Tushar Girinath

ವಿಧಾನಸಭಾ ಚುನಾವಣೆಗೆ ಬಿಬಿಎಂಪಿ ಸಿದ್ಧತೆ: ಇವಿಎಂ, ವಿವಿಪ್ಯಾಟ್ ಉಗ್ರಾಣ ಉದ್ಘಾಟನೆ ಮಾಡಿದ ಆಯುಕ್ತರು
ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ಆರಂಭಿಸಿರುವ ಬಿಬಿಎಂಪಿ, ನಗರದಲ್ಲಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್ ಗಳ ಉಗ್ರಾಣವನ್ನು ನಗರದಲ್ಲಿ ಉದ್ಘಾಟನೆ ಮಾಡಿದೆ.

ಬೆಂಗಳೂರಿನಲ್ಲಿ ಅದ್ದೂರಿ ಗಣರಾಜ್ಯೋತ್ಸವ ದಿನಾಚರಣೆಗೆ ಸಕಲ ಸಿದ್ಧತೆ: ತುಷಾರ್ ಗಿರಿನಾಥ್
ಈ ಬಾರಿ ಅದ್ದೂರಿಯಾಗಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದ್ದು, ರಾಜ್ಯಮಟ್ಟದ ಸಮಾರಂಭಕ್ಕೆ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಈ ವರ್ಷ ‘ಮಧ್ಯರಾತ್ರಿ ಬಜೆಟ್’ ಮಂಡಿಸುವುದಿಲ್ಲ: ಬಿಬಿಎಂಪಿ ಸ್ಪಷ್ಟನೆ
ಯಾವುದೇ ಕಾರಣಕ್ಕೂ ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡುವುದಿಲ್ಲ. ಹಗಲು ಹೊತ್ತಿನಲ್ಲೇ, ಸೂರ್ಯ ಕಾಣುವ ಸಮಯದಲ್ಲೇ ಬಜೆಟ್ ಮಂಡನೆ ಮಾಡುತ್ತೇವೆಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ರ‍್ಯಾಪಿಡ್ ರಸ್ತೆ ಬಿರುಕುಗಳ ಕುರಿತು ವರದಿಗಾಗಿ ಕಾಯುತ್ತಿದ್ದೇವೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ರ‍್ಯಾಪಿಡ್ ರಸ್ತೆ ಯೋಜನೆ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಐಐಎಸ್‌ಸಿಯ ತನಿಖಾ ವರದಿಗಾಗಿ ಕಾಯುತ್ತಿದ್ದೇವೆ ಎಂದು ಶುಕ್ರವಾರ ಹೇಳಿದ್ದಾರೆ.

ಫೆ.1ರೊಳಗೆ ಬಾಕಿ ಹಣ ಪಾವತಿಸದಿದ್ದರೆ, ಕಸ ಸಂಗ್ರಹ ಬಂದ್: ಬಿಬಿಎಂಪಿ ಗುತ್ತಿಗೆದಾರರ ಎಚ್ಚರಿಕೆ
2020ರಿಂದ ಬಾಕಿ ಉಳಿದಿರುವ 2,700 ಕೋಟಿ ರೂ.ಗಳನ್ನು ಫೆಬ್ರವರಿ 1ರೊಳಗೆ ಪಾವತಿಸದಿದ್ದರೆ, ಕಸ ಸಂಗ್ರಹ ಬಂದ್ ಮಾಡುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಮತದಾರರ ಪಟ್ಟಿಗೆ ತೃತೀಯಲಿಂಗಿಗಳನ್ನು ಸೇರ್ಪೆಡೆಗೊಳಿಸಿ: ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ
18 ವರ್ಷ ಮೇಲ್ಪಟ್ಟ ತೃತೀಯಲಿಂಗಿ ಹಾಗೂ ವಿಕಲಚೇತನರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಂಗಳವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆ: ಪರಿಶೀಲನೆಗೆ ಮನೆ ಮನೆಗೆ ತೆರಳಿದ ಬಿಬಿಎಂಪಿ ಆಯುಕ್ತ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಸೇರ್ಪಡೆ ರದ್ದತಿ ಮತ್ತು ಮಾರ್ಪಾಡು ಮಾಡಲಾದ ಮತದಾರರ ಪಟ್ಟಿಯನ್ನು ಸ್ವತಃ ಬಿಬಿಎಂಪಿ ಮುಖ್ಯ ಆಯುಕ್ತರೇ ಸೋಮವಾರ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೂತ್ ಮಟ್ಟದಲ್ಲಿ ಖಾಯಂ ಏಜೆಂಟ್'ಗಳ ನೇಮಿಸಿ: ರಾಜಕೀಯ ಪಕ್ಷಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಸಾಪ್ತಾಹಿಕ ಸಭೆಗಳಲ್ಲಿ ನಿರಂತರತೆ ಕಾಯ್ದುಕೊಳ್ಳಲು ಖಾಯಂ ಬೂತ್ ಏಜೆಂಟರನ್ನು ನೇಮಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

ಮೂತ್ರನಾಳದಲ್ಲಿ ಸೋಂಕು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲು
ಮೂತ್ರನಾಳದಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.

