Vaccine

ಭಾರತದಲ್ಲಿ ಭೀಕರ ಕೊರೋನಾ ಸಮಸ್ಯೆಗೆ ಜನರು ಲಸಿಕೆ ಹಾಕಿಸಿಕೊಳ್ಳುವುದೊಂದೇ ದೀರ್ಘ ಪರಿಹಾರ: ಅಮೆರಿಕದ ಖ್ಯಾತ ತಜ್ಞ ಡಾ. ಫೌಸಿ
ಭಾರತದಲ್ಲಿ ಸದ್ಯ ಉಂಟಾಗಿರುವ ಕೊರೋನಾ ಆರೋಗ್ಯ ಸಮಸ್ಯೆಗೆ ಜನರು ಲಸಿಕೆ ಹಾಕಿಸಿಕೊಳ್ಳುವುದೊಂದೇ ದೀರ್ಘ ಕಾಲದ ಪರಿಹಾರವಾಗಿದೆ ಎಂದು ಅಮೆರಿಕದ ಉನ್ನತ ಆರೋಗ್ಯ ತಜ್ಞ ಡಾ ಆಂಟನಿ ಫೌಸಿ ಹೇಳಿದ್ದಾರೆ.

ಕೋವಿಡ್-19: ದೇಶದಲ್ಲಿಂದು 3.66 ಲಕ್ಷ ಹೊಸ ಕೇಸ್ ಪತ್ತೆ, 3,754 ಮಂದಿ ಸಾವು
ಭಾರತದಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 3,66,161 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,754 ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೋನಾ ಅಟ್ಟಹಾಸ: ದೇಶದಲ್ಲಿಂದು 4.03 ಲಕ್ಷ ಹೊಸ ಕೇಸ್ ಪತ್ತೆ, 4,092 ಮಂದಿ ಸಾವು
ಭಾರತದಲ್ಲಿ ಕೋವಿಡ್-19 ಅಟ್ಟಹಾಸ ಮುಂದುವರೆದಿದ್ದು, ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದಾಖಲೆಯ 4,03,738 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 4,092 ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೋವಿನ್ ನಲ್ಲಿ ಕೋವಿಡ್-19 ಲಸಿಕೆ ನೋಂದಣಿ ಪ್ರಕ್ರಿಯೆ ಸಮಸ್ಯೆ: ಸಹಾಯಕ್ಕೆ ಟೆಕ್ಕಿಗಳು ಮುಂದು!
ಯಾವುದೇ ಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾದರೂ ತಂತ್ರಜ್ಞಾನ ಮೂಲಕ ಸಾಫ್ಟ್ ಇಂಜಿನಿಯರ್ ಗಳು ಪರಿಹಾರ ಹುಡುಕಿಕೊಡುತ್ತಾರೆ. ಆದರೆ, ಕೋವಿಡ್ ಪೋರ್ಟಲ್ ನಲ್ಲಿ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ನೋಂದಾಣಿ ಮಾಡಿಕೊಳ್ಳುವ ವಿಚಾರದಲ್ಲಿ ಮಾತ್ರ ಟೆಕ್ಕಿಗಳಿಗೂ ಸಂಕಷ್ಟಗಳು ಎದುರಾಗುತ್ತಿವೆ.

45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆ ನೀಡಲು ಆದ್ಯತೆ: ಸಚಿವ ಡಾ. ಸುಧಾಕರ್
ರಾಜ್ಯದಲ್ಲಿ ಲಭವಿರುವ ಕೋವಿಶೀಲ್ಡ್ ಲಸಿಕೆಯಲ್ಲಿ ಶೇ.70 ರಷ್ಟು ಲಸಿಕೆಯನ್ನು 2ನೇ ಡೋಸ್ ಹಾಕಿಸಿಕೊಳ್ಳಲು ಬಾಕಿಯಿರುವ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಶನಿವಾರ ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ಅಬ್ಬರ: ದೇಶದಲ್ಲಿಂದು 4.01 ಲಕ್ಷ ಹೊಸ ಕೇಸ್ ಪತ್ತೆ, 4,187 ಮಂದಿ ಸಾವು
ಭಾರತದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಎಂದಿನಂತೆ ಮುಂದುವರೆದಿದ್ದು, ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 4.101 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೋನಾ ಅಟ್ಟಹಾಸ: ದೇಶದಲ್ಲಿಂದು 4.14 ಲಕ್ಷ ಹೊಸ ಕೇಸ್ ಪತ್ತೆ, 3,915 ಮಂದಿ ಸಾವು
ದೇಶದಲ್ಲಿ ಕೊರೋನಾ 2ನೇ ಅಲೆ ಆರ್ಭಟ ತೀವ್ರಗೊಂಡಿದ್ದು, ಶುಕ್ರವಾರ ಸೋಂಕು ಮತ್ತು ಸಾವು ಎರಡರಲ್ಲೂ ಮತ್ತೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ಲಸಿಕೆ ವಿತರಣೆಯಲ್ಲಿ ಗುಜರಾತ್ ಮೇಲೆ ಅತಿಯಾದ ಪ್ರೀತಿ, ಕನ್ನಡಿಗರಿಗೆ ತಾರತಮ್ಯ: ಎಚ್ ಡಿಕೆ
ಲಸಿಕೆ ನೀಡಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜ್ಯಗಳಲ್ಲಿ ಇನ್ನೂ 94 ಲಕ್ಷ ಕೋವಿಡ್-19 ಲಸಿಕೆ ಲಭ್ಯವಿದೆ: ಕೇಂದ್ರ ಆರೋಗ್ಯ ಸಚಿವಾಲಯ
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 94.47 ಲಕ್ಷ ಕೋವಿಡ್–19 ಲಸಿಕೆಯ ಡೋಸ್ಗಳು ಲಭ್ಯವಿದೆ. ಮುಂದಿನ ಮೂರು ದಿನಗಳೊಳಗೆ ಹೆಚ್ಚುವರಿಯಾಗಿ 36 ಲಕ್ಷಗಳಷ್ಟು ಡೋಸ್ಗಳನ್ನು ಸರಬರಾಜು ಮಾಡಲಾಗುವುದು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.

