Vaccination

ಕೊವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳನ್ನು ಲಸಿಕೆ ಪಡೆಯದವರು ಎಂದು ವಿದೇಶಿ ವಿವಿಗಳು ಪರಿಗಣಿಸುತ್ತಿವೆ: ಕೇಂದ್ರಕ್ಕೆ ಎಬಿವಿಪಿ ಮಾಹಿತಿ
ಭಾರತದಲ್ಲಿ ಕೊವಾಕ್ಸಿನ್ ಲಸಿಕೆ ಹಾಕಿಸಿಕೊಂಡು ಹೋದ ವಿದ್ಯಾರ್ಥಿಗಳನ್ನು ವಿದೇಶಿ ವಿಶ್ವವಿದ್ಯಾಲಯಗಳು ಲಸಿಕೆ ಹಾಕಿಸಿಕೊಳ್ಳದವರು ಎಂದು ಪರಿಗಣಿಸುತ್ತಿವೆ ಎಂದು ಆರ್ ಎಸ್ ಎಸ್ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ ಅವರಿಗೆ ಮನವಿ ಸಲ್ಲಿಸುವ ಮೂಲಕ ಗಮನ ಸೆಳೆದಿದೆ.

ಕೋವಿಶೀಲ್ಡ್ ಡೋಸ್ ಗಳ ನಡುವಿನ ಅಂತರ ಹೆಚ್ಚಳಕ್ಕೆ ಇರಲಿಲ್ಲವೇ ಭಾರತೀಯ ವಿಜ್ಞಾನಿಗಳ ಬೆಂಬಲ?: ಸತ್ಯ ಬಹಿರಂಗ!
ಕೊರೋನಾ ಲಸಿಕೆ ಕೋವಿಶೀಲ್ಡ್ ನ 2 ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ವಿಜ್ಞಾನಿಗಳ ಬೆಂಬಲ ಇರಲಿಲ್ವಾ? ಹೀಗೊಂದು ಪ್ರಶ್ನೆ ಈಗ ರಾಯ್ಟರ್ಸ್ ವರದಿಯಿಂದ ಉದ್ಭವಿಸಿದೆ.

ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಬಂದ ಆಶಾ ಕಾರ್ಯಕರ್ತೆಗೆ ಮಚ್ಚು ತೋರಿಸಿ ಹೆದರಿಸಿದ ವ್ಯಕ್ತಿ!
ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಹೋದ ಆಶಾ ಕಾರ್ಯಕರ್ತೆಗೆ ವ್ಯಕ್ತಿಯೋರ್ವ ಮಚ್ಚಿನಿಂದ ಹೊಡೆಯಲು ಬಂದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬರ್ಗಿ ಕಾಲೊನಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಫೋಟೋದೊಂದಿಗೆ ಲಸಿಕೆ ಪ್ರಮಾಣ ಪತ್ರ ನೀಡಿಕೆ
ಪಶ್ಚಿಮ ಬಂಗಾಳ ಸರ್ಕಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋಟೋದೊಂದಿಗೆ 18-44 ವರ್ಷದ ಗುಂಪಿನ ಜನರಿಗೆ ನೀಡುತ್ತಿರುವ ಕೋವಿಡ್-19 ಲಸಿಕೆ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದೆ.

ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ಹಾಕಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ
ದೇಶದಲ್ಲಿ ಪ್ರತಿ ದಿನ ಒಂದು ಕೋಟಿ ಜನರಿಗೆ ಕೋವಿಡ್ ಲಸಿಕೆ ವ್ಯಾಕ್ಸಿನೇಷನ್ ಮಾಡುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯಪಾಲ ವಿ.ಆರ್.ವಾಲಾ ಅವರಿಗೆ ಮನವಿ ಮಾಡಿದೆ.

ಲಸಿಕೆ ಸಮಸ್ಯೆ: ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳಿಂದ ಪ್ರಧಾನಿ ಮೋದಿಗೆ ಮೊರೆ
ಭಾರತದ ಪ್ರಜೆಗಳ ಪೈಕಿ 18 ವಯಸ್ಸಿನ ಮೆಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದ್ದರೆ, ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂಗಳಿಗೆ ರಾಜಸ್ಥಾನದಲ್ಲಿ ಲಸಿಕೆಯನ್ನು ನಿರಾಕರಿಸಲಾಗುತ್ತಿದೆ.

ಲಸಿಕೆ, ಟೆಸ್ಟಿಂಗ್ ಗಾಗಿ ಮನೆ-ಮನೆ ಸಮೀಕ್ಷೆ ವೇಳೆ ಸಿಬ್ಬಂದಿಗಳಿಗೆ ಸಹಕರಿಸಿ: ಬಿಬಿಎಂಪಿ ಆಯುಕ್ತ
ಕೋವಿಡ್-19 ಲಸಿಕೆ ಹಾಗೂ ಟೆಸ್ಟಿಂಗ್ ಕುರಿತ ಮಾಹಿತಿ ಸಂಗ್ರಹಿಸಲು ಬಿಬಿಎಂಪಿ ಮನೆ-ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುವ ಅಭಿಯಾನಕ್ಕೆ ಚಾಲನೆ ನೀಡಿದೆ.

18-44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರು, ಆದ್ಯತೆ ವಲಯಗಳ ಸಿಬ್ಬಂದಿಗೆ ನಾಳೆಯಿಂದ ಕೋವಿಡ್ ಲಸಿಕೆ ನೀಡಿಕೆ
18 ರಿಂದ 44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರು, ಆದ್ಯತೆ ವಲಯಗಳ ಸಿಬ್ಬಂದಿಗೆ ನಾಳೆ (ಮೇ22) ಮತ್ತೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಪುನರಾರಂಭವಾಗಲಿದೆ.

ಸಮಯ ಮೀರುತ್ತಿದೆ: ಕರ್ನಾಟಕದಲ್ಲಿ ಶೇ.82 ರಷ್ಟು ಮಂದಿಗೆ ಲಸಿಕೆ ಇನ್ನಷ್ಟೇ ನೀಡಬೇಕಿದೆ!
ಕೋವಿಡ್-19 ನ ಎರಡನೇ ಅಲೆಯ ಹೊಡೆತಕ್ಕೆ ನಲುಗಿರುವ ಕರ್ನಾಟಕಕ್ಕೆ ಮೂರನೆ ಅಲೆಯೂ ಅಪ್ಪಳಿಸುವ ಅಪಾಯಬಿದೆ. ಈ ನಡುವೆ ಕೋವಿಡ್-19 ಲಸಿಕೆಗೆ ಅರ್ಹತೆ ಇರುವ ಶೇ.82 ರಷ್ಟು ಮಂದಿ ಲಸಿಕೆ ಪಡೆಯುವುದಕ್ಕೆ ಕಾಯುತ್ತಿದ್ದಾರೆ.

