
ಬಿಲಿಯನ್ ಡಾಲರ್ ಟ್ವಿಟರ್ ಸಂಸ್ಥೆಗೆ ಹೊಸ ಸಿಇಒ ಪರಿಚಯಿಸಿದ ಎಲಾನ್ ಮಸ್ಕ್: ಪರಾಗ್ ಅಗರ್ ವಾಲ್ ಗಿಂತ ಇದೇ ಬೆಸ್ಟ್ ಅಂತೆ!
ಬಿಲಿಯನ್ ಡಾಲರ್ ಉದ್ಯಮಿ, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸಿಇಒ ಆಗಿ ಹೊಸಬರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೇ ಹೊಸ ಸಿಇಒ ನನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

ಟ್ವಿಟರ್ ಬ್ಲೂ ಟಿಕ್ ಪಡೆಯಲು ಭಾರತದಲ್ಲಿ ತಿಂಗಳಿಗೆ 900 ರೂ.ವರೆಗೆ ಶುಲ್ಕ
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಬಳಿಕ ಹಲವು ಬದಲಾವಣೆಗಳನ್ನು ಮಾಡುತ್ತಿದ್ದು, ಇದೀಗ ಭಾರತದಲ್ಲಿ ಟ್ವಿಟರ್ ಬ್ಲೂ ಟಿಕ್ ಪಡೆಯಲು ತಿಂಗಳಿಗೆ 900 ರೂಪಾಯಿವರೆಗೆ ಶುಲ್ಕ ವಿಧಿಸಲು ನಿರ್ಧರಿಸಿದೆ.

'ನಾಯಿ ಕಾದಿತ್ತು, ಅನ್ನ ಹಳಸಿತ್ತು'.. 'ಬೇರೆ ದಾರಿಯಿಲ್ಲದೆ ಈಶ್ವರಪ್ಪ ರಾಜೀನಾಮೆ': ಸಿದ್ದರಾಮಯ್ಯ
ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ಹೆಡೆಮುರಿಕಟ್ಟಿ ಕೂರಿಸುವ ಕಾಲ ಬಂದಿದ್ದು, ಅಂದು ನಾವು ಮಾಡಿದ ಕೆಲಸದಿಂದ ಬೇರೆ ದಾರಿಯಿಲ್ಲದೆ ಈಶ್ವರಪ್ಪ ರಾಜೀನಾಮೆ ನೀಡಿದರು ಎಂದು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

'ನನ್ನಂತೆ ನಿಮಗೆ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬರುವುದು ಬೇಡ': ವ್ಯಂಗ್ಯ ಟ್ವೀಟ್ ಗೆ ಸಮಂತಾ ಉತ್ತರ
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಕಳೆದೊಂದು ವರ್ಷದಿಂದ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ವೃತ್ತಿಜೀವನ ಇನ್ನೇನು ಏರುಗತಿಯಲ್ಲಿ ಇದೆ ಎನ್ನುವಾಗಲೇ ಅವರಿಗೆ ಆರೋಗ್ಯ ಕೈ ಕೊಟ್ಟಿತು. ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲಿ ಹಲವು ತಿಂಗಳು ಚಿಕಿತ್ಸೆ ಪಡೆದ ನಂತರವೂ ಅವರು ಪೂರ್ಣವಾಗಿ ಗುಣಮುಖವಾಗಿಲ್ಲ.

ಟ್ವಿಟರ್ ಖಾತೆ ಅಮಾನತು ಬಗ್ಗೆ 'ಕಾಂತಾರ' ನಟ ಕಿಶೋರ್ ಕುಮಾರ್ ಹೇಳಿದ್ದಿಷ್ಟು...
ಹ್ಯಾಕಿಂಗ್ ಸಮಸ್ಯೆಯಿಂದಾಗಿ ಟ್ವಿಟರ್ ತನ್ನ ಖಾತೆಯನ್ನು ಸ್ಥಗಿತಗೊಳಿಸಿದೆ ಮತ್ತು ನನ್ನ ಪೋಸ್ಟ್‌ಗಳಿಂದಲ್ಲ. ಅಲ್ಲದೆ, ಮೈಕ್ರೋಬ್ಲಾಗಿಂಗ್ ಸೈಟ್ ಅಗತ್ಯ ಕ್ರಮದ ಭರವಸೆ ನೀಡಿದೆ ಎಂದು ನಟ ಕಿಶೋರ್ ಕುಮಾರ್ ಜಿ ಹೇಳಿದ್ದಾರೆ

