿ, ಶೀತ ಹವಾಮಾನ ನಿಧಾನವಾಗಿ ಕಾಲಿಡುತ್ತಿದೆ. ಕರ್ನಾಟಕದಲ್ಲಿ ಕೋವಿಡ್-19 ಎರಡನೇ ಅಲೆ ಏಳುವ ಎಲ್ಲಾ ಸಾಧ್ಯತೆಗಳಿವೆ.

ದೇಶದ 30 ಕೋಟಿ ಜನರಿಗೆ ಮೊದಲಿಗೆ ಕೋವಿಡ್ ಲಸಿಕೆ: ಕೇಂದ್ರ ಸರ್ಕಾರ
ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ದೇಶದ ಸುಮಾರು 30 ಕೋಟಿ ಜನರು ಮೊದಲಿಗೆ ಲಸಿಕೆ ಪಡೆಯಲಿದ್ದಾರೆ ಎಂದು ಕೊರೋನಾ ವೈರಸ್ ಲಸಿಕೆಯ ಕಾರ್ಯತಂತ್ರದ ಬಗ್ಗೆ ಮೊದಲ ಬಾರಿಗೆ ಅಧಿಕೃತ ಮಾಹಿತಿಯನ್ನು ಕೇಂದ್ರ ಸರ್ಕಾರ ಇಂದು ಹಂಚಿಕೊಂಡಿದೆ.

ಕೋವಿಡ್-19 ಲಸಿಕೆ ಪೂರೈಕೆಗೆ ರಾಜ್ಯದಲ್ಲಿ 4.7 ಲಕ್ಷ ಆರೋಗ್ಯ ಕಾರ್ಯಕರ್ತರು ದಾಖಲು
ಕರ್ನಾಟಕದಲ್ಲಿ ಕೋವಿಡ್-19 ಲಸಿಕೆ ವಿತರಣೆಗೆ 4.7 ಲಕ್ಷಕ್ಕೂ ಅಧಿಕ ಆರೋಗ್ಯ ಸೇವೆ ಕಾರ್ಯಕರ್ತರು ದಾಖಲು ಮಾಡಿಕೊಂಡಿದ್ದಾರೆ.

ಕೊರೋನಾ ಲಸಿಕೆ ಪ್ರಯೋಗ, ಚಿಕಿತ್ಸೆಗಾಗಿ ರಾಜ್ಯ ಸರ್ಕಾರ 300 ಕೋಟಿ ರೂ. ಬಿಡುಗಡೆ ಮಾಡಿದೆ: ಸಚಿವ ಸುಧಾಕರ್
ಕೊರೋನಾ ಲಸಿಕೆ ಪ್ರಯೋಗ ಹಾಗೂ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ರೂ.300 ಕೋಟಿ ಬಿಡುಗಡೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ಕೋವಿಡ್ ಲಸಿಕೆ ಸಂಶೋಧನೆ ರೇಸ್ ನಲ್ಲಿ ಗೆದ್ದ ಬಯೋಎನ್‌ಟೆಕ್ ಒಂದು ಪುಟ್ಟ ಸಂಸ್ಧೆ!
ಅಮೆರಿಕಾ ಪಾಲುದಾರ ಫಿಜರ್ ಜೊತೆಗೆ, ಬಯೋಎನ್‌ಟೆಕ್ ಸಂಸ್ಧೆ ಅಭಿವೃದ್ಧಿ ಪಡಿಸಿರುವ ಕೋವಿಡ್ -19 ಲಸಿಕೆಗೆ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ್ದು ಮುಂದಿನ ವಾರದಿಂದಲೇ ಲಸಿಕೆ ಲಭ್ಯವಾಗಲಿದೆ.

ವಿಜಯಪುರ: ಲಸಿಕೆಗೆ 12,618 ಆರೋಗ್ಯ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿದ ಅಧಿಕಾರಿಗಳು
ವೈದ್ಯರು, ನರ್ಸ್,ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಲ್ಯಾಬ್ ಟೆಕ್ನಿಷಿಯನ್ ಗಳು ಸೇರಿದಂತೆ ಒಟ್ಟು 12, 618 ಮಂದಿ ಕೊರೋನಾ ವಾರಿಯರ್ಸ್ ವಿಜಯಪುರದಲ್ಲಿ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ.

ಕೋವಿಡ್ ಲಸಿಕೆ ಸಚಿವರನ್ನು ನೇಮಕ ಮಾಡಿದ ಬ್ರಿಟನ್ ಸರ್ಕಾರ!
ಲಕ್ಷಾಂತರ ಜನರಿಗೆ ಕೊರೋನಾವೈರಸ್ ವಿರುದ್ಧ ಲಸಿಕೆ ಹಾಕುವ ಸಿದ್ಧತೆಯಲ್ಲಿರುವ ಬ್ರಿಟಿಷ್ ಸರ್ಕಾರ, ಲಸಿಕಾ ಸಚಿವರೊಬ್ಬರನ್ನು ನೇಮಕ ಮಾಡಿದೆ.

ಅಮೆರಿಕಾದಲ್ಲಿ ಕೋವಿಡ್-19 ಲಸಿಕೆಯನ್ನು ತುರ್ತು ಅಗತ್ಯಕ್ಕಾಗಿ ಯಾವ ರೀತಿಯಲ್ಲಿ ಬಳಸಬಹುದು?
ಕೋವಿಡ್-19 ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನಗಳು ನಡೆಯುತ್ತಿರುವಾಗ ಅಮೆರಿಕಾದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕೋವಿಡ್-19 ಲಸಿಕೆಯನ್ನು ಯಾವ ರೀತಿಯಲ್ಲಿ ಬಳಸಬಹುದು? ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಕೋವಿಡ್-19 ಲಸಿಕೆ ಅಭಿವೃದ್ಧಿಯಲ್ಲಿನ ಪ್ರಗತಿ ಕುರಿತು ಮಾಡರ್ನ ಸಂಸ್ಥೆ ಜೊತೆಗೆ ಭಾರತ ಮಾತುಕತೆ: ಮೂಲಗಳು
ವೈದ್ಯಕೀಯ ಪ್ರಯೋಗಗಳಲ್ಲಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎನ್ನಲಾಗಿರುವ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಿರುವ ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡರ್ನ ಸಂಸ್ಥೆಯೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

