Tumakuru

ಪೊಲೀಸರಿಂದಲೇ ಲಾಕ್ ಡೌನ್ ನಿಯಮ ಉಲ್ಲಂಘನೆ: ಬಡ್ತಿ ಸಿಕ್ಕಿದ್ದಕ್ಕೆ ಅದ್ಧೂರಿ ಸನ್ಮಾನ ಕಾರ್ಯಕ್ರಮ; ಸಾರ್ವಜನಿಕರ ಟೀಕೆ
ಇಬ್ಬರು ಪೊಲೀಸರಿಗೆ ಬಡ್ತಿ ಸಿಕ್ಕಿದ್ದಕ್ಕೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಅದ್ದೂರಿ ಸನ್ಮಾನ ಕಾರ್ಯಕ್ರಮ ನಡೆದಿದೆ.

ತುಮಕೂರು:ಕೋವಿಡ್-19ನಿಂದ ಸೂರತ್ ಮೌಲ್ವಿ ಗುಣಮುಖ,ಬೆಂಗಳೂರು ವ್ಯಕ್ತಿಗೆ ಪಾಸಿಟಿವ್
ಸೂರತ್ ನಿಂದ ಬಂದಿದ್ದ 37 ವರ್ಷದ ಮೌಲ್ವಿಯೊಬ್ಬರು ಚೇತರಿಸಿಕೊಳ್ಳುವ ಮೂಲಕ ತುಮಕೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರೋಗಿಯೊಬ್ಬರು ಗುಣಮುಖರಾದಂತಾಗಿದೆ.

ಒಂದು ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಕೇಂದ್ರದಿಂದ ಒಪ್ಪಿಗೆ: ಸಚಿವ ಗೋಪಾಲಯ್ಯ
ಕೊರೋನಾದಿಂದ ದೇಶ ಸಂಕಷ್ಟದಲ್ಲಿದ್ದು, ರೈತರು ಬೆಳೆದರೆ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ ಎನ್ನುವುದನ್ನು ಅರಿತು ಕೃಷಿ ವಲಯಕ್ಕೆ ಲಾಕ್ ಡೌನ್ ನಡುವೆಯೂ ಸಡಿಲಿಕೆಯನ್ನು ನೀಡಲಾಗಿತ್ತು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಯ್ಯ ತಿಳಿಸಿದರು.

ತುಮಕೂರು: ವಾರದಲ್ಲಿ ಕೊರೋನಾಗೆ ಒಂದು ಬಲಿ, ಮೂವರಿಗೆ ಸೋಂಕು!
ಕಳೆದ ಒಂದು ವಾರದಲ್ಲಿ ತುಮಕೂರಿನಲ್ಲಿ ಮೂರು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಗುರುವಾರ 5ನೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಆಘಾತ ಮೂಡಿಸಿದೆ.

ತುಮಕೂರು ಜಿಲ್ಲಾಡಳಿತದ ಮಹಾ ಎಡವಟ್ಟು: ಮುಂಜಾಗ್ರತಾ ಕ್ರಮವಿಲ್ಲದೇ ಸೋಂಕಿತನ ಶವಸಂಸ್ಕಾರ
ತುಮಕೂರಿನಲ್ಲಿ ಕೊರೊನಾಗೆ ಎರಡನೇ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹಾ ಎಡವಟ್ಟು ಮಾಡಿದ್ದು, ಸ್ಯಾಂಪಲ್ಸ್ ವರದಿ ಬರುವ ಮುನ್ನವೇ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದೆ.

ತುಮಕೂರು: ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ದಂಡ, ತುಮಕೂರಿನಲ್ಲಿ ಇಂದು ಸಂಗ್ರಹವಾದ ಮೊತ್ತ ಎಷ್ಟು ಗೊತ್ತಾ?
ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಸೋಂಕು ಪ್ರಸರಣ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದ್ದು, ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ದಂಡ ಹಾಕಲಾಗಿದೆ.

ತುಮಕೂರು: ಗುಜರಾತಿನಿಂದ ಬಂದಿದ್ದ ಮೌಲ್ವಿಗೆ ಕೋವಿಡ್-19 ಸೋಂಕು ದೃಢ
:ಗುಜರಾತ್ ರಾಜ್ಯದ ಸೂರತ್ ನಿಂದ ಬಂದಿದ್ದ 37 ವರ್ಷದ ಮೌಲ್ವಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.ಇವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 13 ಮಂದಿಯನ್ನು ಪತ್ತೆ ಹಚ್ಚಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಯನ್ನು ಕ್ವಾರೆಂಟೈನ್ ನಲ್ಲಿಡಲಾಗಿದೆ.

ಬಂಗಾಳದ ವ್ಯಕ್ತಿಗೆ ತುಮಕೂರಿನಲ್ಲಿ ಸ್ಥಳೀಯರಿಂದ ಅಂತ್ಯಸಂಸ್ಕಾರ, ವಿಡಿಯೋ ಕರೆ ಮೂಲಕ ರಕ್ತ ಸಂಬಂಧಿಗಳ ವೀಕ್ಷಣೆ!
ಕೊರೋನಾ ಮಹಾಮಾರಿ ಹರಡದಂತೆ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದ್ದು ರಕ್ತ ಸಂಬಂಧಿಕರೂ ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಸಂಸ್ಕಾರವನ್ನು ವೀಕ್ಷಿಸಿದರು.

ತುಮಕೂರು: ಲಾಭಕ್ಕೆ ಲಾಕ್ ಡೌನ್ ಬಳಕೆ, ದುಬಾರಿ ಬೆಲೆಗೆ ಮಟನ್ ಮಾರುತ್ತಿದ್ದ ಅಂಗಡಿ ಸೀಜ್
ಲಾಕ್ ಡೌನ್ ಪರಿಸ್ಥಿತಿಯ ಲಾಭ ಪಡೆದು ದುಬಾರಿಬೆಲೆಗೆ ಮಟನ್ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ತುಮಕೂರು ಕಾರ್ಪೋರೇಷನ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

