Tumakuru

ಸಾವಿರಾರು ಜನರಿಗೆ ವರದಾನವಾದ ಇ-ಗ್ರಂಥಾಲಯ: ಇತರೆ ನಗರಗಳ ಗಮನ ಸೆಳೆಯುತ್ತಿರುವ ತುಮಕೂರಿನ 'ಡಿಜಿಟಲ್ ಲೈಬ್ರರಿ'
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗ ತೋರಿದ್ದ ತುಮಕೂರಿನ ಇ-ಗ್ರಂಥಾಲಯ ಇದೀಗ ಹಲವು ನಗರಗಳ ಗಮನವನ್ನು ಸೆಳೆಯುತ್ತಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಗೆ ಸಚಿವ ಸುರೇಶ್ ಕುಮಾರ್ ಸಹಾಯದ ಭರವಸೆ
ಜುಲೈ 19 ಮತ್ತು ಜುಲೈ 22 ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗದಿರುವ ಬಗ್ಗೆ ಚಿಂತೆಗೀಡಾದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳು ಕಳೆದ ರಾತ್ರಿ ಕೊರಟಗೆರೆಯ ಹನುಮಂತಪುರದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾಳೆಂದು ವರದಿಯಾಗಿದೆ.

ತುಮಕೂರು ದೇವಾಲಯದ ಬಳಿ ಮಹಿಳೆಯ ಶವ ಪತ್ತೆ: ನಿಧಿಗಾಗಿ ಬಲಿ ಶಂಕೆ, ತನಿಖೆ ಚುರುಕುಗೊಳಿಸಿದ ಪೊಲೀಸರು
ತುಮಕೂರಿನ ಎಂ.ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಆಂಜನೇಯ ಸ್ವಾಮಿ ದೇವಾಲಯದ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ನಿಧಿಗಾಗಿ ಬಲಿ ಕೊಟ್ಟಿರಬಹುದು ಎಂಬ ಶಂಕೆಗಳು ವ್ಯಕ್ತವಾಗತೊಡಗಿವೆ.

ವಾರದಲ್ಲಿ 48 ಮಂದಿಗೆ ಕೊರೋನಾ ಸೋಂಕು: ತುಮಕೂರಿನ ಸಿಂಗಾಪುರ ಗ್ರಾಮ ಸಂಪೂರ್ಣ ಸೀಲ್‌ಡೌನ್
ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ಸರ್ಕಾರ ಹಂತ ಹಂತವಾಗಿ ಅನ್ಲಾಕ್ ಮಾಡುತ್ತಿದ್ದರೆ, ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ತುಮಕೂರು: ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವು
ಆಕಸ್ಮಿಕವಾಗಿ ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಕೋರ ಹೋಬಳಿಯ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪಾಳ್ಯದಲ್ಲಿ ಗುರುವಾರ ಜರುಗಿದೆ.

ಕೋಲಾರಕ್ಕೆ ನಿಗದಿ ಮಾಡಿದ್ದ ಆಕ್ಸಿಜನ್ ಘಟಕ ಅಂತಿಮ ಕ್ಷಣದಲ್ಲಿ ತುಮಕೂರಿಗೆ ಶಿಫ್ಟ್!
ಕೆಜಿಎಫ್ ಜನರಲ್ ಆಸ್ಪತ್ರೆಯಲ್ಲಿ ಸ್ಥಾಪಿಸಬೇಕಾಗಿದ್ದ ಆಮ್ಲಜನಕ ಸ್ಥಾವರ ಕೊನೆ ಕ್ಷಣದಲ್ಲಿ ತುಮಕೂರಿಗೆ ಸ್ಥಳಾಂತರವಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸೋತರೆ ಅನರ್ಹರ ಸೌಲಭ್ಯಕ್ಕೆ ಕತ್ತರಿ ಹಾಕುವುದಾಗಿ ಬೆದರಿಸಿದ ಗಂಗಮ್ಮಗೆ ಹೀನಾಯ ಸೋಲು
ಗೆದ್ದರೆ ಏನು ಮಾಡುತ್ತೇನೆ, ಸೋತರೆ ಏನು ಮಾಡುತ್ತೇನೆ ಎಂಬುದನ್ನು ಚುನಾವಣಾ ಪ್ರಚಾರ ಕರಪತ್ರದಲ್ಲಿ ತಿಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದ ಅಭ್ಯರ್ಥಿ ಗಂಗಮ್ಮ ಎಚ್. ಹೀನಾಯವಾಗಿ ಸೋತಿದ್ದಾರೆ.

ತುಮಕೂರು: ಮದ್ಯ ಸೇವಿಸಿದ ಮೂವರು ಪೊಲೀಸರ ಅಮಾನತು
ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸಿದ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ತುಮಕೂರು: ಸತತ ಎರಡನೇ ಬಾರಿ ಗೆಲುವಿನ ವಿಶ್ವಾಸದಲ್ಲಿ ತೃತೀಯಲಿಂಗಿ ಅಭ್ಯರ್ಥಿ
37 ವರ್ಷದ ಫಾಜ್ಲೂನ್ ಗುಬ್ಬಿ ತಾಲೂಕಿನ ಕುನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಚಾಕೇನಹಳ್ಳಿಯಿಂದ ಸ್ಪರ್ಧಿಸಿದ್ದು ಡಿಸೆಂಬರ್ 22ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

