Vaccine

ಭಾರತದಲ್ಲಿ ಕೊರೋನಾ ಪ್ರತಾಪ: ದೇಶದಲ್ಲಿಂದು 2 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ, 1,038 ಮಂದಿ ಸಾವು
ಸತತ 10 ದಿನಗಳಿಂದ 1 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಭಾರತದಲ್ಲಿ ಇದೀಗ ನಿತ್ಯ ಹೊಸ ಸೋಂಕಿತರ ಪ್ರಮಾಣ 2 ಲಕ್ಷ ಗಡಿ ದಾಟಿದೆ. ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಕೋವಿಡ್ ಲಸಿಕೆಗೆ ಕೊರತೆಯಿಲ್ಲ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ
ಕೋವಿಡ್-19 ಪ್ರಕರಣಗಳು ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ರೋಗಿಗಳಿಗೆ ಸಾಕಷ್ಟು ಆಮ್ಲಜನಕ ಮತ್ತು ಅಗತ್ಯ ಸೋಂಕು ನಿವಾರಕ ಔಷಧಿ ರೆಮೆಡೆಸಿವಿರ್ ನ್ನು ಪೂರೈಸಲು ಸರ್ವಸನ್ನದ್ಧವಾಗಿದೆ.

ವಲಸಿಗರಿಗೆ ಉಚಿತ ಊಟ, ವಸತಿ ಒದಗಿಸಿ: ಸರ್ಕಾರಕ್ಕೆ ಮಾಯಾವತಿ ಆಗ್ರಹ
ಲಾಕ್ ಡೌನ್ ಭಯದಿಂದಾಗಿ ತಮ್ಮ ಸ್ವಂತ ಸ್ಥಳಗಳಿಗೆ ವಾಪಸ್ ಹೋಗಲು ನಿರ್ಧರಿಸಿರುವ ವಲಸಿಗರಿಗೆ ಸರ್ಕಾರ ಉಚಿತ ಊಟ ಮತ್ತು ವಸತಿ ನೀಡಬೇಕೇಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೋವಿಡ್ ಲಸಿಕೆ ಕೊರತೆಯಿಲ್ಲ ಆದರೆ, ಯೋಜಿತ ನಿರ್ವಹಣೆಯ ಸಮಸ್ಯೆಯಿದೆ: ಕೇಂದ್ರ ಸರ್ಕಾರ
ಸುಮಾರು 1.67 ಕೋಟಿ ಡೋಸ್ ಕೋವಿಡ್-19 ಲಸಿಕೆ ಈಗಲೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿರುವುದಾಗಿ ಮಂಗಳವಾರ ತಿಳಿಸಿರುವ ಲಸಿಕೆ ಕೊರತೆಯ ಸಮಸ್ಯೆಯೇನೂ ಆಗಿಲ್ಲ, ಆದರೆ, ಉತ್ತಮ ಯೋಜನೆಯ ಸಮಸ್ಯೆಯಿರುವುದಾಗಿ ಹೇಳಿದೆ.

ಕೋವಿಡ್-19: ದೇಶದಲ್ಲಿಂದು ದಾಖಲೆಯ 1.84 ಲಕ್ಷ ಕೇಸ್ ಪತ್ತೆ, 1,027 ಮಂದಿ ಸಾವು
ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆ ಬುಧವಾರ ಮತ್ತೊಂದು ದಾಖಲೆ ಬರೆದಿದೆ. ಬುಧವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಾದ್ಯಂತ 1,84,372 ಕೊರೋನಾ ಪ್ರಕರಣ ವರದಿಯಾಗಿದೆ.

ಭಾರತದ ಬಾಗಿಲು ಇತರ ದೇಶಗಳಿಗೆ ತೆರೆದೇ ಇದೆ- ಎಸ್ ಜೈಶಂಕರ್
ಇತರ ದೇಶಗಳಿಗೆ ಬಾಗಿಲು ಮುಚ್ಚುವುದಿಲ್ಲ ಎಂದಿರುವ ಭಾರತ, ಕೊರೋನಾವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಎಲ್ಲ ದೇಶಗಳು ಸಮನಾಗಿ ಲಸಿಕೆಗಳನ್ನು ಪಡೆಯಲು ಜಾಗತಿಕ ನ್ಯಾಯಸಮ್ಮತ ಒಕ್ಕೂಟವನ್ನು ನಿರ್ಮಿಸಲು ಕರೆ ನೀಡಿದೆ.

50 ಲಕ್ಷ ಡೋಸ್ ಕೋವಿಡ್-19 ಲಸಿಕೆ ಪೂರೈಸುವಂತೆ ಕೇಂದ್ರಕ್ಕೆ ಪತ್ರ ಬರೆದ ಕೇರಳ ಮುಖ್ಯಮಂತ್ರಿ!
ಲಸಿಕೆಗಳ ಕೊರತೆಯ ನಡುವೆಯೂ 50 ಲಕ್ಷ ಡೋಸ್ ಕೋವಿಡ್-19 ಲಸಿಕೆಯನ್ನು ಪೂರೈಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸೋಮವಾರ ಪತ್ರ ಬರೆದಿದ್ದಾರೆ.

'ಟಿಕಾ ಉತ್ಸವ'ದ ಮೊದಲ ದಿನ ಸುಮಾರು 27 ಲಕ್ಷ ಡೋಸ್ ಕೋವಿಡ್-19 ಲಸಿಕೆ ನೀಡಿಕೆ: ಕೇಂದ್ರ ಸರ್ಕಾರ
ಟಿಕಾ ಉತ್ಸವದ ಮೊದಲ ದಿನವಾದ ಭಾನುವಾರ ಸಂಜೆಯವರೆಗೂ ಸುಮಾರು 27 ಲಕ್ಷಕ್ಕೂ ಹೆಚ್ಚು ಡೋಸ್ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದ ಜನತೆ 4 ವಿಷಯಗಳಿಗೆ ಬದ್ಧರಾಗಿ, ಕೊರೋನಾ ಲಸಿಕೆ ಉತ್ಸವದಲ್ಲಿ ಭಾಗಿಯಾಗಿ: ಪ್ರಧಾನಿ ಮೋದಿ ಕರೆ
ದೇಶಾದ್ಯಂತ ಭಾನುವಾರದಿಂದ ಕೊರೋನಾ ಲಸಿಕೆ ಉತ್ಸವ ಆರಂಭವಾಗಲಿದೆ. ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೋನಾ ೨ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 4 ದಿನಗಳ ಈ ಲಸಿಕಾ ಉತ್ಸವ ಆರಂಭಿಸಿದ್ದಾರೆ. ಈ ಮೂಲಕ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಲು ಅವರು ಕರೆ ಕೊಟ್ಟಿದ್ದಾರೆ.

