Umesh katti

ಯಾರಿಗೊಲಿಯಲಿದೆ ಹುಕ್ಕೇರಿ, ಸವದತ್ತಿ ವಿಧಾನಸಭೆ ಟಿಕೆಟ್: ಕತ್ತಿ- ಮಾಮನಿ ಕುಟುಂಬಸ್ಥರ ಫೈಟ್; ಅಭ್ಯರ್ಥಿ ಆಯ್ಕೆಯೇ ಬಿಜೆಪಿಗೆ ಟಾಸ್ಕ್!
ಸವದತ್ತಿ ಮತ್ತು ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಥಳೀಯವಾಗಿ ಜನಪ್ರಿಯವಾಗಿರುವ ಇಬ್ಬರು ನಾಯಕರನ್ನು ಕಣಕ್ಕಿಳಿಸುತ್ತಿದೆ, ಹೀಗಾಗಿ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಸವಾಲಿನ ಕೆಲಸವಾಗಿದೆ.

ಉಮೇಶ್ ಕತ್ತಿ, ಆನಂದ್ ಮಾಮನಿ ನಿಧನ: ಬೆಳಗಾವಿಯಲ್ಲಿ ಗೆಲ್ಲುವ ಕುದುರೆಗಳಿಲ್ಲದೆ ಬಿಜೆಪಿಗೆ ಭ್ರಮ ನಿರಸನ!
ಶಾಸಕರಾದ ಉಮೇಶ ಕತ್ತಿ (ಹುಕ್ಕೇರಿ) ಮತ್ತು ಆನಂದ ಮಾಮನಿ (ಸವದತ್ತಿ) ನಿಧನವು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗುವ ನಿರೀಕ್ಷೆಯಿದೆ.

ಉಮೇಶ್ ಕತ್ತಿ ಹಠಾತ್ ನಿಧನ: ಆರೋಗ್ಯದ ವಿಷಯದಲ್ಲಿ ರಾಜಕಾರಣಿಗಳ ತೀವ್ರ ಲಕ್ಷ್ಯ; ಜ್ವರ-ಕೆಮ್ಮಿಗೂ ಆಸ್ಪತ್ರೆಗೆ ದಾಖಲು!
ಅರಣ್ಯ ಸಚಿವ ಉಮೇಶ ಕತ್ತಿ (61) ಹೃದಯಾಘಾತದಿಂದ ಹಠಾತ್ ನಿಧನವಾದ ನಂತರ, ರಾಜಕಾರಣಿಗಳು ಅವಕಾಶಗಳನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ.

ಉಮೇಶ್ ಕತ್ತಿ ನಿಧನ ರಾಜ್ಯ ಬಿಜೆಪಿಗೆ ತುಂಬಲಾರದ ನಷ್ಟ: ಅರುಣ್ ಸಿಂಗ್
ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ನನ್ನ ಮಿತ್ರ ಉಮೇಶ್ ಕತ್ತಿಯವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕರ್ನಾಟಕಕ್ಕೆ, ಬಿಜೆಪಿ ಮತ್ತು ವೈಯಕ್ತಿಕವಾಗಿ ಅಪಾರ ನಷ್ಟವಾಗಿದೆ.

ಮಣ್ಣಲ್ಲಿ ಮಣ್ಣಾದ ಉಮೇಶ್ ಕತ್ತಿ, ಬಾಗೇವಾಡಿ ಸಾಹುಕಾರನಿಗೆ ಭಾವಪೂರ್ಣ ವಿದಾಯ
ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದ ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಮಣ್ಣಲ್ಲಿ ಮಣ್ಣಾಗಿದ್ದು, ಬೆಲ್ಲದ ಬಾಗೇವಾಡಿಯ ಸಾಹುಕಾರನಿಗೆ ಸಾವಿರಾರು ಜನ ಭಾವಪೂರ್ಣ ವಿದಾಯ ಹೇಳಿದರು.

ತಂದೆಯಂತೆ ಅಂತ್ಯ ಕಂಡ ಪುತ್ರ: 'ಕತ್ತಿ ತಂದೆಗೆ ಅಸೆಂಬ್ಲಿಯಲ್ಲಿ ಹಾರ್ಟ್ ಅಟ್ಯಾಕ್ ಆಗಿತ್ತು' ಎಂದು ನೆನಪಿಸಿಕೊಂಡ ಸಿದ್ದರಾಮಯ್ಯ
ತಮ್ಮ ತಂದೆಯಂತೆ ಸಾವನ್ನು ಕಂಡ ಸಚಿವ ಉಮೇಶ್ ಕತ್ತಿಯವರ ಕೊನೆಗಳಿಗೆ ಕಾಕತಾಳೀಯ ಎನ್ನಬಹುದು. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ನಿವಾಸದಲ್ಲಿ ಕಳೆದ ರಾತ್ರಿ ಬಾತ್ ರೂಂಗೆ ಹೋಗಿದ್ದ ಸಚಿವ ಉಮೇಶ್ ಕತ್ತಿ ಅಲ್ಲಿಯೇ ಕುಸಿದು ಬಿದ್ದಿದ್ದರು.

ನೇರವಾಗಿ ಮಾತನಾಡುವ ಹಾಸ್ಯ ಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದರು ಉಮೇಶ್ ಕತ್ತಿ: ಗೃಹ ಸಚಿವ ಆರಗ ಜ್ಞಾನೇಂದ್ರ
ಸಚಿವ ಉಮೇಶ್ ಕತ್ತಿಯವರು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದ ನೇರ-ನಿಷ್ಠುರ ವ್ಯಕ್ತಿಯಾಗಿದ್ದರು ಎಂದು ಗೃಹ ಸಚಿವ ಆರಗ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸಚಿವ ಉಮೇಶ್ ಕತ್ತಿ ತೀವ್ರ ಹೃದಯಾಘಾತದಿಂದ ನಿಧನ
ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕನಸುಗಾರ ಉಮೇಶ್ ಕತ್ತಿ: ಅರ್ಧಕ್ಕೆ ನಿಂತ ಅವಿರತ ಹೋರಾಟ; ಸ್ಪರ್ಧಿಸಿದ್ದ 9 ಚುನಾವಣೆಗಳಲ್ಲಿ 8 ಬಾರಿ ಗೆಲುವು!
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅರಣ್ಯ ಸಚಿವ, ಹಿರಿಯ ರಾಜಕಾರಣಿ ಉಮೇಶ ಕತ್ತಿ ಅವರು ಸ್ಪರ್ಧಿಸಿದ್ದ ಒಂಬತ್ತು ಚುನಾವಣೆಗಳಲ್ಲಿ ಎಂಟರಲ್ಲಿ ಗೆದ್ದು ರಾಜ್ಯ ರಾಜಕಾರಣದಲ್ಲಿ ದಾಖಲೆ ನಿರ್ಮಿಸಿದ್ದರು.

