Union Budget 2023

ಕೇಂದ್ರ ಬಜೆಟ್ 2023: ಕೃಷಿಗೆ ಸಂಬಂಧಿಸಿದ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2023-24 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಇದು ವಿತ್ತ ಸಚಿವರ ಐದನೇ ಬಜೆಟ್ ಆಗಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಅಗ್ರಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು 'ಕೃಷಿ ವೇಗವರ್ಧಕ ನಿಧಿ': ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ತಮ್ಮ ಬಜೆಟ್ ಭಾಷಣದಲ್ಲಿ ಅಗ್ರಿ ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಅಂತರ್ಗತ ಅಭಿವೃದ್ಧಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೊದಲ ಆದ್ಯತೆ ಎಂದು ಒತ್ತಿ ಹೇಳಿದರು.

ಮಕ್ಕಳಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಬಜೆಟ್ ಭಾಷಣದಲ್ಲಿ ಗುಣಮಟ್ಟದ ಪುಸ್ತಕಗಳ ಲಭ್ಯತೆಗಾಗಿ ಮಕ್ಕಳು ಮತ್ತು ಹದಿಹರೆಯದವರಿಗೆ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.

ಕೇಂದ್ರ ಬಜೆಟ್ 2023: ಚುನಾವಣೆ ಮೇಲೆ ಕಣ್ಣು; ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೆರವು
ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ, ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ನೆರವನ್ನು ಕೇಂದ್ರದಿಂದ ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಘೋಷಿಸಿದ್ದಾರೆ.

ಕೇಂದ್ರ ಬಜೆಟ್ 2023-24 ಪ್ರಸ್ತಾಪಗಳು ಏಳು ಅಂಶಗಳ ಮೇಲೆ ನಿಂತಿವೆ: ವಿತ್ತ ಸಚಿವೆ ಸೀತಾರಾಮನ್
ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದು ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ಮಂಡನೆ ಮಾಡಿರುವ ಬಜೆಟ್'ನ 7 ಅಂಶಗಳನ್ನು ಹೆಸರಿಸಿದ್ದಾರೆ.

ಇದೇ ಮೊದಲ ಬಾರಿಗೆ ವಿತ್ತ ಸಚಿವರಿಂದ ಡಿಜಿಟಲ್ ಸಾಧನ ಮೂಲಕ ಕೇಂದ್ರ ಬಜೆಟ್ 2023 ಮಂಡನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಕೇಂದ್ರ ಬಜೆಟ್ ನ್ನು ತಮ್ಮ ಕೈಯಲ್ಲಿ ಸಾಂಪ್ರದಾಯಿಕ 'ಬಹಿ-ಖಾತಾ' ಬದಲಿಗೆ ಡಿಜಿಟಲ್ ಸಾಧನದೊಂದಿಗೆ ಈ ವರ್ಷ ಮಂಡಿಸಲಿದ್ದಾರೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ರೂ. 2 ಲಕ್ಷ ಕೋಟಿ: ನಿರ್ಮಲಾ ಸೀತಾರಾಮನ್
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ರೂ. 2 ಲಕ್ಷ ಕೋಟಿ ವೆಚ್ಚವನ್ನು ಕೇಂದ್ರ ಸರ್ಕಾರದಿಂದ ಭರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ತಿಳಿಸಿದರು.

ಕೆಂಪು ಸೀರೆ, ಕೆಂಪು ಬಿಂದಿ, ಕೆಂಪು ಡಿಜಿಟಲ್ ಟ್ಯಾಬ್... ಕೆಂಪಿನಿಂದ ಕಂಗೊಳಿಸಿದ ಸಚಿವೆ ನಿರ್ಮಲಾ: ಕೆಂಪು ಶಕ್ತಿ, ಧೈರ್ಯದ ಸಂಕೇತ
2023 ರ ಕೇಂದ್ರ ಬಜೆಟ್ ನ್ನು ಬುಧವಾರ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ಎಲ್ಲಾ ಕಣ್ಣುಗಳು ಇರುವುದರಿಂದ, ಈ ವರ್ಷ ಸಚಿವೆ ಯಾವ ಬಣ್ಣದ ಸೀರೆ ಉಟ್ಟಿದ್ದಾರೆ, ಎಂತಹ ಸೀರೆ ಉಟ್ಟಿದ್ದಾರೆ ಎಂಬ ಮೇಲೆ ಸಹ ಚರ್ಚೆಗಳು, ಮಾಧ್ಯಮಗಳ ಕಣ್ಣು ಹೊರಳುತ್ತವೆ.

ಬಜೆಟ್ 2023: ತೆರಿಗೆ ದರ, ಹಣಕಾಸಿನ ಬಲವರ್ಧನೆ ಮಧ್ಯೆ ಬಜೆಟ್ ಮಂಡನೆ ನಿರ್ಮಲಾ ಸೀತಾರಾಮನ್ ಗೆ ಹಗ್ಗದ ಮೇಲಿನ ನಡಿಗೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಕೇಂದ್ರ ಬಜೆಟ್ ಮಂಡನೆ ಸಮಯದಲ್ಲಿ ಆರ್ಥಿಕವಾಗಿ ವಿವೇಕಯುತವಾಗಿ ಉಳಿಯುವ ಮತ್ತು ಕಡಿಮೆ ತೆರಿಗೆಗಳು, ವ್ಯಾಪಕ ಸಾಮಾಜಿಕ ಭದ್ರತಾ ನಿವ್ವಳದ ಸಾಮಾನ್ಯ ಸಾರ್ವಜನಿಕ ನಿರೀಕ್ಷೆಗಳ ನಡುವೆ ಅವರದ್ದು ಹಗ್ಗದ ಮೇಲಿನ ನಡಿಗೆಯಾಗಿದೆ.

