Tumkur

ತುಮಕೂರಿನಲ್ಲಿ ಲಾರಿ-ಬೈಕ್ ಮುಖಾಮುಖಿ ಡಿಕ್ಕಿ: ಮಹಿಳೆ ಸೇರಿ ಇಬ್ಬರು ಸಾವು
ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕು ಸಾಗರನಹಳ್ಳಿ ಗೇಟ್ ಸಮೀಪ ನಡೆದಿದೆ.

ಸಿರಾ ಬಳಿ ರಸ್ತೆ ಅಪಘಾತ: ಮೂವರು ಸಾವು
ಸಿರಾ ತಾಲ್ಲೂಕಿನ ಗಾಂಧಿನಗರ ಕ್ರಾಸ್‌ನಲ್ಲಿ ಟ್ರಕ್ ವೊಂದು ನಿಂತಿದ್ದ ಮತ್ತೊಂದು ಟ್ರಕ್ ಗೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

28 ಗ್ರಾಮಗಳಿಗೆ ಇದು ಕೊನೆಯ ಪಂಚಾಯಿತಿ ಚುನಾವಣೆ: ಕಾರಣ ಎತ್ತಿನಹೊಳೆ ಯೋಜನೆ!
ರಾಜ್ಯದ 28 ಗ್ರಾಮ ಪಂಚಾಯತಿಗಳು ಎಂದಿಗೂ ಇನ್ನು ಮುಂದೆ ಚುನಾವಣೆ ಎದುರಿಸುವುದಿಲ್ಲ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ 28 ಗ್ರಾಮಗಳು ಮುಂದಿನ 5 ವರ್ಷಗಳಲ್ಲಿ ಕಣ್ಮರೆಯಾಗಲಿವೆ.

ತುಮಕೂರು: ಗ್ರಾಮ ಪಂಚಾಯತ್ ಸೀಟುಗಳ ಹರಾಜು, ಮೂವರ ಬಂಧನ, 9 ಕೇಸು ದಾಖಲು
ಗ್ರಾಮ ಪಂಚಾಯತ್ ಸೀಟುಗಳು ಹರಾಜು ಆಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿರುವ ಪೊಲೀಸರು ತುರುವೇಕೆರೆಯಲ್ಲಿ ಮೂವರನ್ನು ಬಂಧಿಸಿ ಕುಣಿಗಲ್, ಚೆಲ್ಲೂರು, ನೊಣವಿನಕೆರೆ ಮತ್ತು ತುರುವೇಕೆರೆ ಪೊಲೀಸ್ ಠಾಣೆಗಳಲ್ಲಿ 9 ಕೇಸುಗಳನ್ನು ದಾಖಲಿಸಿದ್ದಾರೆ.

ರೈಲಿಗೆ ತಲೆಕೊಟ್ಟು ಪೊಲೀಸ್ ಪೇದೆ ಆತ್ಮಹತ್ಯೆ
ರೈಲಿಗೆ ತಲೆಕೊಟ್ಟು ಪೇದೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕುಣಿಗಲ್ ರೈಲ್ವೆ ನಿಲ್ದಾಣ ಬಳಿ ಶನಿವಾರ ಬೆಳಿಗ್ಗೆ ವರದಿಯಾಗಿದೆ.

ತುಮಕೂರು: ಹೋಂಡಾ ಶೋ ರೂಮ್'ನಲ್ಲಿ ಅಗ್ನಿ ಅವಘಡ, ಲಕ್ಷಾಂತರ ಮೌಲ್ಯದ ಬೈಕ್'ಗಳು ಬೆಂಕಿಗಾಹುತಿ
ಹೋಂಡಾ ಶೋರೂಮ್'ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ ಬೈಕ್'ಗಳು ಬೆಂಕಿಗಾಹುತಿಯಾಗಿರುವ ಘಟನೆ ತುಮಕೂರಿನ ಬಿಹೆಚ್ ರಸ್ತೆಯಲ್ಲಿ ನಡೆದಿದೆ.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕ್ರಮ: ತುಮಕೂರಿನಲ್ಲಿ ಅಭಿಯಾನ ಆರಂಭಕ್ಕೆ ಮಕ್ಕಳ ಹಕ್ಕುಗಳ ಆಯೋಗ ಮುಂದು
ಮಕ್ಕಳ ಹಕ್ಕುಗಳ ರಾಜ್ಯ ರಕ್ಷಣಾ ಆಯೋಗ(ಕೆಎಸ್ ಸಿಪಿಸಿಆರ್) ಹಲವು ಸರ್ಕಾರಿ ಸಂಘಟನೆಗಳು ಮತ್ತು ಸಂಸ್ಥೆಗಳ ಜೊತೆ ಸೇರಿಕೊಂಡು ರಾಜ್ಯವನ್ನು ಬಾಲ ಕಾರ್ಮಿಕ ಮುಕ್ತಗೊಳಿಸಲು ನವೆಂಬರ್ ನಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತುಮಕೂರು ಜಿಲ್ಲೆಯಿಂದ ಈ ಕಾರ್ಯಕ್ರಮ ಆರಂಭವಾಗಲಿದೆ.

ಸಿ.ಟಿ.ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ, ಪಕ್ಷದ ನಿಯಮದಂತೆ ನಡೆದುಕೊಳ್ತಾರೆ: ನಳಿನ್ ಕುಮಾರ್ ಕಟೀಲ್
ನಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದೇ ಸ್ಥಾನ ನಿಯಮವಿರುವುದರಿಂದ ಸಿ.ಟಿ ರವಿ ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಸಿರಾ ಕ್ಷೇತ್ರದ ಶಾಸಕ ನಿಧನ: ಉಪ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಮೂರೂ ಪಕ್ಷಗಳು
ತುಮಕೂರಿನ ಸಿರಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ ನಿಧನ ನಂತರ ಖಾಲಿಯಾಗಿರುವ ಶಾಸಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಈಗಾಗಲೇ ಮೂರೂ ಪಕ್ಷಗಳು ಸಿದ್ದತೆ ಮಾಡಿಕೊಳ್ಳುತ್ತಿವೆ.

