Tumakuru

ತುಮಕೂರು ಜನತೆಗೆ ಸದ್ಯಕ್ಕೆ ರಿಲೀಫ್: ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ನೆಗೆಟಿವ್
ತುಮಕೂರಿನಲ್ಲಿ ಕರೋನಾ ಸೋಂಕಿನಿಂದ ಇತ್ತೀಚೆಗೆ ಸಾವನ್ನಪ್ಪಿದ ವೃದ್ಧನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಕರೋನಾ ಟೆಸ್ಟ್ ನಲ್ಲಿ ನೆಗೆಟಿವ್ ಕಂಡು ಬಂದಿದೆ ಎಂದು ಬೆಂಗಳೂರಿನ ಐಸಿಎಂಆರ್ ಎನ್ ಐವಿ ಯಲಿಲು ನಡೆದ ಪರೀಕ್ಷೆಯಿಂದ ದೃಢಪಟ್ಟಿದೆ.

ತುಮಕೂರು: ಹಾಲಿಗಾಗಿ ಮುಗಿಲು ಮುಟ್ಟಿದ ಕೋವಿಡ್-19 ವೃದ್ಧನ ಮೊಮ್ಮಕ್ಕಳ ರೋಧನ!
ಶಿರಾದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವೃದ್ಧನ ರಕ್ತಸಂಬಂಧಿಕರು ಸಾಮಾಜಿಕ ತಾತ್ಸಾರಕ್ಕೊಳಗಾಗಿರುವುದಲ್ಲದೇ, ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿರುವ ಆಸ್ಪತ್ರೆಯಲ್ಲಿಯೂ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ.

ಕೊರೋನಾ ಭೀತಿ, ಜನತಾ ಕರ್ಫ್ಯೂ ನಡುವಲ್ಲೂ ಹಸೆಮಣೆ ಏರಿದ ಜೋಡಿಗಳು
ಕೊರೋನಾ ವೈರಸ್ ಭೀತಿ, ಜನತಾ ಕರ್ಫ್ಯೂ ನಡುವಲ್ಲೂ ತುಮಕೂರಿನ ಜೋಡಿಗಳು ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದೆ.

ತುಮಕೂರು: ಎರಡೂವರೆ ವರ್ಷದ ಮಗುವನ್ನು ಕೊಂದಿದ್ದ ಚಿರತೆ ಸೆರೆ
ತುಮಕೂರು ತಾಲೂಕಿ ಹೆಬ್ಬರೂ ಹೋಬಳಿಯ ಬೈಚೇನಳ್ಳಿಯ ತೋಟದ ಮನೆಯ ಎರಡೂವರೆ ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ಹಾಕಿದ್ದ ನರಭಕ್ಷಕ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.

ತುಮಕೂರು: ಗೃಹಿಣಿ ಆತ್ಮಹತ್ಯೆ ಗೆ ಶರಣು
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣಾದ ಘಟನೆ ನಗರದ ಉಪ್ಪಾರಹಳ್ಳಿಯಲ್ಲಿ ನಡೆದಿದೆ.23 ವರ್ಷದ ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಗುಬ್ಬಿ ಮೂಲದವರಾದ ಕಾವ್ಯ, ಕಳೆದ ನಾಲ್ಕು ವರ್ಷಗಳ ಹಿಂದೆ ಅಂಜನ್ ಎಂಬುವರೊಂದಿಗೆ ವಿವಾಹವಾಗಿದ್ದರು.

ಮಾಜಿ ಸಚಿವ ಸಿ.ಚನ್ನಿಗಪ್ಪ ನಿಧನ: ಕುಮಾರಸ್ವಾಮಿ ಸೇರಿದಂತೆ ಗಣ್ಯರ ಸಂತಾಪ
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಸಿ.ಚನ್ನಿಗಪ್ಪ ಶುಕ್ರವಾರ ನಿಧನರಾಗಿದ್ದಾರೆ.

ಕೋಮು ಪ್ರಚೋದನೆ ಆರೋಪ: ಮಧುಗಿರಿ ಮೋದಿ ವಿರುದ್ಧ ಪ್ರಕರಣ ದಾಖಲು
ಮತ್ತೊಂದು ಸಮುದಾಯವನ್ನು ಪ್ರಚೋದಿಸುವ ವಿಡಿಯೋಗಳನ್ನು ಹರಿಯಬಿಟ್ಟಿದ್ದ ಆರೋಪದ ಮೇರೆಗೆ ತನ್ನನ್ನು ತಾನು ಮಧುಗಿರಿ ಮೋದಿ ಎಂದು ಕರೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬರ ವಿರುದ್ಧ ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತ್ಯೇಕ ಅಪಘಾತ, ಐವರು ದುರ್ಮರಣ
ರಾಜ್ಯದ ಬೇರೆ ಬೇರೆ ಕಡೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ವಿಜಯಪುರ ಹಾಗೂ ತುಮಕೂರುಗಳಲ್ಲಿ ಈ ಅವಘಡ ಸಮ್ಬವಿಸಿದೆ.

ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಕ್ಕೆ 7.5 ಲಕ್ಷ ಪರಿಹಾರ
ಚಿರತೆ ದಾಳಿಗೆ ತುತ್ತಾಗಿ ಮೃತಪಟ್ಟ ಐದು ವರ್ಷದ ಬಾಲಕನ ಕುಟುಂಬಕ್ಕೆ ರಾಜ್ಯ ಸರ್ಕಾರ 7.5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ

