Umesh katti

ಶಾಸಕರ ಜೊತೆ ಮನೆಯಲ್ಲಿ ಊಟ ಮಾಡಿದ್ದೇವೆ: ಬಂಡಾಯ ಚಟುವಟಿಕೆ ನಡೆಸಿಲ್ಲ- ಉಮೇಶ್ ಕತ್ತಿ
ಶಾಸಕರ ಜೊತೆ ಮನೆಯಲ್ಲಿ ಊಟ ಮಾಡಿದ್ದು ನಿಜ.ಆದರೆ ಯಾವುದೇ ರೀತಿಯ ಬಂಡಾಯ ಚಟುವಟಿಕೆ ನಡೆಸಿಲ್ಲ ಇಂತಹ ಸಮಯದಲ್ಲಿ ಅಂತಹ ಕೆಲಸ ಮಾಡಲ್ಲ ನಮಗೂ ಜವಾಬ್ದಾರಿ ಇದೆ ಎಂದು ಶಾಸಕ ಉಮೇಶ್ ಕತ್ತಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬಂದ ದಾರಿಕೆ ಸುಂಕವಿಲ್ಲ: ಅಮಿತ್ ಶಾ ಭೇಟಿಯಾಗದೆ ವಾಪಸ್ಸಾದ ಉಮೇಶ್ ಕತ್ತಿ
ಸಚಿವ ಸ್ಥಾನ ಕೈತಪ್ಪಿರುವ ಹಿನ್ನಲೆಯಲ್ಲಿ ಬೇಸರಗೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ದೆಹಲಿಗೆ ತೆರಳಿದ್ದ ಮಾಜಿ ಸಚಿವ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕರ್ನಾಟಕ ಭವನದಿಂದ ತೆರಳಿದ್ದಾರೆ.

ಕೈತಪ್ಪಿದ ಸಚಿವ ಸ್ಥಾನ: ಬೇಸತ್ತ ಉಮೇಶ್ ಕತ್ತಿಯಿಂದ ಜೆಡಿ ನಡ್ಡಾ ಭೇಟಿ
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಉಮೇಶ್ ಕತ್ತಿ ಮತ್ತು ಅವರ ಸಹೋದರ ರಮೇಶ್ ಕತ್ತಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಪ್ರಮಾಣ ವಚನ ಸಮಾರಂಭಕ್ಕೆ ಅಸಮಾಧಾನಿತರ ಗೈರು: ಬಂಡಾಯದ ಬಾವುಟ ಹಾರಿಸುತ್ತಾರಾ ಕತ್ತಿ?
ನೂತನ ಹತ್ತು ಮಂದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಬೆಳಗ್ಗೆ ಮುಖ್ಯಮಂತ್ರಿ ನಿವಾಸಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಒಟ್ಟಾಗಿ ಆಗಮಿಸಿ ಮಾತುಕತೆ ನಡೆಸಿದರು.

ಯಡಿಯೂರಪ್ಪ ಸಚಿವ ಸ್ಥಾನದ ಮಾತುಕೊಟ್ಟಿದ್ದಾರೆ: ಉಮೇಶ್ ಕತ್ತಿ
ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮಗೆ ಸಚಿವ ಸ್ಥಾನದ ಮಾತು ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

ನನಗೆ ಡಿಸಿಎಂ ಹುದ್ದೆ ಬೇಕಿಲ್ಲ: ಕೊಡುವುದಾದರೇ ಸಿಎಂ ಹುದ್ದೆನೆ ಕೊಡಲಿ: ಉಮೇಶ್ ಕತ್ತಿ
ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಗೆದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಸರ್ಕಾರವನ್ನು ಸೇಫ್ ಮಾಡಿಕೊಂಡಿದ್ದಾರೆ. ಆದರೆ ಇದೀಗ ಸಚಿವ ಸಂಪುಟ ವಿಸ್ತರಣೆ ಯಡಿಯೂರಪ್ಪನವರಿಗೆ ಕಗ್ಗಂಟಾಗಿ ಪರಿಣಮಿಸಿದ್ದು ಬಿಜೆಪಿಯೊಳಗೆ ಸಚಿವಕಾಂಕ್ಷಿಗಳ ಪಟ್ಟಿ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ.

'ಡಿಸಿಎಂ ಮಾತ್ರ ಆಗಲ್ಲ, ಆದರೆ ಮುಖ್ಯಮಂತ್ರಿಯಾಗ್ತೀನಿ, ಇಲ್ಲದಿದ್ರೆ ಸುಮ್ಮನಿರ್ತಿನಿ'

ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುವೆ- ಉಮೇಶ್ ಕತ್ತಿ
ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುವುದಾಗಿ ಶಾಸಕ ಉಮೇಶ್ ಕತ್ತಿ ಮತ್ತೊಮ್ಮೆ ತಮ್ಮ ಮಹತ್ವಾಕಾಂಕ್ಷೆಯನ್ನು ನಾಡಿನ ಮುಂದೆ ವ್ಯಕ್ತಪಡಿಸಿದ್ದಾರೆ.

ಅವರಿಲ್ಲದಿದ್ದರೆ ನೀವು ಡಿಸಿಎಂ ಆಗುತ್ತಿರಲಿಲ್ಲ: ಅನರ್ಹರಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದ ಸವದಿಗೆ ಕತ್ತಿ ತಿರುಗೇಟು
ಸ್ವಪಕ್ಷೀಯರ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಉಮೇಶ್ ಕತ್ತಿ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಅದರಲ್ಲೂ ಅನರ್ಹರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

