Tumkur

ತುಮಕೂರು ಕೋವಿಡ್ ಕೇಂದ್ರದ ಕಾರ್ಯನಿರ್ವಹಣೆಗೆ ವೈದ್ಯರು ಸೇರಿ 180 ಸಿಬ್ಬಂದಿ ನಿಯೋಜನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ ಕೋರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ಹೊಸದಾಗಿ 94 ವೈದ್ಯರುಗಳು, 86 ಇತರೆ ಸಿಬ್ಬಂದಿ ಸೇರಿ 180 ಜನರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.

ಇಂಗ್ಲೀಷ್ ಭಯದಿಂದ ತುಮಕೂರು ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ 1,457 ವಿದ್ಯಾರ್ಥಿಗಳು ಗೈರು
ಜಿಲ್ಲೆಯ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಸುಮಾರು 1,457 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ತುಮಕೂರು: ಕೊಳವೆ ಬಾವಿ ಕೊರೆಸಿದ್ದಕ್ಕೆ ದಲಿತನ ಮೇಲೆ ಮೇಲ್ಜಾತಿಯವರಿಂದ ಹಲ್ಲೆ, ಕೇಸು ದಾಖಲು
ಕೊಳವೆ ಬಾವಿ ಕೊರೆಸಿದ್ದ ಎಂದು ಸಿಟ್ಟಿನಿಂದ ದಲಿತನ ಮೇಲೆ ಮೇಲ್ವರ್ಗದ ಜಾತಿಯವರು ಹಲ್ಲೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಿಪ್ಪಾಪುರದಲ್ಲಿ ನಡೆದಿದೆ.

ತುಮಕೂರಿನಲ್ಲಿ ಕೊರೋನಾಕ್ಕೆ ಮತ್ತೊಂದು ಬಲಿ; 60 ವರ್ಷದ ಮಹಿಳೆ ಸಾವು
ತುಮಕೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ.

ತುಮಕೂರು; ಹಿಂದೂ ಕುಟುಂಬದ ನೆರವಿಗೆ ಬಂದ ಮುಸ್ಲಿಂ ಯುವಕರು; ಕಂಟೈನ್ ಮೆಂಟ್ ಪ್ರದೇಶದಲ್ಲಿ ಅಂತ್ಯಕ್ರಿಯೆಗೆ ಸಹಾಯ
ಇಲ್ಲಿನ ಕಂಟೈನ್ ಮೆಂಟ್ ವಲಯ-2ರಲ್ಲಿ ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ 60 ವರ್ಷದ ಹೆಚ್ ಎಸ್ ನಾರಾಯಣ ರಾವ್ ಹಠಾತ್ತಾಗಿ ಮೃತಪಟ್ಟರು. ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಹೊಂದಿರುವ ನಾರಾಯಣ ರಾವ್ ಕುಟುಂಬಕ್ಕೆ ಈ ಸಮಯದಲ್ಲಿ ಏನು ಮಾಡಬೇಕೆಂದೇ ದಿಕ್ಕು ತೋಚದಾಯಿತು. ಆರ್ಥಿಕವಾಗಿ ಬಡ ಕುಟುಂಬ.

ಒತ್ತಾಯಪೂರ್ವಕ ಬಾಲ್ಯವಿವಾಹ: 16 ವರ್ಷದ ಬಾಲಕಿ ಆತ್ಮಹತ್ಯೆ
ತನ್ನನ್ನು ಒತ್ತಾಯಪೂರ್ವಕವಾಗಿ ಬಾಲ್ಯವಿವಾಹಕ್ಕೆ ಗುರಿಪಡಿಸಿದ್ದರಿಂದ ಬೇಸತ್ತು 16 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೋವಿಡ್-19 ಮಧ್ಯೆ ಸೋಂಕು ನಿವಾರಕ ಸುರಂಗಗಳಿಗೆ ಹೆಚ್ಚಿದ ಬೇಡಿಕೆ
ಕೋವಿಡ್-19 ನಿಂದ ಬಹುತೇಕ ಉದ್ಯಮಗಳಿಗೆ ತೊಂದರೆಯಾದರೆ ಸೋಂಕು ನಿವಾರಕ ಸುರಂಗಗಳನ್ನು ಮಾಡುತ್ತಿರುವ ಘಟಕಗಳಿಗೆ ಅವಕಾಶಗಳ ಬಾಗಿಲು ತೆರೆದಿವೆ. ಇಂತಹ ಸೋಂಕು ನಿವಾರಕ ಸುರಂಗಗಳನ್ನು ದೇಶದ ಹಲವು ಕಡೆಗಳಲ್ಲಿ ಈಗಾಗಲೇ ತೆರೆಯಲಾಗಿದೆ.

ತುಮಕೂರು: ಗೋಕಟ್ಟೆಗೆ ಬಿದ್ದು ತಾಯಿ ಮಕ್ಕಳು ಸಾವು
ಇಬ್ಬರು ಮಕ್ಕಳೊಂದಿಗೆ ಗೋಕಟ್ಟೆಗೆ ಬಿದ್ದು ತಾಯಿಯೂ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಲ್ಲೂರು ಹಟ್ಟಿ ಬಳಿ ನಡೆದಿದೆ.

ಮೃತ ವೃದ್ಧನ 13 ವರ್ಷದ ಮಗನಲ್ಲಿ ಸೋಂಕು ದೃಢ: ಜಿಲ್ಲಾಧಿಕಾರಿ ರಾಕೇಶ್ ಕುಮಾರ್
ಇತ್ತೀಚೆಗಷ್ಟೇ ಕೊರೋನಾ ವೈರಸ್ ಸೋಂಕು ತಗುಲಿ ಮೃತಪಟ್ಟಿದ್ದ ಶಿರಾ ಪಟ್ಟಣದ ವೃದ್ಧನ 13 ವರ್ಷದ ಮಗನಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