16.5 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಕಳೆದುಕೊಂಡ ಎಲಾನ್ ಮಸ್ಕ್, ನಷ್ಟದಲ್ಲೂ ದಾಖಲೆ!
ಒಂದು ವರ್ಷದ ಹಿಂದಷ್ಟೇ ಆಸ್ತಿ ಗಳಿಕೆಯಲ್ಲಿ ಅಮೆಜಾನ್ ಮುಖ್ಯಸ್ಥ ಜೆಫ್ ಬಿಜೋಸ್ ರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದ ಟೆಸ್ಲಾ-ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಇದೀಗ ಇದಕ್ಕೆ ತದ್ವಿರುದ್ಧ ದಾಖಲೆಯೊಂದನ್ನು ನಿರ್ಮಿಸಿದ್ದು, ವರ್ಷಾರಂಭದಲ್ಲೇ ಬರೊಬ್ಬರಿ 16.5 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಕಳೆದುಕೊಂಡಿದ್ದಾರೆ.

ಟ್ವಿಟರ್ ಸಿಬ್ಬಂದಿಗಳಿಗೆ ಮಸ್ಕ್ ಮತ್ತೊಂದು ಶಾಕ್; ಸ್ವಚ್ಛತಾ ಸಿಬ್ಬಂದಿ ವಜಾ; ಕಚೇರಿಗೆ ತಮ್ಮ ದುಡ್ಡಲ್ಲೇ ಟಾಯ್ಲೆಟ್ ಟಿಶ್ಯೂ ತರುತ್ತಿರುವ ಉದ್ಯೋಗಿಗಳು!
ಟ್ವಿಟರ್ (Twitter) ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡ ಬಳಿಕ ಅಲ್ಲಿನ ಸಿಬ್ಬಂದಿಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಎಲಾನ್ ಮಸ್ಕ್ (Elon Musk) ಅಡುಗೆ ಮನೆ ರದ್ದುಗೊಳಿಸಿದ ಬೆನ್ನಲ್ಲೇ ಇದೀಗ ಕಚೇರಿಯ ಸ್ವಚ್ಛತಾ ಸಿಬ್ಬಂದಿಗಳನ್ನು ವಜಾ ಮಾಡಿ ಮತ್ತೊಂದು ಶಾಕ್ ನೀಡಿದ್ದಾರೆ.

ಟ್ವಿಟರ್ ಸ್ಥಗಿತವು ವಿಶ್ವದಾದ್ಯಂತ ಸಾವಿರಾರು ಬಳಕೆದಾರರ ಮೇಲೆ ಪರಿಣಾಮ! ಸಿಇಒ ಎಲಾನ್ ಮಸ್ಕ್ ಹೇಳಿದ್ದೇನು?
ಸಾಮಾಜಿಕ ಜಾಲತಾಣ ಟ್ವಿಟರ್ ಇಂದು ಮತ್ತೆ ಸ್ಥಗಿತಗೊಂಡಿದ್ದು ವಿಶ್ವದಾದ್ಯಂತ ಸಾವಿರಾರು ಬಳಕೆದಾರರಿಗೆ ತೊಂದರೆಯಾಗಿದೆ.

ಸರೋದ್ ವಾದಕ ಅಮ್ಜದ್ ಅಲಿ ಖಾನ್ ಗೆ ಬ್ರಿಟನ್ ವೀಸಾ ನಿರಾಕರಣೆ
ವಿದೇಶಕ್ಕೆ ತೆರಳುವ ಭಾರತೀಯ ಗಣ್ಯರ ಅಪಮಾನ ಪ್ರಕರಣ ಮತ್ತೆ ಮುಂದುವರೆದಿದ್ದು, ಶಾರುಖ್ "ಖಾನ್" ಪ್ರಕರಣದ ಬೆನ್ನಲ್ಲೇ ಇದೀಗ ಖ್ಯಾತ ಸರೋದ್ ವಾದಕ ಅಮ್ಜದ್ ಅಲಿಖಾನ್ ಅವರಿಗೆ ಬ್ರಿಟನ್ ಸರ್ಕಾರ ವೀಸಾ ನಿರಾಕರಿಸಿರುವ ಅಂಶ ಬೆಳಕಿಗೆ ಬಂದಿದೆ.

