Umesh katti

ಸಿಎಂ ರೇಸ್‌ನಲ್ಲಿ ನಾನು ಮುಂಚೂಣಿಯಲ್ಲಿರುವೆ: ಸಚಿವ ಉಮೇಶ್ ಕತ್ತಿ
ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ನಾನು ಮುಂಚೂಣಿಯಲ್ಲಿರುವೆ ಎಂದು ಬಿಜೆಪಿ ಹಿರಿಯ ನಾಯಕ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.

8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಅವಕಾಶ ಸಿಕ್ಕರೆ ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು: ಉಮೇಶ್ ಕತ್ತಿ
ಅವಕಾಶ, ದೈವಬಲ, ಜನಬಲವಿದ್ದರೆ ಎರಡೂವರೆ ವರ್ಷಗಳ ಬಳಿಕ ನಾನು ಕೂಡ ಮುಖ್ಯಮಂತ್ರಿಯಾಗಬಹುದು. ಎಂಟು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ.

ಆತ್ಮವಿಶ್ವಾಸ ಕಳೆದುಕೊಂಡು ಸಾಯುವವರಿಗೆ ಪಂಪ್ ಹೊಡೆದು ಧೈರ್ಯ ತುಂಬಲು ಸಾಧ್ಯವೇ: ಕತ್ತಿ ಬೇಜವಾಬ್ದಾರಿ ಹೇಳಿಕೆ
ಧೈರ್ಯ ಕಳೆದುಕೊಂಡು ಸಾಯುವವರಿಗೆ ಏನು ಮಾಡೋಕಾಗಲ್ಲ. ಪಂಪ್ ಹೊಡೆದು ಧೈರ್ಯ ತುಂಬಬೇಕಾ?. ಧೈರ್ಯದಿಂದ ಎಲ್ಲರೂ ಚಿಕಿತ್ಸೆ ಪಡೆದು ಬದುಕುವಂತಾಗಬೇಕು ಎಂದು ಸಚಿವ ಉಮೇಶ್ ಕತ್ತಿ ಬೇಜವಾಬ್ದಾರಿಯಾಗಿ ಹೇಳಿದ್ದಾರೆ.

ಕೊರೋನಾ ಮೂರನೇ ಅಲೆಯಲ್ಲಿ ನೀವು ಉಳಿತಿರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಬದುಕಬೇಕು: ಮತ್ತೆ 'ಕತ್ತಿ' ವರಸೆ
ಕೊರೋನಾ ಮೂರನೇ ಅಲೆ ಬರುತ್ತೆ, ನಾವು, ನೀವು ಉಳಿಯಬೇಕು. ನೀವು ಉಳಿಯುತ್ತೀರೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿಕೆ ನೀಡಿದ್ದಾರೆ.

ಅಕ್ಕಿ ಕೇಳಿದ್ದಕ್ಕೆ 'ಸತ್ತು ಹೋಗಿ' ಎಂದ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸಿಎಂ ಯಡಿಯೂರಪ್ಪ ವಿಷಾದ
ಆಹಾರ ಸಚಿವ ಉಮೇಶ್ ಕತ್ತಿ ನೀಡಿರುವ ಉಡಾಫೆ ಹಾಗೂ ಬೇಜವಾಬ್ದಾರಿ ಹೇಳಿಕೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

ಮುಂದಿನ 20 ವರ್ಷದೊಳಗೆ ನಾನು ಮುಖ್ಯಮಂತ್ರಿ ಆಗಿಯೇ ತೀರುತ್ತೇನೆ: ಉಮೇಶ್ ಕತ್ತಿ
ಮುಂದಿನ 20 ವರ್ಷಗಳ ಕಾಲ ನಾನು ಶಾಸಕನಾಗಿ ಮುಂದುವರಿಯಬೇಕೆಂಬ ಆಸೆ ಇದ್ದು, ಮುಂದೆ ಒಂದು ದಿನ ಮುಖ್ಯಮಂತ್ರಿಯಾಗುವ ಪ್ರಸಂಗವೂ ದೂರ ಇಲ್ಲ. 20 ವರ್ಷದೊಳಗೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ

ತಪ್ಪಿದ ರಾಜ್ಯಸಭೆ ಟಿಕೆಟ್: ಕುದಿಯುತ್ತಿರುವ ಕತ್ತಿ ಬಣ: ಕಾಂಗ್ರೆಸ್ ಗೆ ಮರಳುತ್ತಾರಾ ಕತ್ತಿ ಸಹೋದರರು?
ರಾಜ್ಯ ಸಭೆಗೆ ಇಬ್ಬರು ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಿರುವ ಹೈಕಮಾಂಡ್ ಕ್ರಮದಿಂದ ಕತ್ತಿ ಸಹೋದರರು ಮತ್ತಷ್ಟು ಆಕ್ರೋಶಗೊಂಡಿದ್ದಾರೆ, ರಾಜ್ಯಸಭೆ ಟಿಕೆಟ್ ಅಥವಾ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಒತ್ತಡ ಹೇರಿದ್ದರು. ಸದ್ಯ ಎರಡರಲ್ಲೂ ಅವಕಾಶ ಸಿಗದ ಕಾರಣ ಕತ್ತಿ ಬಣ ಮತ್ತಷ್ಟು ಸಿಟ್ಟಿಗೆದ್ದಿದೆ.

ಬಿಜೆಪಿ ಬೇಗುದಿ: ರಾಜ್ಯಸಭೆ ಟಿಕೆಟ್ ಗಾಗಿ 'ಕತ್ತಿ' ಕೊತ ಕೊತ; 'ಕೋರೆ' ಶಾಂತ!
ರಾಜ್ಯಸಭೆ ಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಲಾಬಿ ಮುಂದುವರಿದಿದೆ, ಹಾಲಿ ಸಂಸದ ಪ್ರಭಾಕರ ಕೋರೆ ಯಾವುದೇ ಲಾಬಿ ಮಾಡದೇ ಹೈಕಮಾಂಡ್ ಮೇಲೆ ಭಾರ ಹಾಕಿ ಶಾಂತವಾಗಿ ಕುಳಿತಿದ್ದಾರೆ.

ಉಮೇಶ್ ಕತ್ತಿಯವರೊಬ್ಬರಿಂದಲೇ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಚಾಟಿ
ಉಮೇಶ್ ಕತ್ತಿಯವರ ಪ್ರಯತ್ನ ವಿಫಲವಾಗಲಿದೆ. ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕತ್ತಿಯವರು ಕನಸು ಕಾಣಬೇಕಷ್ಟೇ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

