ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸೀಲ್ ಡೌನ್ : ಆಡಳಿತ ಮಂಡಳಿ ನಿರ್ಲಕ್ಷ್ಯ ವಿರುದ್ಧ ಭಕ್ತರ ಆಕ್ರೋಶ
ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸೀಲ್ ಡೌನ್ ಆಗಿದೆ. ಮಹಾಲಕ್ಷ್ಮಿ ದೇವಾಲಯ ಹಿಂಭಾಗದ ಮಾರಮ್ಮನ ದೇವಾಲಯದ ಅರ್ಚಕನ ಮಡದಿಗೆ ಕೊರೋನಾ ದೃಡಪಟ್ಟ ಹಿನ್ನಲೆ ದೇವಾಲಯವನ್ನು ಜುಲೈ 20ರಿಂದಲೇ ಸೀಲ್ ಡೌನ್ ಮಾಡಲಾಗಿದೆ.

ತುಮಕೂರು: ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯ ಸೀಲ್ ಡೌನ್ ಆಗಿದೆ. ಮಹಾಲಕ್ಷ್ಮಿ ದೇವಾಲಯ ಹಿಂಭಾಗದ ಮಾರಮ್ಮನ ದೇವಾಲಯದ ಅರ್ಚಕನ ಮಡದಿಗೆ ಕೊರೋನಾ ದೃಡಪಟ್ಟ ಹಿನ್ನಲೆ ದೇವಾಲಯವನ್ನು ಜುಲೈ 20ರಿಂದಲೇ ಸೀಲ್ ಡೌನ್ ಮಾಡಲಾಗಿದೆ.ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಆಡಳಿತ ಮಂಡಳಿ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದೆ.
ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿನಿತ್ಯ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಸಿಗದೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊರೋನಾ ರೋಗದಿಂದ ಅರ್ಚಕನ ಮಡದಿ ಗುಣಮುಖವಾಗಿ ಮನೆಗೆ ಬಂದರೂ ಪ್ರಥಮ ಸಂಪರ್ಕದ ಕುಟುಂಬಸ್ಥರ ಪರೀಕ್ಷಾ
ವರದಿ ಬರದೇ ಸಮಸ್ಯೆ ಸೃಷ್ಟಿಯಾಗಿದೆ. ಸಿಲ್ ಡೌನ್ ಮಾಹಿತಿ ಇಲ್ಲದೇ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರ ಆಗಮಿಸುತ್ತಿದ್ದು,
ಭಕ್ತರ ಸಮಸ್ಯೆ ಕೇಳುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಸೀಲ್ ಡೌನ್ ಮಾಡಿ 7ದಿನ ಕಳೆದರೂ ಸಾರ್ವಜನಿಕರಿಗೆ ಮಾಹಿತಿ ನೀಡದೇ ಆಡಳಿತ ಮಂಡಳಿಯಿಂದ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಾಲಕ್ಷ್ಮೀ ದರ್ಶನ ಇರುತ್ತಾ ಅಥವಾ ಇರಲ್ವಾ ಎಂಬುದೇ ಇನ್ನೂ ಪ್ರಶ್ನೆಯಾಗಿದೆ. ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು ಭಕ್ತರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


