Union Budget 2023

ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ: ಆ್ಯಪ್ ಮೂಲಕ ಸುಲಭ-ಸರಳವಾಗಿ ಬಜೆಟ್ ವೀಕ್ಷಿಸಿ
ದೇಶದ ಹಿಂದಿನ ವರ್ಷದ ಆರ್ಥಿಕತೆ, ಮುಂದಿನ ವರ್ಷದಲ್ಲಿ ಸರ್ಕಾರದ ಆರ್ಥಿಕ ಲೆಕ್ಕಾಚಾರಗಳೇನು, ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ, ಸರ್ಕಾರದ ಯೋಜನೆಗಳೇನು, ತೆರಿಗೆ ಎಷ್ಟೆಷ್ಟು ಎಂಬುದನ್ನು ತೋರಿಸುವ ವಿಧಾನವೇ ವಾರ್ಷಿಕ ಬಜೆಟ್.

ಕೇಂದ್ರ ಬಜೆಟ್ 2023: 50 ಹೆಚ್ಚುವರಿ ವಿಮಾನ ನಿಲ್ದಾಣ, ಏರೋಡ್ರಮ್, ಹೆಲಿಪೋರ್ಟ್'ಗಳ ನಿರ್ಮಾಣ
2023-24ನೇ ಸಾಲಿನ ಕೇಂದ್ರ ಬಜೆಟ್ ಘೋಷಣೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಾದೇಶಿಕ ಸಂಪರ್ಕ ಸುಧಾರಣೆಗೆ 50ಕ್ಕೂ ಹೆಚ್ಚು ವಿಮಾನ ನಿಲ್ದಾಣ, ಏರೋಡ್ರೋಮ್, ಹೆಲಿಪೋರ್ಟ್‌ಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ.

ಕೇಂದ್ರ ಬಜೆಟ್ 2023: ಅತ್ಯಂತ ನಿರಾಶದಾಯಕ ಎಂದ ಸಿದ್ದರಾಮಯ್ಯ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2023-24ನೇ ಸಾಲಿನ ಕೇಂದ್ರ ಬಜೆಟ್ ಅತ್ಯಂತ ನಿರಾಶದಾಯಕವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೇಂದ್ರ ಬಜೆಟ್ 2023-24: ಸಿಬಿಐಗೆ 946 ಕೋಟಿ ರೂ. ಅನುದಾನ ಘೋಷಿಸಿದ ನಿರ್ಮಲಾ ಸೀತಾರಾಮನ್
ಕೇಂದ್ರ ಸರ್ಕಾರವು ಬುಧವಾರ ಮಂಡಿಸಿದ 2023-24ರ ಕೇಂದ್ರ ಬಜೆಟ್‌ನಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) 946 ಕೋಟಿ ರೂ. ಅನುದಾನವನ್ನು ಘೋಷಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ 4.4 ರಷ್ಟು ಹೆಚ್ಚಾಗಿದೆ.

ಕೇಂದ್ರ ಬಜೆಟ್ 2023: ಇವಿ ಸೇರಿದಂತೆ ಸಂಪೂರ್ಣ ಆಮದು ಮಾಡಲಾದ ಕಾರುಗಳು ಇನ್ಮುಂದೆ ದುಬಾರಿ
2023-24ರ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಸ್ಟಮ್ಸ್ ಸುಂಕವನ್ನು ಹೆಚ್ಚಿಸುವುದಾಗಿ ಘೋಷಿಸುವುದರೊಂದಿಗೆ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಾದ ಕಾರುಗಳ ಬೆಲೆ ಹೆಚ್ಚಳವಾಗಲಿದೆ.

Live: ಕೇಂದ್ರ ಬಜೆಟ್ 2023: ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ 7 ಲಕ್ಷ ರೂ.ಗೆ ಹೆಚ್ಚಳ
ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ 7ಲಕ್ಷ ಆದಾಯದವರೆಗೆ ತೆರಿಗೆ ವಿನಾಯ್ತಿಯನ್ನು ವಿಸ್ತರಿಸಿದೆ. ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗದವರಿಗೆ ಪ್ರತಿಫಲ ಸಿಗಲೆಂದು ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತರುತ್ತಿದ್ದು, ಅದರಡಿ 7 ಲಕ್ಷದವರೆಗೆ ವೈಯಕ್ತಿಕ ಆದಾಯ ಮಿತಿಯವರೆಗೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಹೇ

2023 ಕೇಂದ್ರ ಬಜೆಟ್ ನಲ್ಲಿ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗಕ್ಕೆ ಪರಿಹಾರ ಇಲ್ಲ- ಕಾಂಗ್ರೆಸ್ ಟೀಕೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2023ರ ಕೇಂದ್ರ ಬಜೆಟ್ ನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗಕ್ಕೆ ಪರಿಹಾರ ಒದಗಿಸಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

ಕೇಂದ್ರ ಬಜೆಟ್ 2023-24: ಈ ಬಾರಿ ಯಾವುದು ಅಗ್ಗ, ಯಾವುದು ದುಬಾರಿ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಬಜೆಟ್ 2023 Live: ಲೋಕಸಭೆಯಲ್ಲಿ ಬಜೆಟ್ ಭಾಷಣ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಭಾಷಣವನ್ನು ಲೋಕಸಭೆಯಲ್ಲಿ ಆರಂಭಿಸಿದರು. ಆರಂಭದಲ್ಲಿಯೇ ವಿರೋಧ ಪಕ್ಷದ ನಾಯಕರು ಘೋಷಣೆ ಕೂಗಲು ಪ್ರಾರಂಭಿಸಿದರು.

