Uber

Uber: ಬೆಂಗಳೂರಿನಲ್ಲಿ ಮಹಿಳೆಯರಿಗೆ ಬೈಕ್ ಟ್ಯಾಕ್ಸಿ ಸೇವೆ ಪ್ರಾರಂಭ
ಕಂಪೆನಿಯು 250 ಮಹಿಳಾ ರೈಡರ್‌ಗಳಿಗೆ ಆರಂಭದಲ್ಲಿ ಸೇವೆಯನ್ನು ಪ್ರಾರಂಭಿಸಿದ್ದು, ಮುಂಬರುವ ದಿನಗಳಲ್ಲಿ ಸಂಖ್ಯೆಯನ್ನು ಹೆಚ್ಚಿಸುವುದಾಗಿ ಮತ್ತು ಇತರ ನಗರಗಳಿಗೆ ವಿಸ್ತರಿಸುವುದಾಗಿ ತಿಳಿಸಿದೆ.

ಓಲಾ, ಉಬರ್ ಆಟೋ ಸೇವೆಗೆ ಶೇ.5 ಸೇವಾ ಶುಲ್ಕ: ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ.5 ಸೇವಾ ಶುಲ್ಕ ಮತ್ತು ಅನ್ವಯಿಸುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.

ಓಲಾ, ಊಬರ್ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಪಡಿಸಿದ ಸರ್ಕಾರ
ಪೀಕ್ ಅವರ್ನಲ್ಲಿ ಬೇಕಾಬಿಟ್ಟಿ ದರ ಏರಿಸಿ ಜನರ ಸುಲಿಗೆ ಮಾಡುತ್ತಿದ್ದ ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳಾದ ಓಲಾ, ಊಬರ್, ರ್ಯಾಪಿಡೋ ಮತ್ತು ಸಿಟಿ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರ ಈಗ ಏಕರೂಪ ದರ ನಿಗದಿಪಡಿಸಿದೆ.

ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಬೇಕು: ಓಲಾ-ಉಬರ್ ಚಾಲಕರ ಸಂಘ ಒತ್ತಾಯ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಓಲಾ ಮತ್ತು ಉಬರ್ ಕ್ಯಾಬ್ ಚಾಲಕರು ಮತ್ತು ಮಾಲೀಕರ ಸಂಘ ಮತ್ತು ಕರ್ನಾಟಕ ವಾಣಿಜ್ಯ ವಾಹನ ಚಾಲಕರ ಒಕ್ಕೂಟದ ಸದಸ್ಯರು ಸೋಮವಾರ ಆಗ್ರಹಿಸಿದ್ದಾರೆ.

ಓಲಾ, ಊಬರ್ ಆಟೋ ಸೇವೆಗೆ ಶೇ.5ರಷ್ಟು ಸೇವಾಶುಲ್ಕ; ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
ಆ್ಯಪ್ ಆಧಾರಿತ ಪ್ರಯಾಣ ಸೇವೆ ಒದಗಿಸುತ್ತಿರುವ ಓಲಾ, ಉಬರ್ (Uber, Ola) ಕಂಪನಿಗಳ ಆಟೋ ಸೇವೆಗೆ ಶೇ.5ರಷ್ಟು ಸೇವಾಶುಲ್ಕ ನಿಗದಿಪಡಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ (Karnataka High Court) ಬುಧವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಓಲಾ, ಉಬರ್ ಆಟೋ ಸೇವೆಗೆ ದರ ನಿಗದಿ: ಸರ್ಕಾರದ ಅಧಿಸೂಚನೆಗೆ ಕ್ಯಾಬ್ ಅಗ್ರಿಗೇಟರ್‌ಗಳ ವಿರೋಧ
ತಮ್ಮ ಮೂಲಕ ಸಂಚರಿಸುವ ಆಟೋರಿಕ್ಷಾಗಳಿಗೆ ಮಾತ್ರ ಶೇ 5ರ ವರೆಗೆ ಸೇವಾ ಶುಲ್ಕ ಸಂಗ್ರಹಿಸಲು ಸಾರಿಗೆ ಇಲಾಖೆಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ಅಧಿಸೂಚನೆಗೆ ಕ್ಯಾಬ್ ಅಗ್ರಿಗೇಟರ್‌ಗಳಾಗಿರುವ ಓಲಾ ಮತ್ತು ಉಬರ್ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಓಲಾ, ಉಬರ್ ಆಟೋರಿಕ್ಷಾ ಸೇವೆ ಪ್ರಕರಣ: ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ 4 ವಾರ ಸಮಯ: ಹೈಕೋರ್ಟ್
ಓಲಾ ಮತ್ತು ಉಬರ್ ತಮ್ಮ ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ನೀಡುವುದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕರ್ನಾಟಕ ಹೈಕೋರ್ಟ್ 4 ವಾರಗಳ ಕಾಲ ಸಮಯ ನೀಡಿದೆ.

ಓಲಾ-ಉಬರ್ ಜೊತೆಗೂಡುವುದಿಲ್ಲ: ವಿಲೀನ ಕುರಿತ ಊಹಾಪೋಹಕ್ಕೆ ಓಲಾ ಸಿಇಒ ತೆರೆ
ಖ್ಯಾತ ಟ್ಯಾಕ್ಸಿ ಸೇವಾ ಪೂರೈಕೆದಾರ ಸಂಸ್ಥೆಗಳಾದ ಓಲಾ ಮತ್ತು ಉಬರ್ ಸಂಸ್ಥೆಗಳು ವಿಲೀನಗೊಳ್ಳುತ್ತವೆ ಎಂಬ ಊಹಾಪೋಹಗಳಿಗೆ ಓಲಾ ಸಿಇಒ ಭವೀಷ್ ಅಗರ್ವಾಲ್ ಅವರು ತೆರೆ ಎಳೆದಿದ್ದು, ಅಂತಹ ಯಾವುದೇ ಪ್ರಸ್ತಾಪ ತಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.

ಆಟೋ ರೀಕ್ಷಾಗಳ ದರ ನಿಗದಿ: ಓಲಾ, ಉಬರ್ ಕಂಪನಿಗಳೊಂದಿಗೆ ಸಭೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಆ್ಯಪ್ ಆಧಾರಿತ ಆಟೋ ರಿಕ್ಷಾಗಳ ಸೇವೆ ದರ ನಿಗದಿಯಲ್ಲಿ ಒಮ್ಮತ ಮೂಡಿಸುವ ನಿಟ್ಟಿನಲ್ಲಿ ಟ್ಯಾಕ್ಸಿ ಕಂಪನಿಗಳ ಜೊತೆಗೆ ರಾಜ್ಯ ಸರ್ಕಾರ ನಡೆಸುವಂತೆ ಹೈಕೋರ್ಟ್ ಗುರುವಾರ ಹೇಳಿದೆ.

