ತುಮಕೂರು: ಸತತ ಎರಡನೇ ಬಾರಿ ಗೆಲುವಿನ ವಿಶ್ವಾಸದಲ್ಲಿ ತೃತೀಯಲಿಂಗಿ ಅಭ್ಯರ್ಥಿ
37 ವರ್ಷದ ಫಾಜ್ಲೂನ್ ಗುಬ್ಬಿ ತಾಲೂಕಿನ ಕುನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಚಾಕೇನಹಳ್ಳಿಯಿಂದ ಸ್ಪರ್ಧಿಸಿದ್ದು ಡಿಸೆಂಬರ್ 22ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ತುಮಕೂರು: ಸತತ ಎರಡನೇ ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲಲು ತೃತೀಯ ಲಿಂಗಿ ಮತ್ತವರ ಕುಟುಂಬ ಪರಿಶ್ರಮ ಪಡುತ್ತಿದೆ.
37 ವರ್ಷದ ಫಾಜ್ಲೂನ್ ಗುಬ್ಬಿ ತಾಲೂಕಿನ ಕುನ್ನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಚಾಕೇನಹಳ್ಳಿಯಿಂದ ಸ್ಪರ್ಧಿಸಿದ್ದು ಡಿಸೆಂಬರ್ 22ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಕಳೆದ ಬಾರಿ 247 ಮತ ಪಡೆದಿದ್ದ ಪಾಜ್ಲೂನ್ 47 ಮತಗಳ ಅಂತರದಿಂದ ತನ್ನ ಇಬ್ಬರು ವಿರೋಧಿಗಳ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ನೇರ ಹಣಾಹಣಿ ಏರ್ಪಟ್ಟಿದೆ.
ತಾನು ಎರಡು ದಶಕಗಳಿಂದ ತನ್ನ ಹಳ್ಳಿಯ ಜನರಿಗೆ ಸೇವೆ ಸಲ್ಲಿಸಿದ್ದೇನೆ ಮತ್ತು ಕಳೆದ ಐದು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದ್ದೇನೆ ಎಂದು ಫಜ್ಲೂನ್ ಹೇಳಿಕೊಂಡಿದ್ದಾರೆ, "ನಿವಾಸಿಗಳಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಮತ್ತು ಆದ್ದರಿಂದ ಎರಡನೇ ಬಾರಿಗೆ ನನ್ನ ಗೆಲುವು ಖಚಿತವಾಗಿದೆ" ಎಂದು ಅವರು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.ನಮ್ಮ ಪೋಷಕರನ್ನು ಹಾಗೂ ನನ್ನನ್ನು ಹಳ್ಳಿಯ ಜನತೆ ಯಾವತ್ತೂ ತಾರತಮ್ಯದಿಂದ ನೋಡಿಲ್ಲ ಎಂದು ಫಾಜ್ಲೂನ್ ತಿಳಿಸಿದ್ದಾರೆ.
ಫಾಜ್ಲೂನ್ ಜೊತೆ ಆಕೆಯ ತೃತೀಯ ಲಿಂಗಿ ಸಹೋದರ ಸೇರಿದಂತೆ ಒಟ್ಟು 14 ಮಂದಿ ಕುಟುಂಬದ ಸದಸ್ಯರು ಆಕೆಗೆ ಬೆಂಬಲವಾಗಿ ನಿಂತಿದ್ದಾರೆ. ತುಮಕೂರಿನ ತರಕಾರಿ ಮಾರುಕಟ್ಟೆಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದೇನೆ, ನನ್ನ ಸಹೋದರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ, ಹೀಗಾಗಿ ನನ್ನೆಲ್ಲಾ ಸಮಯವನ್ನು ಆಕೆಯ ಚುನಾವಣಾ ಪ್ರಚಾರಕ್ಕಾಗಿ ಮೀಸಲಿಟ್ಟಿದ್ದೇನೆ ಎಂದು ಆಕೆಯ ಸಹೋದರ ಮೊಯಿನುದ್ದೀನ್ ಹೇಳಿದ್ದಾರೆ.
ತೃತೀಯ ಲಿಂಗಿ ಸಮುದಾಯವು ಭಿಕ್ಷೆ ಬೇಡುವ ಬದಲು ಉದ್ಯೋಗ ಮಾಡಿಕೊಂಡು ಜೀವನ ಸಾಗಿಸಿದರೇ ಅವರ ಆತ್ಮಗೌರವ ಮತ್ತು ಸ್ವಾಭಿಮಾನ ಹೆಚ್ಚಾಗುತ್ತದೆ ಎಂದು ಫಾಜ್ಲೂನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


