Tumkur

ಪ್ರಧಾನಿ ಮೋದಿ ಹೋದಲ್ಲೆಲ್ಲ ಇವರು ಹೋಗುತ್ತಾರೆ, ಫೋಟೋ ತೆಗೆಯುತ್ತಾರೆ, ಇವರು ತುಮಕೂರಿನವರು!
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೇ ಹೋಗಲಿ ಅವರ ಹಿಂದೆ ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಧಾನ ಫೋಟೋಗ್ರಾಫರ್ ಮತ್ತು ವಿಡಿಯೊಗ್ರಾಫರ್ ಇರುತ್ತಾರೆ.

ತುಮಕೂರು: ಬಸ್ಸಿಗೆ ಲಾರಿ ಢಿಕ್ಕಿ, ಪಟ್ಟು ಹಿಡಿದು ಬಸ್ ನಿಲ್ಲಿಸಿದ್ದ ಪ್ರಯಾಣಿಕನಿಂದ ಅಮಾಯಕನ ಜೀವ ಬಲಿ!
:ಪ್ರಯಾಣಿಕನ ಹಠಕ್ಕೆ ಮಣಿದು ಚಾಲಕ ಬಸ್ಸನ್ನು ನಿಲ್ಲಿಸಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿಯೊಂದು ಢಿಕ್ಕಿಯಾಗಿ ಓರ್ವ ಸಾವನ್ನಪ್ಪಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ತುಮಕೂರು ಜಿಲ್ಲೆ ಶಿರಾ ಬಳಿ ನಡೆದಿದೆ.

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಆಲ್‍ಬೋರ್ಗ್ ಸ್ಮಾರ್ಟ್ ಸಿಟಿ ಡೆನ್ಮಾರ್ಕ್ ನಡುವೆ ಒಡಂಬಡಿಕೆ
ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವಲ್ಲಿ ತುಮಕೂರು ನಗರದ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಬೋನಿನಲ್ಲಿದ್ದ ಚಿರತೆಯನ್ನು ಕೆಣಕಿ ಆಸ್ಪತ್ರೆ ಸೇರಿದ!
ಕೆಲವೊಮ್ಮೆ ತಮಾಷೆ ಮಾಡಲು ಹೋಗಿ ಅನಾಹುತಗಳು ಸಂಭವಿಸುತ್ತವೆ. ಅಂಥಹದ್ದೇ ಅನಾಹುತ ತುಮಕೂರಿನಲ್ಲಿ ನಡೆದಿದ್ದು, ಬೋನಿನಲ್ಲಿದ್ದ ಚಿರತೆಯನ್ನು ಕೆಣಕಲು ಹೋಗಿ ವ್ಯಕ್ತಿಯೋರ್ವ ಆಸ್ಪತ್ರೆಗೆ ದಾಖಲಾಗಿದ್ದಾನೆ.

ತುಮಕೂರು: ಕುರಿ ಮೈ ತೊಳೆಯಲು ಕೆರೆಗೆ ಇಳಿದಿದ್ದ ಒಂದೇ ಕುಟುಂಬದ ಮೂವರು ಸಾವು
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದ ಕೆರೆಯಲ್ಲಿ ಭಾನುವಾರ ಕುರಿಗಳ ಮೈತೊಳೆಯಲು ಹೋದ ಒಂದೇ ಕುಟುಂಬದ ಮೂವರು ನೀರು ಪಾಲಾಗಿರುವ ದಾರುಣ ಘಟನೆ ನಡೆದಿದೆ.

ತುಮಕೂರು: ಅನಿಲ ಸೋರಿಕೆಯಾಗಿ ಬಾಲಕ ಸಾವು
ಮ್ಯಾಗಿ ಮಾಡಲು ಬಾಲಕನೋರ್ವ ಗ್ಯಾಸ್ ಸ್ವೌ ಹಚ್ಚಲು ಹೋಗಿ ಅನಿಲ ಸೋರಿಕೆಯಾಗಿ ಬೆಂಕಿ ತಗುಲಿ ಮೃತಪಟ್ಟಿರುವ ದುರ್ಘಟನೆ ನಗರದ ಕ್ರಿಶ್ಚಿಯನ್ ಸ್ಟ್ರೀಟ್ನಲ್ಲಿ ನಡೆದಿದೆ.

ಪರಿಹಾರ ಪಡೆಯೋಕೆ ಜನರೇ ಬರದಿದ್ದರೆ ನಾವೇನು ಮಾಡೋಣ: ಸಚಿವ ಮಾಧುಸ್ವಾಮಿ ಪ್ರಶ್ನೆ
ನೆರೆಪರಿಹಾರ ಪಡೆಯಲು ಸಂತ್ರಸ್ಥರೆ ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದು ಸಚಿವ ಮಾಧುಸ್ವಾಮಿ ಸಂತ್ರಸ್ತರ ಮೇಲೆ ಗೂಬೆ ಕೂರಿಸಿದ್ದಾರೆ.

ತುಮಕೂರು: ನಡುರಸ್ತೆಯಲ್ಲೇ ಹೊತ್ತಿ ಉರಿದ ಬಸ್, 6 ಮಂದಿಗೆ ಗಾಯ, ಇಬ್ಬರು ಗಂಭೀರ
ಖಾಸಗಿ ಬಸ್ಸೊಂದು ನಡುರಸ್ತೆಯಲ್ಲೇ ಹೊತ್ತಿ ಉರಿದ ಪರಿಣಾಮ ಆರು ಮಂದಿಗೆ ಗಾಯಗಳಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ತುಮಕೂರು ಸಮೀಪ ನಡೆದಿದೆ.

'ವಿಜ್ಞಾನ'ವನ್ನು ವಿಶಿಷ್ಟವಾಗಿ ಬೋಧಿಸುವ ಅಪರೂಪದ ಶಿಕ್ಷಕ; ಮಕ್ಕಳ ಪಾಲಿಗೆ ಪ್ರೀತಿಯ ಶಶಿ ಸರ್!
ಸರ್ಕಾರಿ ಕೆಲಸವೆಂದರೆ ಸಾಮಾನ್ಯವಾಗಿ ನಿಗದಿತ ಅವಧಿಯವರೆಗೆ ಕೆಲಸ ಮಾಡಿ ಮನೆಗೆ ಹೋಗುವವರೇ ಅಧಿಕ ಮಂದಿ. ಶಾಲಾ ಶಿಕ್ಷಕರು ಕೂಡ ಇದಕ್ಕೆ ಹೊರತಲ್ಲ.

