Tumakuru

ತುಮಕೂರು: ಆಟವಾಡುವಾಗ ನೀರಿನ ಸಂಪಿಗೆ ಬಿದ್ದು ಬಾಲಕ ಸಾವು
ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನೊಬ್ಬ ನೀರಿನ ಸಂಪಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ತಿಪಟೂರು ತಾಲೂಕಿನ ಅಯ್ಯನಬಾವಿ ಎಂಬಲ್ಲಿ ನಡೆದಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಪೂರ್ಣ ಅಂಕ ಪಡೆದ ಗುಜರಾತಿ ಬಾಲಕ!
ಗುಜರಾತ್ ನಲ್ಲಿ ಹುಟ್ಟಿದ ಬಾಲಕನೊಬ್ಬ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ತೆಗೆದುಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದು ಸಾಧನೆ ಮೆರಿದಿದ್ದಾನೆ.

ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸೀಲ್ ಡೌನ್ : ಆಡಳಿತ ಮಂಡಳಿ ನಿರ್ಲಕ್ಷ್ಯ ವಿರುದ್ಧ ಭಕ್ತರ ಆಕ್ರೋಶ
ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸೀಲ್ ಡೌನ್ ಆಗಿದೆ. ಮಹಾಲಕ್ಷ್ಮಿ ದೇವಾಲಯ ಹಿಂಭಾಗದ ಮಾರಮ್ಮನ ದೇವಾಲಯದ ಅರ್ಚಕನ ಮಡದಿಗೆ ಕೊರೋನಾ ದೃಡಪಟ್ಟ ಹಿನ್ನಲೆ ದೇವಾಲಯವನ್ನು ಜುಲೈ 20ರಿಂದಲೇ ಸೀಲ್ ಡೌನ್ ಮಾಡಲಾಗಿದೆ.

ವರುಣದೇವನ ಕೃಪೆ: ರಾತ್ರೋ ರಾತ್ರಿ ಸುರಿದ ಭಾರೀ ಮಳೆಯಿಂದ ತುಂಬಿತು ರೈತನ ಕೆರೆ!
ಭಾನುವಾರ ರಾತ್ರಿ ಮಧುಗಿರಿ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಮಾವಿನ ಕೃಷಿಕ ಅಂಜಿನಪ್ಪ ಅವರ ಭವಿಷ್ಯವೇ ಬದಲಾಯಿತು.

ದಿನಕ್ಕೆ 95 ರಿಂದ 18ಕ್ಕೆ ಇಳಿದ ಸೋಂಕಿತರ ಸಂಖ್ಯೆ: ಒಂದೇ ವಾರದಿಂದ ತುಮಕೂರಿನಲ್ಲಿ ನಿಯಂತ್ರಣಕ್ಕೆ ಬರುತ್ತಿದೆಯೇ ಕೊರೋನಾ?
ಕೊರೋನಾ ಸೋಂಕಿನಿಂದ ತೀವ್ರ ಆತಂಕಕ್ಕೊಳಗಾಗಿದ್ದ ತುಮಕೂರು ಜನತೆಗೆ ಶುಕ್ರವಾರ ಆರೋಗ್ಯ ಇಲಾಖೆ ನೀಡಿದ ಕೊರೋನಾ ಕುರಿತ ವರದಿಗಳು ತುಸು ನೆಮ್ಮದಿಯನ್ನು ನೀಡಿದೆ.

ಲಾಕ್ ಆಗಿದ್ದ ಕೊರೋನಾ ರೋಗಿಯ ಮನೆಯಲ್ಲಿ ಕಳ್ಳರ ದರ್ಬಾರ್, ನಗ-ನಾಣ್ಯ ಲೂಟಿ
ಕೊರೋನಾ ಸೋಂಕಿತೆಯ ಲಾಕ್ ಆಗಿದ್ದ ಮನೆ ಮೇಲೆ ದಾಳಿ ಮಾಡಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗ-ನಾಣ್ಯ ಲೂಟಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತ್ರಿಸ್ಟಾರ್ ಹೋಟೆಲ್ ಅನ್ನು ಕೊರೋನಾ ವಾರಿಯರ್ಸ್ ಗೆ ಉಚಿತವಾಗಿ ನೀಡಿ ಮಾನವೀಯತೆ ಮೆರೆದ ಸೊಗಡು ಶಿವಣ್ಣ
ರಾಜ್ಯಾದ್ಯಂತ ಮುಂದುವರಿಯುತ್ತಿರುವ ಕೊರೋನಾ ಅಟ್ಟಹಾಸದಿಂದ ಜನರು ತತ್ತರಿಸುತ್ತಿದ್ದಾರೆ, ಇದೇ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ತುಮಕೂರು: 4 ವರ್ಷದ ಮಗು ಕೊಂದ ಚಿರತೆ; ಆರೇ ತಿಂಗಳಲ್ಲಿ ಮೂರನೇ ಘಟನೆ
ತುಮಕೂರಿನಲ್ಲಿ ಹುಳಿ ದಾಳಿ ಪ್ರಕರಣ ಮುಂದುವರೆದಿದ್ದು, ಇಂದು ನಾಲ್ಕು ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿರುವ ಘಟನೆ ವರದಿಯಾಗಿದೆ.

ಎಕ್ಸಾಮ್ ಹಾಲ್ ನಿಂದ ಕೋವಿಡ್ ಕೇರ್ ಸೆಂಟರ್ ಗೆ: ತುಮಕೂರು ಶಿಕ್ಷಕನ ಕರುಣಾಜನಕ ಕಥೆ!
ಎಸ್ ಎಸ್ ಎಲ್ ಸಿ ಪರೀಕ್ಷೆ ಮೇಲ್ವಿಚಾರಕನಾಗಿ ಹಾಜರಾಗಿದ್ದ 35 ವರ್ಷದ ಶಿಕ್ಷಕರೊಬ್ಬರು ಕೊರೋನಾ ಕಾರಣದಿಂದಾಗಿ ಪರೀಕ್ಷಾ ಹಾಲ್ ನಿಂದ ನೇರವಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿದ್ದಾರೆ.

